image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅತ್ತಾವರ ವಾರ್ಡ್‌ನ ಬಾಬುಗುಡ್ಡೆ 3ನೇ ಅಡ್ಡರಸ್ತೆ ಕಾಂಕ್ರೀಟೀಕರಣಕ್ಕೆ ಚಾಲನೆ: ಶಾಸಕ ವೇದವ್ಯಾಸ ಕಾಮತ್ ಭೂಮಿ ಪೂಜೆ

ಅತ್ತಾವರ ವಾರ್ಡ್‌ನ ಬಾಬುಗುಡ್ಡೆ 3ನೇ ಅಡ್ಡರಸ್ತೆ ಕಾಂಕ್ರೀಟೀಕರಣಕ್ಕೆ ಚಾಲನೆ: ಶಾಸಕ ವೇದವ್ಯಾಸ ಕಾಮತ್ ಭೂಮಿ ಪೂಜೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 55ನೇ ಅತ್ತಾವರ ವಾರ್ಡಿನ ಬಾಬುಗುಡ್ಡೆ 3ನೇ ಅಡ್ಡರಸ್ತೆಯ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಅವರು ಭೂಮಿ ಪೂಜೆ ನೆರವೇರಿಸಿದರು. ಈ ಕಾಮಗಾರಿಯು ಒಟ್ಟು 26 ಲಕ್ಷ ರೂ.ಗಳ ವಿಶೇಷ ಅನುದಾನದಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, "ಹಿಂದೆ ಇಂಟರ್ ಲಾಕ್ ನಿಂದ ನಿರ್ಮಿಸಲಾಗಿದ್ದ ಈ ರಸ್ತೆಯು ಹದಗೆಟ್ಟಿತ್ತು. ಇದನ್ನು ಕಾಂಕ್ರೀಟೀಕರಣಗೊಳಿಸಬೇಕೆಂದು ಸ್ಥಳೀಯರು ಹಲವು ಕಾಲದಿಂದ ಬೇಡಿಕೆ ಇಟ್ಟಿದ್ದರು. ಸಾರ್ವಜನಿಕರ ಹಿತದೃಷ್ಟಿಯಿಂದ ಇದೀಗ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ-2 ರಡಿ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಶೀಘ್ರದಲ್ಲಿಯೇ ಈ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ," ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಪಾಲಿಕೆ ಸದಸ್ಯ ಶೈಲೇಶ್ ಬಿ. ಶೆಟ್ಟಿ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೆಶ್ ಕುಮಾರ್, ಪಶ್ಚಿಮ ಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ್ ಪೂಜಾರಿ, ವಾರ್ಡ್ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಹಾಗೂ ಬೂತ್ ಅಧ್ಯಕ್ಷರುಗಳಾದ ಪ್ರಮೋದ್ ಕೊಟ್ಟಾರಿ, ದಿನೇಶ್ ಕುಲಾಲ್, ಶ್ರೀಧರ್ ಆಚಾರ್ಯ ಉಪಸ್ಥಿತರಿದ್ದರು.
ಅಲ್ಲದೆ ಕಾರ್ಯದರ್ಶಿಗಳಾದ ಶಾಂತಪ್ಪ, ಲೋಕೇಶ್, ನಾರಾಯಣ ಕುಂದರ್, ಹಿರಿಯ ಕಾರ್ಯಕರ್ತರಾದ ಪುಂಡಲೀಕ ಸುವರ್ಣ, ನಾರಾಯಣ ಶೆಟ್ಟಿ, ಮಂಡಲದ ಪದಾಧಿಕಾರಿ ಲಲಿತಾ, ಕಾರ್ಯಕರ್ತರಾದ ನೀತಾ, ತರುಣ್, ಪ್ರವೀಣ್ ಪಟ್ನ ಸತೀಶ್, ಮಧು ಕುಲಾಲ್, ಪ್ರೇಮಲತಾ ನಾಯ್ಕ, ಶ್ರೀದೇವಿ ಹಾಗೂ ಸ್ಥಳೀಯರಾದ ಹೊನ್ನಯ್ಯ, ದಯಾಕರ್, ಗಣೇಶ್, ದೇವದಾಸ್ ಬೋಳೂರ್, ಸುಂದರ್, ಪ್ರದೀಪ್, ಗ್ವಾಡ್ವಿನ್, ನಟರಾಜ್ ಸೇರಿದಂತೆ ಕುದ್ಮುಲ್ ರಂಗ ರಾವ್ ಎಜುಕೇಷನಲ್ ಟ್ರಸ್ಟನ ಅಧ್ಯಕ್ಷ ಹೃದಯನಾಥ್, ಉಪಾಧ್ಯಕ್ಷ ಶ್ಯಾಮ ಕರ್ಕೇರ, ವಸಂತ್ ಬಂಗೇರ, ಪ್ರಸನ್ನ ಮೊದಲಾದವರು ಭಾಗವಹಿಸಿದ್ದರು.

Category
ಕರಾವಳಿ ತರಂಗಿಣಿ