ಮಂಗಳೂರು: ಭಾರತೀಯ ರೈಲ್ವೆ, ಸೌತ್ ಸ್ಟಾರ್ ರೈಲ್ ಇಂಡಿಯಾ ಮತ್ತು ಟೂರ್ ಟೈಮ್ಸ್ ಸಹಯೋಗದೊಂದಿಗೆ ಭಾರತ್ ಗೌರವ್ ರೈಲು ಯೋಜನೆಯಡಿ ಈಶಾನ್ಯ ಭಾರತಕ್ಕೆ ಬೇಸಿಗೆ ವಿಶೇಷ ಪ್ರವಾಸಿ ರೈಲನ್ನು ಘೋಷಿಸಲಾಗಿದೆ. ಏಪ್ರಿಲ್ 25 ರಿಂದ ಪ್ರಾರಂಭವಾಗಲಿರುವ ಈ 14 ದಿನಗಳ ರೈಲು ಪ್ರಯಾಣವು ವಿಶಾಖಪಟ್ಟಣಂ ಮತ್ತು ಕೋಲ್ಕತ್ತಾವನ್ನೂ ಒಳಗೊಂಡಿದ್ದು, ಒಂದೇ ರೈಲು ಪ್ರಯಾಣದೊಳಗೆ ಮೂರು ವಿಭಿನ್ನ ಪ್ರವಾಸ ಪ್ಯಾಕೇಜ್‍ಗಳನ್ನು ನೀಡಲಿದೆ.
ಭಾರತೀಯ ರೈಲ್ವೆ ಭಾರತ್ ಗೌರವ್ ರೈಲು ಸೌತ್‍ಸ್ಟಾರ್ ರೈಲು & ಟೂರ್ ಟೈಮ್ ನಿರ್ದೇಶಕ ವಿಘ್ನೇಶ್ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಈ ವಿಶೇಷವಾಗಿ ವಿನ್ಯಾಸಗೊಳಿಸಲಾದ ಪ್ರವಾಸಿ ರೈಲು ದೇಶದ ಕೆಲವು ಅತ್ಯಂತ ಸುಂದರವಾದ ಮತ್ತು ಸಾಂಸ್ಕøತಿಕವಾಗಿ ಮಹತ್ವದ ತಾಣಗಳನ್ನು ಒಳಗೊಂಡಿದೆ. ಮೊದಲ ಪ್ಯಾಕೇಜ್‍ನಲ್ಲಿ ಗ್ಯಾಂಗ್ಟಾಕ್, ಡಾರ್ಜಿಲಿಂಗ್‍ಗೆ ಭೇಟಿ ನೀಡಬಹುದಾದರೆ, ಎರಡನೇ ಪ್ಯಾಕೇಜ್ ಗುವಾಹಟಿ, ಶಿಲ್ಲಾಂಗ್, ಚಿರಾಪುಂಜಿ, ಮಾವ್ಲಿನ್ನಾಂಗ್ ಮತ್ತು ದಾವ್ಕಿಗಳಂತಹ ಈಶಾನ್ಯದ ಸುಂದರ ತಾಣಗಳನ್ನು ಒಳಗೊಂಡಿದೆ. ಇನ್ನು ಮೂರನೇ ಪ್ಯಾಕೇಜ್ ಅಂತಾರಾಷ್ಟ್ರೀಯ ಪ್ರವಾಸವಾಗಿದ್ದು, ಭೂತಾನ್ ನ ಥಿಂಪು, ಪುನಾಖಾ, ಪಾರೋ ಮತ್ತು ಚೆಲೆ ಲಾ ಪಾಸ್ ಗಳಿಗೆ ಭೇಟಿ ನೀಡುವ ಅವಕಾಶ ಕಲ್ಪಿಸುತ್ತದೆ.
ಈ ವಿಶೇಷ ಪ್ರವಾಸಿ ರೈಲು ಸಾಮಾನ್ಯ ರೈಲುಗಳಿಗಿಂತ ಭಿನ್ನವಾಗಿದ್ದು, ಐಆರ್‍ಸಿಟಿಸಿ ವೆಬ್‍ಸೈಟ್ ನಲ್ಲಿ ಬುಕಿಂಗ್ ಮಾಡಲು ಲಭ್ಯವಿಲ್ಲ. ಆಸಕ್ತರು ಕಾಯ್ದಿರಿಸುವಿಕೆಗಾಗಿ ಟೂರ್ ಟೈಮ್ಸ್ ಅನ್ನು ನೇರವಾಗಿ 7305858585 ಕ್ಕೆ ಸಂಪರ್ಕಿಸಬಹುದು ಅಥವಾ www.tourtimes.in ಗೆ ಭೇಟಿ ನೀಡಬಹುದು.
ಸೌತ್ ಸ್ಟಾರ್ ರೈಲ್ ಮತ್ತು ಟೂರ್ ಟೈಮ್ಸ್ ಈಗಾಗಲೇ 53 ನಿರ್ಗಮನಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, 2,90,229 ರೈಲು ಕಿಲೋಮೀಟರ್ ಗಳನ್ನು ಕ್ರಮಿಸುವ ಮೂಲಕ 24,402 ಯಾತ್ರಿಕರು ಮತ್ತು ಪ್ರವಾಸಿಗರಿಗೆ ಪ್ರಯಾಣ ಸೌಲಭ್ಯಗಳನ್ನು ಒದಗಿಸಿವೆ. ಕೇರಳದಲ್ಲಿ ಅನುಕೂಲಕರ ಬೋರ್ಡಿಂಗ್ ಪಾಯಿಂಟ್‍ಗಳೊಂದಿಗೆ ಮಧುರೈನಿಂದ ಹೊರಡುವ ಈ ರೈಲಿನಲ್ಲಿ ಮಂಗಳೂರಿನಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಅವರ ಆದ್ಯತೆಯ ಆಧಾರದ ಮೇಲೆ ಪಾಲಕ್ಕಾಡ್, ಒಟ್ಟಪಾಲಂ ಅಥವಾ ತ್ರಿಶೂರ್ ಗೆ ಪೂರಕ ವರ್ಗಾವಣೆ ಸೌಲಭ್ಯ ನೀಡಲಾಗುವುದು.
ರೈಲಿನಲ್ಲಿ ಸಾರ್ವಜನಿಕ ಪ್ರಕಟಣೆ ಮನರಂಜನಾ ವ್ಯವಸ್ಥೆಗಳು, ಪ್ರವಾಸ ವ್ಯವಸ್ಥಾಪಕರು, ವಿಶೇಷ ಕೋಚ್ ಭದ್ರತೆ, ಅನಿಯಮಿತ ದಕ್ಷಿಣ ಭಾರತೀಯ ಊಟ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ರೈಲು ಒಂದು ಫಸ್ಟ್ ಎಸಿ, ಮೂರು 2ಎಸಿ, ಐದು 3ಎಸಿ, ಎರಡು ಸ್ಲೀಪರ್ ಕ್ಲಾಸ್ ಮತ್ತು ಪ್ಯಾಂಟ್ರಿ ಕಾರ್ ಹೊಂದಿದ್ದು, ಒಟ್ಟು 650 ಪ್ರಯಾಣಿಕರಿಗೆ ಅವಕಾಶವಿದೆ. ಪ್ರವಾಸ ಪ್ಯಾಕೇಜ್ ಹೋಟೆಲ್ ತಂಗುವಿಕೆ, ದೃಶ್ಯವೀಕ್ಷಣೆ, ಸಂಚಾರ ಮತ್ತು ಪ್ರಯಾಣ ವಿಮೆಯನ್ನು ಒಳಗೊಂಡಿದೆ. ಅಲ್ಲದೆ, ಪ್ರವಾಸಿಗರು ಎಲ್‍ಟಿಸಿ/ಎಲ್‍ಎಫ್‍ಸಿ ಪ್ರಯೋಜನಗಳಿಗೆ ಅರ್ಹರಾಗಿದ್ದಾರೆ ಎಂದರು.