image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿಗೆ 12 ರ‍್ಯಾಂಕ್‌ಗಳ ಗರಿ

ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿಗೆ 12 ರ‍್ಯಾಂಕ್‌ಗಳ ಗರಿ

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯ ಮಟ್ಟದ ಅಂತಿಮ ಪರೀಕ್ಷೆಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದು, ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಒಟ್ಟು 12 ರ‍್ಯಾಂಕ್‌ಗಳನ್ನು ಬಾಚಿಕೊಂಡಿದ್ದಾರೆ. ಜುಲೈ 2024ರಲ್ಲಿ ನಡೆದ ಪದವಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ರೋಡ್ರಿಗಸ್ ಪ್ರಣೀಲ್ ಮೆಲ್ವಿನ್ ಪ್ರಥಮ ರ‍್ಯಾಂಕ್ ಪಡೆಯುವ ಮೂಲಕ ವಿಶ್ವವಿದ್ಯಾನಿಲಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದು, ಪ್ರತಿಷ್ಠಿತ ಸೀತಾರಾಮ ಜಿಂದಾಲ್ ಗೋಲ್ಡ್ ಮೆಡಲ್ ಗೌರವಕ್ಕೂ ಪಾತ್ರರಾಗಿದ್ದಾರೆ. ಪದವಿ ವಿಭಾಗದಲ್ಲಿ ಅಕ್ಷತಾ ಪಿ. 7ನೇ ರ‍್ಯಾಂಕ್ ಮತ್ತು ದೀಕ್ಷಾ ಬಿ 10ನೇ ರ‍್ಯಾಂಕ್ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.

​ಸ್ನಾತಕೋತ್ತರ ವಿಭಾಗದ ಎಂ.ಡಿ. ಇನ್ ಕ್ಲಿನಿಕಲ್ ನ್ಯಾಚುರೋಪಥಿಯಲ್ಲಿ ಡಾ. ಶಾಲಿನಿ ಪಿ.ವೈ ಪ್ರಥಮ ರ‍್ಯಾಂಕ್ ಪಡೆದರೆ, ಡಾ. ಗ್ರೀಷ್ಮಾ ವಿವೇಕ್ ಆಳ್ವ ದ್ವಿತೀಯ ಹಾಗೂ ಡಾ. ಶ್ರದ್ಧಾ ಎಂ.ಕೆ 9ನೇ ರ‍್ಯಾಂಕ್ ಗಳಿಸಿದ್ದಾರೆ. ಎಂ.ಡಿ. ಇನ್ ಕ್ಲಿನಿಕಲ್ ಯೋಗ ವಿಭಾಗದಲ್ಲಿ ಡಾ. ವಿನಯ್ ಕುಮಾರ್ ಟಿ ದ್ವಿತೀಯ ರ‍್ಯಾಂಕ್, ಡಾ. ಭೂಮಿಕಾ ಬಿ.ಆರ್ 5ನೇ ರ‍್ಯಾಂಕ್, ಡಾ. ಹೋಬಿಜಾಮ್ ಕೇಕೆಸಾನಾ ದೇವಿ ಮತ್ತು ಡಾ. ಮಾರ್ಗರೆಟ್ ಸಲಾಂ ತಲಾ 6ನೇ ರ‍್ಯಾಂಕ್, ಡಾ. ಕಂಚನ್ ಮೈಬಾಮ್ 8ನೇ ರ‍್ಯಾಂಕ್ ಹಾಗೂ ಡಾ. ಕೃಷ್ಣೇಂದು ಪಿ ವಿನಯ್ 10ನೇ ರ‍್ಯಾಂಕ್ ಪಡೆದು ಕಾಲೇಜಿನ ಹೆಗ್ಗಳಿಕೆಯನ್ನು ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳ ಈ ಮಹೋನ್ನತ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ ಆಳ್ವ, ಪ್ರಾಂಶುಪಾಲರು ಹಾಗೂ ಬೋಧಕ ವೃಂದದವರು ಅಭಿನಂದಿಸಿದ್ದಾರೆ.

Category
ಕರಾವಳಿ ತರಂಗಿಣಿ