image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಳ್ವಾಸ್ ‘ಇನಾಮು 2026’: ಸೋಲಿಗೆ ಎದೆಗುಂದದೆ ಗುರಿಯತ್ತ ಸಾಗಿ ಎಂದು ವಿದ್ಯಾರ್ಥಿಗಳಿಗೆ ನಟ ಸ್ವರಾಜ್ ಶೆಟ್ಟಿ ಕರೆ

ಆಳ್ವಾಸ್ ‘ಇನಾಮು 2026’: ಸೋಲಿಗೆ ಎದೆಗುಂದದೆ ಗುರಿಯತ್ತ ಸಾಗಿ ಎಂದು ವಿದ್ಯಾರ್ಥಿಗಳಿಗೆ ನಟ ಸ್ವರಾಜ್ ಶೆಟ್ಟಿ ಕರೆ

ಮೂಡುಬಿದಿರೆ: ಸ್ಥಳೀಯ ಆಳ್ವಾಸ್ ಪದವಿ ಕಾಲೇಜಿನ 22 ವಿವಿಧ ಫೋರಂಗಳ ವಾರ್ಷಿಕ ಸಂಭ್ರಮ ‘ಇನಾಮು 2026’ ಕೃಷಿಸಿರಿ ವೇದಿಕೆಯಲ್ಲಿ ಅತ್ಯಂತ ವೈಭವದಿಂದ ಜರುಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ನಟ ಸ್ವರಾಜ್ ಶೆಟ್ಟಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರೇರಣಾದಾಯಿ ಮಾತುಗಳನ್ನಾಡಿದರು.

ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಸ್ವರಾಜ್ ಶೆಟ್ಟಿ, "ಆರಂಭದಲ್ಲಿ ನಾನು ನಟಿಸಿದ ಚಿತ್ರಗಳು ಅರ್ಧಕ್ಕೆ ನಿಂತಾಗ ಜನರು ಲೇವಡಿ ಮಾಡಿದ್ದರು. ಆದರೆ ಇಂದು ನನ್ನ ಸಿನಿಮಾಗಳು ಏಕಕಾಲಕ್ಕೆ ಮೂರು ಸ್ಕ್ರೀನ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿವೆ. ಟಿವಿಯ ಒಳಗೆ ಹೇಗೆ ಹೋಗುವುದು ಎಂದು ಬಾಲ್ಯದಲ್ಲಿ ಹುಡುಕುತ್ತಿದ್ದ ನಾನು ಇಂದು ಅದರಲ್ಲಿ ಕಾಣಿಸಿಕೊಳ್ಳುತ್ತಿರುವುದು ಕೇವಲ ಬದಲಾವಣೆಯಲ್ಲ, ಅದು ನಿರಂತರ ಪರಿಶ್ರಮದ ಫಲ," ಎಂದರು. ಜೀವನದಲ್ಲಿ ಸೋಲುಗಳು ಸಹಜ, ಅವುಗಳನ್ನು ಧೈರ್ಯದಿಂದ ಎದುರಿಸಿ ಸತ್ಯ ಮತ್ತು ಪ್ರಾಮಾಣಿಕತೆಯಿಂದ ಮುನ್ನಡೆಯಿರಿ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅಂತರ್ ಫೋರಂ ಸ್ಪರ್ಧೆಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ವಿವಿಧ ತಂಡಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಎನ್‌ಎಸ್‌ಎಸ್ (NSS) ಫೋರಂ ನಲ್ಲಿ ಪ್ರಥಮ ರನ್ನರ್ಸ್ ಅಪ್ ಆಗಿ ತುಳು ಫೋರಂ, ದ್ವಿತೀಯ ರನ್ನರ್ಸ್ ಅಪ್ ಆಗಿ ವಾಣಿಜ್ಯ ಫೋರಂ ಹೊರಹೋಮ್ಮಿದರು 

​ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಂಶುಪಾಲ ಡಾ. ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಹಾಗೂ ವಿವಿಧ ವಿಭಾಗಗಳ ಕುಲಸಚಿವರು ಮತ್ತು ಸಂಯೋಜಕರು ಉಪಸ್ಥಿತರಿದ್ದರು. ರಶ್ಮಿ ಡಿ.ಸಿ ಸ್ವಾಗತಿಸಿದರೆ, ಶ್ರಾವ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು ಮತ್ತು ಸಾಗರ್ ವಂದಿಸಿದರು.

Category
ಕರಾವಳಿ ತರಂಗಿಣಿ