image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಪ್ರಿಲ್ 12 ರಿಂದ 19ರ ವರೆಗೆ ರಾಜ್ಯಮಟ್ಟದ 'ಆಳ್ವಾಸ್ ಚಿಣ್ಣರಮೇಳ' ಬೇಸಿಗೆ ಶಿಬಿರ

ಎಪ್ರಿಲ್ 12 ರಿಂದ 19ರ ವರೆಗೆ ರಾಜ್ಯಮಟ್ಟದ 'ಆಳ್ವಾಸ್ ಚಿಣ್ಣರಮೇಳ' ಬೇಸಿಗೆ ಶಿಬಿರ

ಮೂಡುಬಿದಿರೆ : ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ಎಪ್ರಿಲ್ 12 ರಿಂದ 19ರ ವರೆಗೆ ರಾಜ್ಯಮಟ್ಟದ 'ಆಳ್ವಾಸ್ ಚಿಣ್ಣರಮೇಳ' ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಮೂಡುಬಿದಿರೆಯ ಸ್ಕೌಟ್ ಗೈಡ್ಸ್ ಕನ್ನಡ ಭವನದಲ್ಲಿ ಈ ಅಭಿನಯ ಪ್ರಧಾನ ಶಿಬಿರವು ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 9:00 ರಿಂದ ಸಂಜೆ 4:30ರ ವರೆಗೆ ವೈವಿಧ್ಯಮಯ ಚಟುವಟಿಕೆಗಳು ಜರುಗಲಿವೆ. ಪ್ರಸಿದ್ಧ ರಂಗನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ಅವರ ರಂಗ ಬದುಕಿನ 35ನೇ ವರ್ಷದ ವಿಶೇಷ ಶಿಬಿರ ಇದಾಗಿದ್ದು, ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಅಂಶಗಳಿಗೆ ಇಲ್ಲಿ ಒತ್ತು ನೀಡಲಾಗುವುದು.

​ಈ ಶಿಬಿರದಲ್ಲಿ 7 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಭಾಗವಹಿಸಲು ಅವಕಾಶವಿದ್ದು, ನೀನಾಸಂ ಹಾಗೂ ರಂಗಾಯಣದ ನುರಿತ ರಂಗ ಪದವೀಧರರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲಿದ್ದಾರೆ. ಶಿಬಿರಾರ್ಥಿಗಳಿಗೆ ಊಟ, ಉಪಹಾರ ಹಾಗೂ ದೂರದ ಊರುಗಳಿಂದ ಬರುವ ಮಕ್ಕಳಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ತಿಳಿಸಿದ್ದಾರೆ. ಜೀವನದಲ್ಲಿ ಸಂವಹನ ಕಲೆ ಮತ್ತು ಆತ್ಮಸ್ಥೈರ್ಯವನ್ನು ಬೆಳೆಸುವಲ್ಲಿ ಅಭಿನಯದ ಪಾತ್ರ ಮುಖ್ಯವಾದುದು. ಈ ಶಿಬಿರವು ಮಕ್ಕಳಲ್ಲಿ ಶಿಸ್ತು, ಮಾತುಗಾರಿಕೆ ಮತ್ತು ಪ್ರತಿಭೆಯನ್ನು ಹೊರಹಾಕಲು ಉತ್ತಮ ವೇದಿಕೆಯಾಗಲಿದೆ ಎಂದು ಡಾ. ಜೀವನ್ ರಾಂ ಸುಳ್ಯ ಆಶಯ ವ್ಯಕ್ತಪಡಿಸಿದ್ದಾರೆ. ಆಸಕ್ತ ಪೋಷಕರು ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರು ನೋಂದಾಯಿಸಲು 9448989382, 9448215946 ಅಥವಾ 9108238937 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Category
ಕರಾವಳಿ ತರಂಗಿಣಿ