image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದಸರಾ ದರ್ಶಿನಿ"ಗೆ ಹರಿದು ಬಂದ ಪ್ರವಾಸಿಗರ ದಂಡು

ದಸರಾ ದರ್ಶಿನಿ"ಗೆ ಹರಿದು ಬಂದ ಪ್ರವಾಸಿಗರ ದಂಡು

ಮಂಗಳೂರು: ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ಆಯೋಜಿಸಿದ ದಸರಾ ವಿಶೇಷ ಪ್ಯಾಕೇಜ್ 'ದಸರಾ ದರ್ಶಿನಿ'ಗೆ ಮೊದಲ ದಿನವೇ ಉತ್ತಮ ಸ್ಪಂದನೆ ದೊರಕಿದೆ. ಬುಧವಾರ ಬೆಳಗ್ಗೆ ದಸರಾ ದರ್ಶಿನಿಯ ೮ಬಸ್‌ಗಳು ಭರ್ತಿಯಾಗಿ ಮಡಿಕೇರಿ, ಮುರುಡೇಶ್ವರ, ಕೊಲ್ಲೂರು ಹಾಗೂ ಮಂಗಳೂರು ನಗರದ ದೇವಿ ದೇವಾಲಯಗಳತ್ತ ಹೊರಟಿತು. ಕಳೆದೆರಡು ವರ್ಷಗಳಿಂದ ಕರಾವಳಿಯಲ್ಲಿ ದಸರಾ ದರ್ಶಿನಿಗೆ ಉತ್ತಮ ಸ್ಪಂದನೆ ದೊರಕಿತ್ತು. ಅದರಂತೆ ಈ ಬಾರಿಯೂ ದಸರಾ ದರ್ಶನಿ ವಿಶೇಷ ಪ್ಯಾಕೇಜ್ ಆಯೋಜಿಸಲಾಗಿದೆ. ಮೊದಲ ದಿನವೇ ೨ನರ್ಮ್ ಬಸ್ ಸೇರಿದಂತೆ ೬ ಅಶ್ವಮೇಧ ಬಸ್‌ಗಳು ಸಂಚಾರ ಹೊರಟಿದೆ. ೩ ಬಸ್‌ಗಳು ಮಂಗಳೂರು - ಕೊಲ್ಲೂರು ಪ್ಯಾಕೇಜ್, ೨ಮಂಗಳೂರು ಸುತ್ತಮುತ್ತಲಿನ ದೇವೀ ದೇಗುಲದರ್ಶನ ಪ್ಯಾಕೇಜ್, ೧ಮಡಿಕೇರಿ ಪ್ಯಾಕೇಜ್ ಬಸ್ ಹಾಗೂ ೨ಮುರುಡೇಶ್ವರ ಬಸ್‌ಗಳು ಪ್ಯಾಕೇಜ್‌ನಲ್ಲಿದೆ. ಮಹಿಳೆಯರೇ ಅಧಿಕ ಮಂದಿ ದಸರಾ ದರ್ಶಿನಿ ಬಸ್‌ನಲ್ಲಿದ್ದು, ಎಲ್ಲರೂ ಉತ್ಸಾಹ ಹುಮ್ಮಸ್ಸಿನಿಂದಲೇ ಪ್ರವಾಸ ಹೊರಟಿದ್ದಾರೆ.

ಮೊದಲ ಪ್ಯಾಕೇಜ್‌ನಲ್ಲಿ ಮಂಗಳೂರು ಸುತ್ತಮುತ್ತಲಿನ ಮಂಗಳಾದೇವಿ, ಸುಂಕದಕಟ್ಟೆ, ಕಟೀಲು, ಬಪ್ಪನಾಡು, ಸಸಿಹಿತ್ಲು, ಚಿತ್ರಾಪುರ, ಉರ್ವ ಮಾರಿಯಮ್ಮ ಹಾಗೂ ಕುದ್ರೋಳಿ ದೇವಾಲಯಗಳ ದರ್ಶನ ಮಾಡಿಸಲಾಗುತ್ತದೆ. ಮತ್ತೊಂದು ಪ್ಯಾಕೇಜ್‌ನಲ್ಲಿ ಉಚ್ಚಿಲ ಶ್ರೀಮಹಾಲಕ್ಷ್ಮಿ, ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ, ಕೊಲ್ಲೂರು ಮೂಕಾಂಬಿಕಾ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನಗಳ ದರ್ಶನ ಮಾಡಿಸಲಾಗುತ್ತದೆ. ಮಡಿಕೇರಿ ಪ್ಯಾಕೇಜ್‌ನಲ್ಲಿ ರಾಜಾಸೀಟ್, ಅಬ್ಬಿಪಾಲ್ಸ್, ಗೋಲ್ಡನ್ ಟೆಂಪಲ್‌ಗಳ ವೀಕ್ಷಣೆಗೆ ಅವಕಾಶವಿದೆ. ಈ ಬಾರಿ ಮುರುಡೇಶ್ವರ ದೇವಸ್ಥಾನ, ಬೀಚ್ ಪ್ರವಾಸ ಹೊಸದಾಗಿ ಸೇರ್ಪಡೆಯಾಗಿದೆ. ಇದರಲ್ಲಿ ಕುಂಭಾಶಿ ಚಂಡಿಕಾ ದುರ್ಗಾಪರಮೇಶ್ವರಿ, ಆನೆಗುಡ್ಡೆ, ಉಚ್ಚಿಲ ದೇವಾಲಯಗಳ ದರ್ಶನವೂ ಇರಲಿದೆ. ಅ.೩ -೧೨ರವರೆಗೆ ೪ಪ್ಯಾಕೇಜ್ ಇರಲಿದೆ. ಎಲ್ಲಾ ದಿನಗಳೂ ಬಸ್‌ಗಳು ಲಾಲ್‌ಬಾಗ್‌ನ ಕೆಎಸ್ಆರ್‌ಟಿಸಿ ಬಸ್‌ನಿಲ್ದಾಣದಿಂದ ಹೊರಡಲಿದೆ. ಮುಂಗಡ ಟಿಕೆಟ್ ಬುಕ್ಕಿಂಗ್‌ಗೆ ತಿತಿತಿ.ಞsಡಿಣಛಿ.iಟಿ ಅಥವಾ ಮಂಗಳೂರು ಕೆಎಸ್ಆರ್‌ಟಿಸಿ ವಿಭಾಗವನ್ನು ಸಂಪರ್ಕಿಸಬಹುದು.

Category
ಕರಾವಳಿ ತರಂಗಿಣಿ