image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೆನರಾ ಕಾಲೇಜು ವಿದ್ಯಾರ್ಥಿಗಳ ಸ್ಟಾರ್ಟ್‌ಅಪ್‌ಗೆ ರಾಜ್ಯ ಮಟ್ಟದ ಮನ್ನಣೆ

ಕೆನರಾ ಕಾಲೇಜು ವಿದ್ಯಾರ್ಥಿಗಳ ಸ್ಟಾರ್ಟ್‌ಅಪ್‌ಗೆ ರಾಜ್ಯ ಮಟ್ಟದ ಮನ್ನಣೆ

ಮಂಗಳೂರು: ಕೆನರಾ ಎಂಜಿನಿಯರಿಂಗ್ ಕಾಲೇಜಿನ ಸ್ಟಾರ್ಟ್‌ಅಪ್ ಇಂಕ್ಯುಬೇಶನ್ ಕೇಂದ್ರವಾದ ಕೆನರಾ ಇನೋವೇಷನ್ ಫೌಂಡೇಶನ್ (CIF) ಮೂಲಕ ಬೆಳೆದು ಬಂದ ಸಮೃದ್ಧಿ ಆರ್ಗಾನಿಕ್ಸ್ ಎಂಬ ವಿದ್ಯಾರ್ಥಿ ಸ್ಟಾರ್ಟ್‌ಅಪ್ ಮಹತ್ವದ ಸಾಧನೆ ಮಾಡಿದೆ. ಕಾಲೇಜಿನ ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ವಿಭಾಗದ ತೃತೀಯ ವರ್ಷದ ವಿದ್ಯಾರ್ಥಿ ಸಾಥ್ವಿಕ್ ಕೃಷ್ಣ ಸಮೃದ್ಧಿ ಆರ್ಗಾನಿಕ್ಸ್ ನೇತೃತ್ವ ವಹಿಸಿದ್ದು, ಅದೇ ವಿಭಾಗದ ವಿದ್ಯಾರ್ಥಿಗಳಾದ ಸುಹಾನ್, ಧನುಷ್ ಮತ್ತು ಶಾನ್ ಡಿಸೋಜಾ ತಂಡದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ತಂಡ ಕೃಷಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರೈತರ ಭೂಮಿಯಿಂದ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಅವುಗಳ ವಿಶ್ಲೇಷಣೆಯ ಆಧಾರದಲ್ಲಿ ಗೊಬ್ಬರ ಸಲಹೆ ನೀಡುವ ಸರಳ ಹಾಗೂ ಪರಿಣಾಮಕಾರಿ ವಿಧಾನವನ್ನು ಅನುಸರಿಸುತ್ತಿದೆ. ಮಂಗಳೂರಿನ ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಮಾರ್ಚ್ 28 ಮತ್ತು 29 ರಂದು ನಡೆದ ನಿಟ್ಟೆ–ಎಂಆರ್‌ಪಿಎಲ್ ಕೋಸ್ಟಲ್ ಸ್ಟಾರ್ಟ್‌ಅಪ್ ಫೆಸ್ಟ್ 2026ರಲ್ಲಿ 70ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳ ಮಧ್ಯೆ ಸಮೃದ್ಧಿ ಆರ್ಗಾನಿಕ್ಸ್ ಅಗ್ರ 11ರಲ್ಲಿ ಸ್ಥಾನ ಪಡೆದು ಪ್ರದರ್ಶನದಲ್ಲಿ ತಂತ್ರಜ್ಞರು, ಕೃಷಿಕರು ಮತ್ತು ಸಾರ್ವಜನಿಕರ ಗಮನ ಸೆಳೆದಿದೆ.
ಕೆನರಾ ಹೈ ಸ್ಕೂಲ್ ಅಸೋಸಿಯೇಷನ್ ವತಿಯಿಂದ ವಿದ್ಯಾರ್ಥಿ ಸಮುದಾಯದಲ್ಲಿ ನವೀನತೆ ಮತ್ತು ಸ್ಟಾರ್ಟ್‌ಅಪ್ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಆರಂಭಮಾಡಿರುವ ಕೆನರಾ ಇನೋವೇಷನ್ ಫೌಂಡೇಷನ್‌ಗೇ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಡಾ. ಉದಯ ಕುಮಾರ್ ಕೆ. ಶೆಣೈ ಅವರು ಮಾರ್ಗದರ್ಶನ ನೀಡುತ್ತಿದ್ದಾರೆ. ಸಿಐಎಫ್‌ನ ಸ್ಟಾರ್ಟ್‌ಅಪ್‌ಗಳ ಸಲಹಕಾರರಾಗಿ ಮುನ್ನಡೆಸುತ್ತಿರುವ CIF ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರಶಾಂತ್ ಕುಮಾರ್ ಎ ಅವರು ತಂಡದ ಸಾಧನೆಯನ್ನು ಅಭಿನಂದಿಸಿದ್ದಾರೆ.

Category
ಕರಾವಳಿ ತರಂಗಿಣಿ