ಮಂಗಳೂರು : ದಸರಾ ಬಹುಭಾಷಾ ಕವಿಗೋಷ್ಠಿಯು ಅ.8ರ ಮಂಗಳವಾರ ಅಪರಾಹ್ನ 3.00 ಗಂಟೆಗೆ ಮಂಗಳೂರಿನ ಉರ್ವಾ ಸ್ಟೋರ್ ನಲ್ಲಿರುವ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನದಲ್ಲಿ ನಡೆಯಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳು ಪರಿಷತ್, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಹಾಗೂ ಮಯೂರಿ ಫೌಂಡೇಶನ್ ಜಂಟಿಯಾಗಿ ಮೂರನೇ ವರ್ಷದ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ಆಯೋಜಿಸಿದೆ.
ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯ 12 ಭಾಷೆಗಳ ಕವಿಗಳು ಕವಿತೆ ವಾಚಿಸಲಿದ್ದಾರೆ. ಪ್ರಾಧ್ಯಾಪಕಿ ಹಾಗೂ ಸಾಹಿತಿ ಡಾ.ನಿಕೇತನ ಉಡುಪಿ ಅವರು ಕವಿಗೋಷ್ಠಿಯನ್ನು ಉದ್ಘಾಟಿಸುವರು . ಹಿರಿಯ ಸಾಹಿತಿ ಕಾಸರಗೋಡಿನ ರಾಧಾಕೃಷ್ಣ ಉಳಿಯತ್ತಡ್ಕ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವರು .
ಮಯೂರಿ ಫೌಂಡೇಶನ್ ಅಧ್ಯಕ್ಷ ಜಯ ಕೆ. ಶೆಟ್ಟಿ ಮುಂಬಯಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು .ಗೀತಾ ಜೈನ್ (ತುಳು), ಪ್ರಮೀಳಾ ರಾಜ್ ಸುಳ್ಯ (ಕನ್ನಡ), ಚಂದ್ರಾವತಿ ಬಡ್ಡಡ್ಕ (ಅರೆಭಾಷೆ), ಬಾಬು ಕೊರಗ ಪಾಂಗಾಳ (ಕೊರಗ ಭಾಷೆ) ಮಂಜುನಾಥ್ ಗುಂಡ್ಮಿ(ಕುಂದಾಪುರ ಕನ್ನಡ), ಜ್ಯೋತಿ ರವಿರಾಜ್ (ಹವ್ಯಕ ಕನ್ನಡ), ಆಕೃತಿ ಭಟ್ ( ಶಿವಳ್ಳಿ ತುಳು), ಶರೀಫ್ ನೀರ್ಮುಂಜೆ(ಬ್ಯಾರಿ), ಡಾ.ಪ್ಲೇವಿಯಾ ಕ್ಯಾಸ್ಟಲಿನೋ (ಕೊಂಕಣಿ), ರಾಜನ್ ಮುನಿಯೂರು( ಮಲಯಾಳ), ಸಿಯಾನ ಬಿ.ಎಂ.(ಬ್ಯಾರಿ), ಫೆಲ್ಸಿ ಲೊಬೋ ದೇರೆಬೈಲ್ (ಕೊಂಕಣಿ), ಶರ್ಮಿಳಾ ಬಜಕೂಡ್ಳು(ಮರಾಟಿ), ಶ್ರೀನಿವಾಸ ಪೆರಿಕ್ಕಾನ(ಕರಾಡ) ಅವರು ಕವಿಗೋಷ್ಠಿಯಲ್ಲಿ ಭಾಗವಹಿಸುವರು ಎಂದು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಪ್ರಕಟಣೆ ತಿಳಿಸಿದ್ದಾರೆ.