image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳದಲ್ಲಿ ವೈಭವದ ಕಾಲಾವಧಿ ಜಾತ್ರೆ: ಸಂಪ್ರದಾಯದಂತೆ ಪಡಿಕಾಳು ವಿತರಣೆ

ಧರ್ಮಸ್ಥಳದಲ್ಲಿ ವೈಭವದ ಕಾಲಾವಧಿ ಜಾತ್ರೆ: ಸಂಪ್ರದಾಯದಂತೆ ಪಡಿಕಾಳು ವಿತರಣೆ

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಏಪ್ರಿಲ್ 13 ರಿಂದ 23 ರ ವರೆಗೆ ನಡೆಯುತ್ತಿರುವ ವಾರ್ಷಿಕ ಕಾಲಾವಧಿ ಜಾತ್ರಾ ಮಹೋತ್ಸವವು ಅತ್ಯಂತ ಶ್ರದ್ಧಾ ಭಕ್ತಿಯಿಂದ ಜರುಗುತ್ತಿದೆ. ಕ್ಷೇತ್ರದ ಸಂಪ್ರದಾಯದಂತೆ ಏಪ್ರಿಲ್ 12 ರ ಭಾನುವಾರ ಮಾಯಿನಡಾವಳಿ ನಿಮಿತ್ತ ಹಾಗೂ ಏಪ್ರಿಲ್ 15 ರ ಬುಧವಾರ ಜಾತ್ರೆ ಪ್ರಯುಕ್ತ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಮತ್ತು ಸಂಬಂಧಪಟ್ಟವರಿಗೆ ಪಡಿಕಾಳು ವಿತರಿಸಲಾಯಿತು.

​ಏಪ್ರಿಲ್ 12 ರಂದು ನಡೆದ ಪಡಿಕಾಳು ವಿತರಣೆಯಲ್ಲಿ 5,740 ಕೆ.ಜಿ. ಬೆಳ್ತಿಗೆ ಅಕ್ಕಿ, 1,148 ಲೀಟರ್ ತೆಂಗಿನ ಎಣ್ಣೆ, 460 ಕೆ.ಜಿ. ಮೆಣಸು ಹಾಗೂ ತಲಾ 1,148 ಕೆ.ಜಿ. ಉಪ್ಪು ಮತ್ತು ಪಡಿಕಾಳುಗಳನ್ನು ನೀಡಲಾಯಿತು. ಅದೇ ರೀತಿ ಏಪ್ರಿಲ್ 15 ರಂದು 10,242 ಕೆ.ಜಿ. ಬೆಳ್ತಿಗೆ ಅಕ್ಕಿ, 2,048 ಲೀಟರ್ ತೆಂಗಿನ ಎಣ್ಣೆ, 820 ಕೆ.ಜಿ. ಮೆಣಸು ಹಾಗೂ ತಲಾ 2,048 ಕೆ.ಜಿ. ಉಪ್ಪು ಮತ್ತು ಪಡಿಕಾಳುಗಳನ್ನು ವಿತರಿಸಲಾಯಿತು.

​ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಏಪ್ರಿಲ್ 19 ರ ಭಾನುವಾರ ಕೆರೆಕಟ್ಟೆ ಉತ್ಸವ ನಡೆಯಲಿದೆ. ಏಪ್ರಿಲ್ 20 ರ ಸೋಮವಾರ ರಾತ್ರಿ ಗೌರಿಮಾರು ಕಟ್ಟೆ ಉತ್ಸವ ಹಾಗೂ ಏಪ್ರಿಲ್ 21 ರ ಮಂಗಳವಾರ ರಾತ್ರಿ ಅದ್ಧೂರಿ ಬ್ರಹ್ಮರಥೋತ್ಸವ ಜರುಗಲಿದೆ. ಏಪ್ರಿಲ್ 22 ರ ಬುಧವಾರ ರಾತ್ರಿ ಧ್ವಜ ಅವರೋಹಣ ನೆರವೇರಲಿದ್ದು, ಇದರೊಂದಿಗೆ ಈ ವರ್ಷದ ಕಾಲಾವಧಿ ಜಾತ್ರೆಯು ಅಧಿಕೃತವಾಗಿ ಸಮಾಪನಗೊಳ್ಳಲಿದೆ. ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.

Category
ಕರಾವಳಿ ತರಂಗಿಣಿ