image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

'ಲಲಿತಮಂಟಪ' ದಲ್ಲಿ ಕಲೆಯ ವಿಸ್ಮಯ ಜಗತ್ತು ಜನಪದ ವಿದ್ವಾಂಸ ಡಾ.ಕೆ.ಚಿನ್ನಪ್ಪ ಗೌಡ ಅಭಿಪ್ರಾಯ

'ಲಲಿತಮಂಟಪ' ದಲ್ಲಿ ಕಲೆಯ ವಿಸ್ಮಯ ಜಗತ್ತು ಜನಪದ ವಿದ್ವಾಂಸ ಡಾ.ಕೆ.ಚಿನ್ನಪ್ಪ ಗೌಡ ಅಭಿಪ್ರಾಯ

ಮಂಗಳೂರು : ಪತ್ರಕರ್ತೆ ಕೋಡಿಬೆಟ್ಟು ರಾಜಲಕ್ಷ್ಮಿ  ಬರೆದಿರುವ ಪ್ರಸಿದ್ಧ ನೃತ್ಯ ಕಲಾವಿದರ ಸಂದರ್ಶನಗಳ `ಲಲಿತ ಮಂಟಪ' ಕೃತಿ ಬಿಡುಗಡೆ ಸಮಾರಂಭ ನಗರದ ಸಪ್ನ ಬುಕ್ ಹೌಸ್‌ನಲ್ಲಿ ಬುಧವಾರ ನಡೆಯಿತು.

ಕೃತಿ ಬಿಡುಗಡೆಗೊಳಿಸಿದ ಜನಪದ ವಿದ್ವಾಂಸ  ಡಾ.ಕೆ.ಚಿನ್ನಪ್ಪ ಗೌಡ ಮಾತನಾಡಿ " ದೇಶದ ಪ್ರಮುಖ ನೃತ್ಯ ಕಲಾವಿದರ ಸಂದರ್ಶನ ಲೇಖನಗಳು ಲಲಿತ ಮಂಟಪದಲ್ಲಿ ಸುಂದರವಾಗಿ ಮೂಡಿ ಬಂದಿದೆ. ಪ್ರತಿಯೊಬ್ಬರ ಕಲಾವಿದರ ಬದುಕು ಕೂಡಾ ಅದ್ಭುತ. ಅವರ ಬದುಕು ಮತ್ತು ಕಲಾ ಪ್ರಕಾರವನ್ನು ರಾಜಲಕ್ಷ್ಮಿ ಅವರು ಮನೋಜ್ಞವಾಗಿ ತೆರೆದಿಟ್ಟಿದ್ದಾರೆ. ಕಲೆಯ ವಿಸ್ಮಯ ಜಗತ್ತು ತೆರೆದುಕೊಂಡಿದೆ. ಲಲಿತ ಮಂಟಪದಲ್ಲಿ  ನಾಟ್ಯ ಪರಂಪರೆ, ಕಲಾವಿದರ ತ್ಯಾಗ, ಸವಾಲುಗಳ ಸಮಗ್ರ ಮಾಹಿತಿ ಇದೆ ಎಂದರು.
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮುಖ್ಯ ಅತಿಥಿಗಳಾಗಿದ್ದರು. ಕೃತಿಕರ್ತೆ ರಾಜಲಕ್ಷ್ಮಿ ಕೋಡಿಬೆಟ್ಟು ಸ್ವಾಗತಿಸಿದರು. ಲೇಖಕಿ ದೇವಿಕಾ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.
*ವಿನೂತನ ರಂಗ ಪ್ರಯೋಗ
ರಂಗ ಮಂಟಪ ಕೃತಿ ಆಧರಿಸಿದ ವಿನೂತನ ರಂಗ ಪ್ರಯೋಗ ಗೆಜ್ಜೆ ಬರೆದ ಅಕ್ಷರವನ್ನು ವಿದುಷಿ ಮಂಜುಳಾ ಸುಬ್ರಹ್ಮಣ್ಯ ಪ್ರಸ್ತುತಪಡಿಸಿದರು. ಪವಿತ್ರಾ ಮಯ್ಯ ಹಾಡುಗಾರಿಕೆಯಲ್ಲಿ ಹಾಗೂ ರಾಕೇಶ್ ಹೊಸಬೆಟ್ಟು ಮೃದಂಗ ಮತ್ತು ತಬ್ಲಾದಲ್ಲಿ ಸಹಕರಿಸಿದರು.

Category
ಕರಾವಳಿ ತರಂಗಿಣಿ