ಮಂಗಳೂರು, ಕ್ರಿಕೆಟ್ ಆಟದ ಮೂಲಕ ಶಿಸ್ತು ಕಲಿಯಲು ಸಾಧ್ಯ, ನಾಯಕತ್ವ ಗುಣವನ್ನು ಕೂಡಾ ರೂಪಿಸಲು ಸಾಧ್ಯವಿದೆ ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ ಅಭಿಪ್ರಾಯ ಪಟ್ಟರು.
ಮಂಗಳ ಕಾಲೇಜು ಒಫ್ ಫಿಸಿಯೋತೆರಫಿ ವತಿಯಿಂದ ನಿರುಮಾರ್ಗದಲ್ಲಿ ಆಯೋಜಿಸಲಾದ ಅಂತರ್ ಕಾಲೇಜು ಫಿಸಿಯೋ ಕ್ರಿಕೆಟ್ ಪಂದ್ಯಾವಳಿ ಮಂಗಳಾ ಮಗ್ನೆಸ್ ಕಪ್ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಯೊಂದಿಗೆ ಪಠ್ಯತೆರ ಚಟುವಟಿಕೆಯಲ್ಲಿ ತಮ್ಮನ್ನು ತೊದಗಿಸಿಕೊಳ್ಳುವಂತೆ ಕರೆ ನೀಡಿದರು.
ಮಂಗಳಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಗಣಪತಿ ಮಾತನಾಡಿ ಕ್ರಿಕೆಟ್ ಎಂಬುದು ಜಾತಿ, ಮತ, ಧರ್ಮ ವನ್ನು ಮೀರಿದ ಆಟವಾಗಿದೆ. ಇದರಲ್ಲಿ ವೈವಿಧ್ಯತೆ ಹಾಗೂ ಏಕತೆಯನ್ನು ಕಾಣಬಹುದಾಗಿದೆ. ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಇದೆ ಎಂದು ಹೇಳಿದರು.
ಕಾರ್ಯಕ್ರಮ ದಲ್ಲಿ ಕ್ರಿಕೆಟ್ ಪಂದ್ಯಾವಳಿ ಸಂಯೋಜಕರಾದ ಡಾ. ಭರತ್ ಕೆ ಎಚ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.