image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜಪ್ಪಿನಮೊಗರು ಶ್ರೀ ವೈದ್ಯನಾಥ ಆಟೋ ಪಾರ್ಕ್‌ಗೆ ನೂತನ ಮೇಲ್ಛಾವಣಿ ಹಾಗೂ ಇಂಟರ್‌ಲಾಕ್ ಲೋಕಾರ್ಪಣೆ

ಜಪ್ಪಿನಮೊಗರು ಶ್ರೀ ವೈದ್ಯನಾಥ ಆಟೋ ಪಾರ್ಕ್‌ಗೆ ನೂತನ ಮೇಲ್ಛಾವಣಿ ಹಾಗೂ ಇಂಟರ್‌ಲಾಕ್ ಲೋಕಾರ್ಪಣೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 54ನೇ ಜಪ್ಪಿನಮೊಗರು ವಾರ್ಡಿನ ಶ್ರೀ ವೈದ್ಯನಾಥ ಆಟೋ ಪಾರ್ಕ್‌ಗೆ ನೂತನವಾಗಿ ಅಳವಡಿಸಲಾದ ಮೇಲ್ಛಾವಣಿ ಹಾಗೂ ಇಂಟರ್‌ಲಾಕ್ ವ್ಯವಸ್ಥೆಯನ್ನು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಶಾಸಕರು, "ಆಟೋ ಚಾಲಕರು ಶ್ರಮಿಕ ವರ್ಗದವರಾಗಿದ್ದು, ತಮ್ಮ ಜೀವನೋಪಾಯದ ಜೊತೆಗೆ ಪ್ರಯಾಣಿಕರ ಹಿತದೃಷ್ಟಿಯಿಂದಲೂ ಶ್ರಮಿಸುತ್ತಾರೆ. ಸದ್ಯ ವಿಪರೀತ ಬಿಸಿಲಿರುವ ಕಾರಣ, ಆಟೋರಿಕ್ಷಾಗಳನ್ನು ಬಿಡುವಿನ ವೇಳೆ ನೆರಳಿನಲ್ಲಿ ನಿಲ್ಲಿಸಲು ಸೂಕ್ತ ವ್ಯವಸ್ಥೆ ಬೇಕೆಂಬ ಅವರ ಬೇಡಿಕೆಯಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿ ಸುಸಜ್ಜಿತ ಮೇಲ್ಛಾವಣಿ ಹಾಗೂ ಇಂಟರ್‌ಲಾಕ್ ಅಳವಡಿಸಲಾಗಿದೆ. ಚಾಲಕ ಬಂಧುಗಳಿಗೆ ಈ ಸೌಲಭ್ಯ ಅನುಕೂಲಕರವಾದರೆ ನಮಗೆ ತೃಪ್ತಿ ನೀಡುತ್ತದೆ" ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ನಿಕಟಪೂರ್ವ ಪಾಲಿಕೆ ಸದಸ್ಯೆ ವೀಣಾ ಮಂಗಳಾ, ದಕ್ಷಿಣ ಮಹಾ ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ರಾಮ್ ಪ್ರಸಾದ್, ಜಪ್ಪಿನಮೊಗರು ಶಕ್ತಿ ಕೇಂದ್ರ ಪ್ರಮುಖ್ ಕೀರ್ತೇಶ್ ಅಮೀನ್, ಆರಕ್ಷಕರಾದ ಗಂಗಾಧರ್ ಹಾಗೂ ಪ್ರಮುಖರಾದ ಸುರೇಂದ್ರ ಜೆ., ಪುಷ್ಪರಾಜ್ ಅಮೀನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವೈದ್ಯನಾಥ ಆಟೋ ಪಾರ್ಕ್ ಅಧ್ಯಕ್ಷರಾದ ಗಂಗಾಧರ್ ಸೇರಿದಂತೆ ವಲಯದ ಹಲವಾರು ಆಟೋ ಚಾಲಕರು ಹಾಗೂ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.

Category
ಕರಾವಳಿ ತರಂಗಿಣಿ