image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಳ್ವಾಸ್ "ಚಿಣ್ಣರ ಆರೋಗ್ಯ" ಬೇಸಿಗೆ ಶಿಬಿರ - 2026

ಆಳ್ವಾಸ್ "ಚಿಣ್ಣರ ಆರೋಗ್ಯ" ಬೇಸಿಗೆ ಶಿಬಿರ - 2026

ಮೂಡುಬಿದಿರೆ : ಆಳ್ವಾಸ್ ಆನಂದಮಯ ಆರೋಗ್ಯಧಾಮದ ವತಿಯಿಂದ ‘ಚಿಣ್ಣರ ಆರೋಗ್ಯ’ ಬೇಸಿಗೆ ಶಿಬಿರವು ಏಪ್ರಿಲ್ 01 ರಿಂದ 07 ರವರೆಗೆ ಮೂಡುಬಿದಿರೆಯ ಮಿಜಾರಿನ ಶೋಭಾವನ ಆವರಣದಲ್ಲಿ ನಡೆಯಲಿದೆ. 6 ರಿಂದ 12 ವರ್ಷದೊಳಗಿನ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದ್ದು, ₹1500 ಶುಲ್ಕ ನಿಗದಿಪಡಿಸಲಾಗಿದೆ.

​ಈ ಶಿಬಿರದಲ್ಲಿ ಮಕ್ಕಳಿಗೆ ಪ್ರಕೃತಿ ಚಿಕಿತ್ಸೆ, ಯೋಗಾಭ್ಯಾಸ, ಸೂರ್ಯನಮಸ್ಕಾರ, ಪ್ರಾಣಾಯಾಮ ಮತ್ತು ಉಸಿರಾಟದ ವ್ಯಾಯಾಮಗಳ ಮೂಲಕ ಆರೋಗ್ಯಕರ ಜೀವನಶೈಲಿಯ ಅರಿವು ಮೂಡಿಸಲಾಗುತ್ತದೆ. ಇದರೊಂದಿಗೆ ಮೆಮೊರಿ ಗೇಮ್ಸ್, ಕಲೆ, ಕರಕುಶಲತೆ, ನೃತ್ಯ, ಸಂಗೀತ, ಚಿತ್ರಕಲೆ ಮತ್ತು ಜುಂಬಾ ತರಗತಿಗಳ ಮೂಲಕ ಮಕ್ಕಳ ಸೃಜನಶೀಲತೆಯನ್ನು ಉತ್ತೇಜಿಸಲಾಗುತ್ತದೆ.

​ಮಡ್ ಥೆರಪಿ ಹಾಗೂ ಕೃತಜ್ಞತಾ ಮನೋಭಾವ (Gratitude Attitude) ಬೆಳೆಸುವ ವಿಶೇಷ ತರಬೇತಿಗಳು ಈ ಶಿಬಿರದ ಪ್ರಮುಖ ಆಕರ್ಷಣೆಗಳಾಗಿವೆ. ಭಾಗವಹಿಸುವ ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ನೈಸರ್ಗಿಕ ಪಾನೀಯಗಳನ್ನು ಒದಗಿಸಲಾಗುತ್ತದೆ. ಶಿಬಿರದ ಕೊನೆಯಲ್ಲಿ 'ಗ್ರ್ಯಾಜುವೇಷನ್ ಡೇ' ಆಚರಿಸಿ, ಮಕ್ಕಳಿಗೆ ಪ್ರಮಾಣಪತ್ರ ಹಾಗೂ ಆಕರ್ಷಕ ಉಡುಗೊರೆಗಳನ್ನು ನೀಡಲಾಗುವುದು. ನೋಂದಣಿಗಾಗಿ ಆಸಕ್ತರು 7259105460 ಅಥವಾ 9995333677 ಸಂಖ್ಯೆಗಳನ್ನು ಸಂಪರ್ಕಿಸಬಹುದು.

Category
ಕರಾವಳಿ ತರಂಗಿಣಿ