image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೊಕ್ಕಪಟ್ಲ ಸರಕಾರಿ ಶಾಲೆಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ‘ಹರಿದ್ವರ್ಣ’ ಕಿರುಚಿತ್ರದ 29ನೇ ಪ್ರದರ್ಶನ

ಬೊಕ್ಕಪಟ್ಲ ಸರಕಾರಿ ಶಾಲೆಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ‘ಹರಿದ್ವರ್ಣ’ ಕಿರುಚಿತ್ರದ 29ನೇ ಪ್ರದರ್ಶನ

ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಹಾಗೂ ಬೊಕ್ಕಪಟ್ಲದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹಭಾಗಿತ್ವದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ಕಿರುಚಿತ್ರ ‘ಹರಿದ್ವರ್ಣ’ (ರಕ್ಷತಿ ರಕ್ಷಿತಃ) ಇದರ 29ನೇ ಪ್ರದರ್ಶನವು ಮಾರ್ಚ್ 28ರಂದು ಶಾಲಾ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.

​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೊ. ಭಾಸ್ಕರ್ ರೈ ಕಟ್ಟ ಅವರು ಮಾತನಾಡಿ, ಹಸಿರಿನಿಂದ ಕಂಗೊಳಿಸುತ್ತಿರುವ ಬೊಕ್ಕಪಟ್ಲ ಶಾಲೆಯ ಪರಿಸರವನ್ನು ಕಂಡು ಶ್ಲಾಘಿಸಿದರು. ಪುಟಾಣಿ ಕಸ್ವಿಯ ಮೊದಲ ಹುಟ್ಟುಹಬ್ಬದ ನೆನಪಿಗಾಗಿ ಆರಂಭವಾದ ಈ ಸಂಸ್ಥೆಯು ಪ್ರಕೃತಿಯ ಉಳಿವಿನತ್ತ ಮಾಡುತ್ತಿರುವ ಕಾರ್ಯಗಳು ಶ್ಲಾಘನೀಯ. ಪರಿಸರ ಸಂರಕ್ಷಣೆಯ ಈ ಹಾದಿ ಇತರ ಮಕ್ಕಳಿಗೆ ಪ್ರೇರಣೆಯಾಗಲಿ ಎಂದು ಹಾರೈಸಿ, ಪುಟಾಣಿ ಕಸ್ವಿಯನ್ನು ಸನ್ಮಾನಿಸಿದರು.
​ಮುಖ್ಯ ಅತಿಥಿಯಾಗಿದ್ದ ಕೆ. ವಸಂತ್ ರಾವ್ ಅವರು ಮಾತನಾಡಿ, 2013ರಲ್ಲಿ ಮುತ್ತೂಟ್ ಫಿನ್ಕಾರ್ಪ್‌ನಲ್ಲಿ ತಾವು ಕಾರ್ಯನಿರ್ವಹಿಸುತ್ತಿದ್ದ ಕಾಲದ ನೆನಪುಗಳನ್ನು ಹಂಚಿಕೊಂಡರು. ಅಂದಿನ ರೊಟ್ರಾಕ್ಟ್ ಕ್ಲಬ್ ಮಂಗಳೂರು ಸಿಟಿ ಅಧ್ಯಕ್ಷರಾಗಿದ್ದ ಕೇಶವ ರಾಮಕುಂಜ ಅವರು ಬಿಇಎಂ ಶಾಲೆಯಲ್ಲಿ ನಡೆಸಿದ ವನಮಹೋತ್ಸವದ ಫಲವಾಗಿ ಇಂದು ಅಲ್ಲಿನ ಮಾವಿನ ಗಿಡಗಳು ಹಣ್ಣು ನೀಡುತ್ತಿವೆ ಎಂದು ಸ್ಮರಿಸಿದರು.
​ಶಾಲಾ ಮುಖ್ಯೋಪಾಧ್ಯಾಯರು ಮಾತನಾಡಿ, ಈ ಹಿಂದೆಯೂ ಕಸ್ವಿಯ ಹುಟ್ಟುಹಬ್ಬದ ಅಂಗವಾಗಿ ಶಾಲಾ ವಠಾರದಲ್ಲಿ 'ಔಷಧೀಯ ವನ' ನಿರ್ಮಾಣ ಮಾಡಿದ್ದನ್ನು ಸ್ಮರಿಸಿ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಜೀತ್ ರೋಚ್, ರೊ. ಗೀತಾ ಬಿ. ರೈ, ಕಸ್ವಿ ಹಸಿರು ದಿಬ್ಬಣದ ಅಧ್ಯಕ್ಷರಾದ ಶ್ರೀಮತಿ ಶ್ರದ್ಧಾ ಕೇಶವ ರಾಮಕುಂಜ, ಪುಟಾಣಿ ಕಸ್ವಿ, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ