image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಏಪ್ರಿಲ್ 28ಕ್ಕೆ ನೇಮ ನಡಾವಳಿ

ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಏಪ್ರಿಲ್ 28ಕ್ಕೆ ನೇಮ ನಡಾವಳಿ

ಪುತ್ತೂರು:ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಪರಭಾವ ನಾಮ ಸಂವತ್ಸರದ ಮೇಷ ಮಾಸ 15ರ ಸಂಕ್ರಮಣದ ಪ್ರಯುಕ್ತ, ಏಪ್ರಿಲ್ 28ರ ಮಂಗಳವಾರದಂದು ಶ್ರೀ ದಂಡನಾಯಕ, ಶ್ರೀ ಉಳ್ಳಾಲ್ತಿ ಮತ್ತು ಪರಿವಾರ ದೈವಗಳ ನೇಮ ನಡಾವಳಿಗಳು ಅತ್ಯಂತ ವೈಭವದಿಂದ ಜರುಗಲಿವೆ.

ಕ್ಷೇತ್ರದಲ್ಲಿ ಏಪ್ರಿಲ್ 20ರಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿದ್ದು, ಏಪ್ರಿಲ್ 20ರಂದು ಗೊನೆ ಕಡಿಯುವುದು, ಏಪ್ರಿಲ್ 25ರಂದು ಮುಂಡ್ಕ ಹಾಕುವುದು ಹಾಗೂ ಏಪ್ರಿಲ್ 26ರ ಭಾನುವಾರ ರಾತ್ರಿ ಎಣ್ಣೆ ಕೊಡುವ ಕಾರ್ಯಕ್ರಮ ನಡೆಯಲಿದೆ. ಏಪ್ರಿಲ್ 27ರ ಸೋಮವಾರದಂದು ಬಲ್ಯಾಡು ಶ್ರೀ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಮಹಾಪೂಜೆ ಮತ್ತು ರಂಗಪೂಜೆ ನಡೆಯಲಿದ್ದು, ಅಂದು ರಾತ್ರಿ ಶ್ರೀ ದೈವಗಳ ಭಂಡಾರ ತೆಗೆಯುವುದು, ತಂಬಿಲ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ.
ಉತ್ಸವದ ಪ್ರಮುಖ ದಿನವಾದ ಏಪ್ರಿಲ್ 28ರ ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದ ಶ್ರೀ ದಂಡನಾಯಕ ದೈವದ ವಾಲಸರಿ ನೇಮ, ಬೆಳಿಗ್ಗೆ 10 ಗಂಟೆಗೆ ಶ್ರೀ ಉಳ್ಳಾಲ್ತಿ ನೇಮ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.

ಅಪರಾಹ್ನ 2 ಗಂಟೆಯ ನಂತರ ಶ್ರೀ ಕಾಳರಾಹು ಮತ್ತು ಶ್ರೀ ಕುಕ್ಕೆತ್ತಿ ದೈವಗಳ ನೇಮ ನಡಾವಳಿಗಳು ಜರುಗಲಿವೆ. ಈ ಎಲ್ಲಾ ದೈವಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ, ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಉತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Category
ಕರಾವಳಿ ತರಂಗಿಣಿ