image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ ರತ್ನತ್ರಯ ಜೈನ ಬಸದಿಯಲ್ಲಿ 12ನೇ ವಾರ್ಷಿಕೋತ್ಸವ: ಲಘುಸಿದ್ಧಚಕ್ರ ಯಂತ್ರಾರಾಧನೆ

ಬೆಳ್ತಂಗಡಿ ರತ್ನತ್ರಯ ಜೈನ ಬಸದಿಯಲ್ಲಿ 12ನೇ ವಾರ್ಷಿಕೋತ್ಸವ: ಲಘುಸಿದ್ಧಚಕ್ರ ಯಂತ್ರಾರಾಧನೆ

ಉಜಿರೆ: ಇಲ್ಲಿನ ಜೈನಪೇಟೆಯ ರತ್ನತ್ರಯ ಜೈನ ತೀರ್ಥಕ್ಷೇತ್ರದಲ್ಲಿ ಮಂಗಳವಾರ ಪೂಜ್ಯ ಏಲಾಚಾರ್ಯ ಪ್ರಸಂಗಸಾಗರ ಮುನಿಮಹಾರಾಜರ ದಿವ್ಯ ಸಾನ್ನಿಧ್ಯದಲ್ಲಿ ಬಸದಿಯ 12ನೇ ವಾರ್ಷಿಕೋತ್ಸವ ಹಾಗೂ ಲಘುಸಿದ್ಧಚಕ್ರ ಯಂತ್ರಾರಾಧನೆಯು ವೈಭವದಿಂದ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೋರಣ ಮುಹೂರ್ತ ಮತ್ತು ವಿಮಾನಶುದ್ಧಿ ಕಾರ್ಯಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಈ ಸಂದರ್ಭದಲ್ಲಿ ಭಗವಾನ್ ಮಹಾವೀರಸ್ವಾಮಿ ಮೂರ್ತಿಗೆ ಭಕ್ತಿಯಿಂದ ಪಂಚಾಮೃತಾಭಿಷೇಕ ಮಾಡಲಾಯಿತು. ಭಗವಾನ್ ಶಾಂತಿನಾಥಸ್ವಾಮಿಗೆ 108 ಕಲಶಗಳಿಂದ ಅಭಿಷೇಕ ನೆರವೇರಿಸಿದ್ದು ವಿಶೇಷವಾಗಿತ್ತು. ಕ್ಷೇತ್ರದ ಮೂರೂ ಬಸದಿಗಳಲ್ಲಿ ಪಂಚಾಮೃತಾಭಿಷೇಕಗಳು ನಡೆದವು. ಮಹಾಮಾತೆ ಪದ್ಮಾವತಿ ದೇವಿಗೆ ವಿಶೇಷ ಅಲಂಕಾರ ಪೂಜೆ ಹಾಗೂ ಬ್ರಹ್ಮಯಕ್ಷ ದೇವರಿಗೆ ವಿಶೇಷ ಅರ್ಚನೆಗಳನ್ನು ಸಲ್ಲಿಸಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು.

​ಬಸದಿಯ ಪ್ರಧಾನ ಅರ್ಚಕರಾದ ಜಯರಾಜ ಇಂದ್ರ ಅವರ ನೇತೃತ್ವದಲ್ಲಿ ಸಹಪುರೋಹಿತರು ಪೂಜಾ ವಿಧಿ-ವಿಧಾನಗಳನ್ನು ವ್ಯವಸ್ಥಿತವಾಗಿ ನೆರವೇರಿಸಿಕೊಟ್ಟರು. ಧಾರ್ಮಿಕ ಸಭೆಯ ನಡುವೆ ಜಯಶ್ರೀ ಹೊರನಾಡು ಮತ್ತು ಬಳಗದವರಿಂದ ನಡೆದ ಸುಶ್ರಾವ್ಯ ಜೈನ ಭಕ್ತಿ ಗಾಯನ ಕಾರ್ಯಕ್ರಮವು ಭಕ್ತಾದಿಗಳ ಮನಸೂರೆಗೊಂಡಿತು. ಈ ಸಂಭ್ರಮದ ಕ್ಷಣದಲ್ಲಿ ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆ. ಜಯವರ್ಮರಾಜ ಬಳ್ಳಾಲ್ ಮತ್ತು ಕುಟುಂಬಸ್ಥರು ಭಾಗವಹಿಸಿದ್ದರು. ಅತಿಥಿಗಳಾಗಿ ಡಾ. ಕೆ. ಜೀವಂಧರ ಬಳ್ಳಾಲ್, ಕೆ. ರಾಜವರ್ಮ ಬಳ್ಳಾಲ್, ಡಾ. ಮಾಲತಿ ಹೆಗ್ಡೆ, ಡಾ. ಪ್ರಿಯಾ ಬಳ್ಳಾಲ್ ಸೇರಿದಂತೆ ಹಲವಾರು ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದು ತೀರ್ಥಂಕರರ ಕೃಪೆಗೆ ಪಾತ್ರರಾದರು.

Category
ಕರಾವಳಿ ತರಂಗಿಣಿ