ಮಂಗಳೂರು; ಮನುಷ್ಯರಂತೆ ನೀರು ಇತರ ಪ್ರಾಣಿ,ಪಕ್ಷಿಗಳಿಗೂ ಅಗತ್ಯ.ಮೂಕ ಪ್ರಾಣಿಗಳ ರಕ್ಷಣೆಗೆ ಯುವ ಜನರು ಸೇರಿದಂತೆ ಸಾಮೂಹಿಕ ಪ್ರಯತ್ನ ದ ಅಗತ್ಯವಿದೆ.ಜೀವ-ಜಲ ಅಭಿಯಾನ ಈ ನಿಟ್ಟಿನಲ್ಲಿ ಪ್ರೇರಣೆಯಾಗಲಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಕೆ.ವಿ.ಶುಭ ಹಾರೈಸಿದ್ದಾರೆ.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಪ್ರಜಾ ಸೌಧದ ಬಳಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್, ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್, ಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್, ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ಮಹಾ ನಗರ ಪಾಲಿಕೆ, ಮಂಗಳೂರು ಸ್ಮಾರ್ಟ್ ಸಿಟಿ ಸಹಭಾಗಿತ್ವದಲ್ಲಿ ಜೀವ -ಜಲ ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಿ ಮಾತ ನಾಡುತ್ತಿದ್ದರು.
ಈ ಸಂದರ್ಭದಲ್ಲಿ "ನೀರು ಮಿತವಾಗಿ ಬಳಸಿ,ಬೊಗಸೆ ನೀರು ಇಟ್ಟು ಏರುತ್ತಿರುವ ತಾಪಮಾನದಲ್ಲಿ ಪಶು ಪಕ್ಷಿಗಳ ಜೀವ ಉಳಿಸಿ" ಧ್ಯೇಯದ 'ಜೀವ -ಜಲ 'ಉಳಿಸಿ ಜಾಗೃತಿ ಅಭಿಯಾನದ ಪೋಸ್ಟರ್ ಬಿಡುಗಡೆ
ಯನ್ನು ಜಿಲ್ಲಾಧಿಕಾರಿ ನೆರವೇರಿಸಿ ವಿದ್ಯಾರ್ಥಿ ಗಳಿಗೆ ನೀರಿನ ಕಿರು ತೊಟ್ಟಿಯನ್ನು ವಿತರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿ ಕಾರಿ ರಾಜು,ರೋಟರಿ 3181 (ಚು) ಜಿಲ್ಲಾ ಗವರ್ನರ್ ಶೇಖರ ಬೋಳಾರ, ಅಸಿಸ್ಟೆಂಟ್ ಗವರ್ನರ್ ಚಿನ್ನಗಿರಿ ಗೌಡ,ಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್ ನ ನಿರ್ದೇಶಕ ಮತ್ತು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯ ಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ರೋಟರಿ ಕ್ಲಬ್ ಮಂಗ ಳೂರು ಸೆಂಟ್ರಲ್ ನ ನಿಕಟ ಪೂರ್ವ ಅಧ್ಯಕ್ಷ ಬ್ರಿಯಾನ್ ಪಿಂಟೊ, ಕಾರ್ಯದರ್ಶಿ ವಿಕಾಸ್ ಕೋಟ್ಯಾನ್, ರೋ.ಡಾ.ಶಿವ ಪ್ರಸಾದ್ , ರೋ.ಪ್ರದೀಪ್ ಕುಲಾಲ್ ಮೊದಲಾದ
ವರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ನ
ಅಧ್ಯಕ್ಷ ಭಾಸ್ಕರ ರೈ ಕಟ್ಟ ಸ್ವಾಗತಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್ ವಂದಿಸಿದರು.