ಪುತ್ತೂರು : ಪುತ್ತೂರು ತಾಲೂಕಿನ ಇರ್ದೆ, ಬೈಲಾಡಿ ಮತ್ತು ಬೆಂದ್ರ್ತೀರ್ಥ ವ್ಯಾಪ್ತಿಯ ಪವಿತ್ರ ಕ್ಷೇತ್ರವಾದ ಶ್ರೀ ವಿಷ್ಣುಮೂರ್ತಿ ದೇವಾಲಯ ಗೋಪಾಲಕ್ಷೇತ್ರದಲ್ಲಿ ಸುಮಾರು 3.50 ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯ ಜೀರ್ಣೋದ್ಧಾರ ಕಾರ್ಯಗಳು ನಡೆಯಲಿದ್ದು, ಈ ಸಂಬಂಧ ಏಪ್ರಿಲ್ 18, 2026ರ ಶನಿವಾರದಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇವಸ್ಥಾನದ ಅಭಿವೃದ್ಧಿಗಾಗಿ ರಚಿಸಲಾಗಿರುವ ನೂತನ ಜೀರ್ಣೋದ್ಧಾರ ಸಮಿತಿಯನ್ನು ಪುತ್ತೂರಿನ ಜನಪ್ರಿಯ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಅವರು ಅಂದು ಪೂರ್ವಾಹ್ನ 11:00 ಗಂಟೆಗೆ ಅಧಿಕೃತವಾಗಿ ಘೋಷಿಸಲಿದ್ದಾರೆ.
ಜೀರ್ಣೋದ್ಧಾರ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲು ಅಂದು ಮಧ್ಯಾಹ್ನ 12:00 ಗಂಟೆಗೆ ಶ್ರೀದೇವರಿಗೆ ಸಾಮೂಹಿಕ 'ಹಾಲು ಪಾಯಸ ಸೇವೆ' ಹಾಗೂ ರಾತ್ರಿ 8:00 ಗಂಟೆಗೆ ವಿಶೇಷ ಸಂಕಲ್ಪದೊಂದಿಗೆ 'ಸಾರ್ವಜನಿಕ ರಂಗಪೂಜೆ ಸೇವೆ' ನಡೆಯಲಿದೆ.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ವಿಠಲ ರೈ ಬಾಲ್ಯೊಟ್ಟುಗುತ್ತು, ಪ್ರಧಾನ ಕಾರ್ಯದರ್ಶಿ ಶುಭಕರ ರೈ ಬೈಲಾಡಿ, ಸಂಚಾಲಕ ರಾಧಾಕೃಷ್ಣ ರೈ ಬಾಲ್ಯೊಟ್ಟುಗುತ್ತು ಮತ್ತು ಕಾರ್ಯದರ್ಶಿ ವತ್ಸಲಾ ರಾಜಾರಾಮ ಭಟ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀದೇವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಲಾಗಿದೆ.