image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹುಲಿಕುಣಿತ ವೀಕ್ಷಿಸಿ ಖುಷಿಪಟ್ಟ ರಕ್ಷಿತಾ ಪ್ರೇಮ್ ದಂಪತಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹುಲಿಕುಣಿತ ವೀಕ್ಷಿಸಿ ಖುಷಿಪಟ್ಟ ರಕ್ಷಿತಾ ಪ್ರೇಮ್ ದಂಪತಿ

ಸುಬ್ರಹ್ಮಣ್ಯ: ಕನ್ನಡ ಚಿತ್ರರಂಗದ ಜನಪ್ರಿಯ ತಾರಾ ದಂಪತಿ ಪ್ರೇಮ್ ಹಾಗೂ ರಕ್ಷಿತಾ ಪ್ರೇಮ್ ಅವರು ಗುರುವಾರ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿದ್ದಾರೆ. ದೇವರ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು.

ಪೂಜೆಯ ನಂತರ ಹೊರಡುವ ಸಂದರ್ಭದಲ್ಲಿ ಹುಲಿ ವೇಷಧಾರಿಗಳನ್ನು ಕಂಡು ಕಾರಿನಿಂದಿಳಿದರು. ನವರಾತ್ರಿಯ ವಿಶೇಷ ದಿನದಂದು ಕರಾವಳಿಯಲ್ಲಿ ಪ್ರಸಿದ್ದಿ ಪಡೆದಿರುವ ಹುಲಿ ವೇಷಧಾರಿಗಳು ದೇವಸ್ಥಾನದ ಬಳಿ ಇದ್ದರು.

ತಕ್ಷಣ ಸುಬ್ರಹ್ಮಣ್ಯದ ಖ್ಯಾತ ಫೋಟೋಗ್ರಾಫರ್ ಸಂತೋಷ್ ನೂಚಿಲ ಅವರು ರಕ್ಷಿತಾ ಪ್ರೇಮ್ ದಂಪತಿಗೆ ಹುಲಿ ಕುಣಿತವನ್ನು ವೀಕ್ಷಿಸಲು ವ್ಯವಸ್ಥೆ ಮಾಡಿದರು. ಹುಲಿ ವೇಷಧಾರಿಗಳ ನರ್ತನ ಕಂಡು ರಕ್ಷಿತಾ ಪ್ರೇಮ್ ದಂಪತಿ ಬಹಳ ಹರ್ಷ ವ್ಯಕ್ತಪಡಿಸಿದರು. ಈ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ, ಎಲ್ಲ ಹುಲಿ ವೇಷಧಾರಿಗಳಿಗೂ ಶುಭಾಶಯ ಕೋರಿದರು.

Category
ಕರಾವಳಿ ತರಂಗಿಣಿ