ಮಂಗಳೂರು: ಕರಾವಳಿಯಲ್ಲಿ ಆಬಾಲವೃದ್ದಾದಿಯಾಗಿ ತಾಸೆ ಪೆಟ್ಟಿನ ಸದ್ದು ಕೇಳಿದ್ರೆ ಸಾಕು ಪಿಲಿ ನಲಿಕೆ ಎಂದರೆ ಹುಲಿ ಕುಣಿತದ ಮನಸ್ಅಗುವುದು ಮಾಮೂಲು. ಸದ್ಯ ದ.ಕ.ಜಿಲ್ಲೆಯ ಯುವ ಸೇನಾನಿ, ಸಂಸದ ಬ್ರಿಜೇಶ್ ಚೌಟ ಅವರು ಹುಲಿವೇಷ ಕುಣಿತದ ಹೆಜ್ಜೆ ಹಾಕಿರುವ ವೀಡಿಯೋ ಬಾರೀ ಸಂಚಲನ ಮೂಡಿಸುತ್ತಿದೆ.
ದಸರಾದ ಸಂದರ್ಭ ಹುಲಿವೇಷ ಹಾಕುವ ಮೊದಲು ಊದುಪೂಜೆ ನೆರವೇರಿಸುವ ಸಂಪ್ರದಾಯವಿದೆ. ಅದರಂತೆ ಮಂಗಳೂರಿನ ಬೊಕ್ಕಪಟ್ನದಲ್ಲಿ ನಡೆದ ಊದು ಕಾರ್ಯಕ್ರಮದಲ್ಲಿ ಸಂಸದ ಬ್ರಿಜೇಶ್ ಚೌಟ ಭಾಗವಹಿಸಿ, ತಾಸೆಯ ಪೆಟ್ಟಿಗೆ ಹೆಜ್ಜೆ ಹಾಕಿ ಖುಷಿ ಪಟ್ಟಿದ್ದಾರೆ.