image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರೋವಿನಾ ಶ್ಯಾರನ್ ಸೋನ್ಸ್ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಹೆಚ್‌ಡಿ ಪದವಿ ಪ್ರದಾನ

ರೋವಿನಾ ಶ್ಯಾರನ್ ಸೋನ್ಸ್ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಹೆಚ್‌ಡಿ ಪದವಿ ಪ್ರದಾನ

ಮಂಗಳೂರು: ಡಾ. ರೋವಿನಾ ಶ್ಯಾರನ್ ಸೋನ್ಸ್ ಅವರಿಗೆ ಮಂಗಳೂರು ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಫಿಲಾಸಫಿ (ಪಿಹೆಚ್‌ಡಿ) ಪದವಿಯನ್ನು ಪ್ರದಾನ ಮಾಡಿದೆ. ಇವರು ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ‘ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿನ ಆಯ್ದ ಐಟಿಇಎಸ್ ಕಂಪನಿಗಳಲ್ಲಿ ಆರೋಗ್ಯ ಮತ್ತು ಕ್ಷೇಮ ಕಾರ್ಯಕ್ರಮಗಳ ಉದ್ಯೋಗಿಗಳ ಉತ್ಪಾದಕತೆಯ ಮೇಲೆ ಇರುವ ಪರಿಣಾಮ: ಒಂದು ಅಧ್ಯಯನ’ (Impact of Health and Wellness Programs on Employee Productivity in Select ITES Companies: A Study in the Coastal Districts of Karnataka) ಎಂಬ ಮಹಾಪ್ರಬಂಧಕ್ಕೆ ಈ ಗೌರವ ಲಭಿಸಿದೆ.

​ಇತ್ತೀಚೆಗೆ ನಡೆದ ವೈವಾ ವೋಸ್ ಪರೀಕ್ಷೆಯಲ್ಲಿ ಅವರು ತಮ್ಮ ಸಂಶೋಧನಾ ಪ್ರಬಂಧವನ್ನು ಯಶಸ್ವಿಯಾಗಿ ಸಮರ್ಥಿಸಿಕೊಂಡಿದ್ದಾರೆ. ರೋವಿನಾ ಅವರು ಈ ಸಂಶೋಧನಾ ಕಾರ್ಯವನ್ನು ವ್ಯವಹಾರ ಆಡಳಿತ ವಿಭಾಗದ ಡಾ. ಶೇಖರ್ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಪೂರೈಸಿದ್ದಾರೆ.

​ಡಾ. ರೋವಿನಾ ಸೋನ್ಸ್ ಅವರು ಪ್ರಸ್ತುತ ಯೆನೇಪೊಯಾ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸಯನ್ಸ್, ಕಾಮರ್ಸ್ ಆಂಡ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ರೋನಿ ಸೋನ್ಸ್ ಮತ್ತು ರೋಝಿನಾ ಸೋನ್ಸ್ ದಂಪತಿಯ ಸುಪುತ್ರಿಯಾಗಿದ್ದು, ಶ್ರೀ ಸಂತೋಷ್ ಬಂಗೇರ ಅವರ ಪತ್ನಿಯಾಗಿದ್ದಾರೆ.

Category
ಕರಾವಳಿ ತರಂಗಿಣಿ