ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60ನೇ ಬೆಂಗರೆ ವಾರ್ಡಿನ ಪಡುಹೊಯ್ಗೆಯಲ್ಲಿ, ಮೊಗವೀರ ಗ್ರಾಮ ಸಭಾ ಬೆಂಗರೆ (ರಿ.) ಸ್ಯಾಂಡ್ ಪಿಟ್ ಬಳಿ ಕೈಗೊಳ್ಳಲಿರುವ ನೂತನ ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಇತ್ತೀಚೆಗೆ ಭೂಮಿ ಪೂಜೆ ನೆರವೇರಿಸಿದರು.
ವಿಶೇಷ ಅನುದಾನದಡಿ ಕೈಗೆತ್ತಿಕೊಂಡಿರುವ ಈ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, "ಈ ಭಾಗದ ಸ್ಥಳೀಯ ನಿವಾಸಿಗಳು ಬಹಳ ದಿನಗಳಿಂದ ಅಭಿವೃದ್ಧಿಗಾಗಿ ಬೇಡಿಕೆ ಇಟ್ಟಿದ್ದರು. ಅವರ ಬೇಡಿಕೆಗೆ ಸ್ಪಂದಿಸಿ, ಸೂಕ್ತ ಅನುದಾನವನ್ನು ಹೊಂದಿಸಿ ಈ ಕೆಲಸವನ್ನು ಪ್ರಾರಂಭಿಸಲಾಗುತ್ತಿದೆ. ಕಾಮಗಾರಿಯು ಗುಣಮಟ್ಟದೊಂದಿಗೆ ಶೀಘ್ರವೇ ಪೂರ್ಣಗೊಳ್ಳಲಿದೆ," ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಲೋಕೇಶ್ ಬೆಂಗ್ರೆ, ಮೀರಾ ಕರ್ಕೇರ, ನಿತಿನ್ ಕುಮಾರ್, ವಿನೋದ್ ಮೆಂಡನ್, ಅನಿಲ್, ಕಿಶೋರ್ ಕೊಟ್ಟಾರಿ, ಸುರೇಂದ್ರ ಪಾಂಗಳ್, ಗಂಗಾಧರ, ಸಂಜಯ್ ಸುವರ್ಣ, ಧನಂಜಯ ಪುತ್ರನ್, ಚೇತನ್ ಬೆಂಗ್ರೆ, ವಿಥುನ್, ವಾಸು ಸುವರ್ಣ, ಸುಂದರ ಸಾಲ್ಯಾನ್, ಸುಕುಮಾರ, ಜೀವನ್ ಖಾರ್ವಿ, ಸ್ಥಳೀಯ ನಿವಾಸಿಗಳು ಮತ್ತು ವಾರ್ಡಿನ ಕಾರ್ಯಕರ್ತರು ಉಪಸ್ಥಿತರಿದ್ದರು.