image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಿಲಿಕುಳದಲ್ಲಿ ಏಪ್ರಿಲ್ 6 ರಂದು ಮಕ್ಕಳಿಗಾಗಿ ಫನ್ ಸೈಕಲ್ ರೈಡ್ ಆಯೋಜನೆ

ಪಿಲಿಕುಳದಲ್ಲಿ ಏಪ್ರಿಲ್ 6 ರಂದು ಮಕ್ಕಳಿಗಾಗಿ ಫನ್ ಸೈಕಲ್ ರೈಡ್ ಆಯೋಜನೆ

ಮಂಗಳೂರು:  ಕೊಡಿಯಾಲ್‌ಬೈಲ್‌ನ ಯುರೋಕಿಡ್ಸ್ ಸಂಸ್ಥೆಯು ಮಂಗಳೂರು ಸೈಕಲ್ ಕೋ ಮತ್ತು ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ 'ಸೈಕ್ಲಿಂಗ್ ಭಟ್ರು' ಅವರ ಸಹಯೋಗದೊಂದಿಗೆ ಏಪ್ರಿಲ್ 6ರ ಸೋಮವಾರದಂದು ಪಿಲಿಕುಳ ಹೆರಿಟೇಜ್ ಹೌಸ್‌ನಲ್ಲಿ ಮಕ್ಕಳಿಗಾಗಿ ವಿಶೇಷ 'ಫನ್ ಸೈಕಲ್ ರೈಡ್' ಅನ್ನು ಹಮ್ಮಿಕೊಂಡಿದೆ ಎಂದು ಯುರೋಕಿಡ್ಸ್ ಕೊಡಿಯಾಲ್‌ಬೈಲ್‌ನ ವ್ಯವಸ್ಥಾಪಕ ಪಾಲುದಾರರಾದ ಆರತಿ ಶೆಟ್ಟಿ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ,  ಅಂದು ಬೆಳಿಗ್ಗೆ 9:00 ರಿಂದ 11:00 ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ಶ್ರೀ ದರ್ಶನ್ ಅವರು ಈ ಸೈಕಲ್ ಜಾಥಾವನ್ನು ಉದ್ಘಾಟಿಸಲಿದ್ದಾರೆ ಎಂದರು. 

ಬೇಸಿಗೆ ರಜೆಯ ಸಂದರ್ಭದಲ್ಲಿ ಮಕ್ಕಳಿಗೆ ಆರೋಗ್ಯಕರ ಜೀವನಶೈಲಿ ಮತ್ತು ದೈಹಿಕ ಚಟುವಟಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,  ಪಿಲಿಕುಳದ ಸುಂದರ ಮರಗಿಡಗಳ ನಡುವಿನ ಟ್ರಾಫಿಕ್ ಮುಕ್ತ ರಸ್ತೆಯಲ್ಲಿ ಸುರಕ್ಷಿತವಾಗಿ ಸೈಕಲ್ ಚಲಾಯಿಸಲು ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ. ಎರಡು ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳು ತಮ್ಮ ಪೋಷಕರೊಂದಿಗೆ ಈ ಸೈಕಲ್ ಸವಾರಿಯಲ್ಲಿ ಭಾಗವಹಿಸಬಹುದಾಗಿದೆ.
ಭಾಗವಹಿಸುವ ಎಲ್ಲಾ ಮಕ್ಕಳಿಗೆ ಹಣ್ಣು-ಹಂಪಲುಗಳನ್ನು ವಿತರಿಸಲಾಗುವುದು ಮತ್ತು ಪ್ರತಿಯೊಬ್ಬರಿಗೂ ಪ್ರಮಾಣಪತ್ರ ಹಾಗೂ ವಿಶೇಷ ಉಡುಗೊರೆಯನ್ನು ನೀಡಲಾಗುವುದು ಎಂದರು.

Category
ಕರಾವಳಿ ತರಂಗಿಣಿ