image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ಬೋಬಿ ಚೆಮ್ಮನೂರು ಇಂಟರ್‌ನ್ಯಾಶನಲ್ ಜ್ಯುವೆಲ್ಲರ್ಸ್ ನೂತನ ಶೋರೂಂ ಅದ್ಧೂರಿ ಉದ್ಘಾಟನೆ

ಮಂಗಳೂರಿನಲ್ಲಿ ಬೋಬಿ ಚೆಮ್ಮನೂರು ಇಂಟರ್‌ನ್ಯಾಶನಲ್ ಜ್ಯುವೆಲ್ಲರ್ಸ್ ನೂತನ ಶೋರೂಂ ಅದ್ಧೂರಿ ಉದ್ಘಾಟನೆ

ಮಂಗಳೂರು: 163 ವರ್ಷಗಳ ಭವ್ಯ ಪರಂಪರೆ ಹಾಗೂ ಐಎಸ್‌ಒ ಮಾನ್ಯತೆ ಹೊಂದಿರುವ ಪ್ರಸಿದ್ಧ ಆಭರಣ ಸಂಸ್ಥೆ 'ಬೋಬಿ ಚೆಮ್ಮನೂರು ಇಂಟರ್‌ನ್ಯಾಶನಲ್ ಜ್ಯುವೆಲ್ಲರ್ಸ್' ತನ್ನ ನೂತನ ಶೋರೂಂ ಅನ್ನು ನಗರದ ಹಂಪನಕಟ್ಟೆಯಲ್ಲಿ ಇಂದು ಅದ್ಧೂರಿಯಾಗಿ ಉದ್ಘಾಟಿಸಿತು.

​ಬಾಲಿವುಡ್ ಸ್ಟಾರ್ ಇಮ್ರಾನ್ ಹಶ್ಮಿ ಹಾಗೂ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶೋರೂಂ ಅನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಬೋಬಿ ಚೆಮ್ಮನೂರು, ಶಾಸಕ ವೇದವ್ಯಾಸ್ ಕಾಮತ್, ಮಾಜಿ ಮೇಯರ್ ಮನೋಜ್ ಕುಮಾರ್ ಹಾಗೂ ಮಾಜಿ ಉಪಮೇಯರ್ ಪೂರ್ಣಿಮಾ ಉಪಸ್ಥಿತರಿದ್ದರು. ಉದ್ಘಾಟನೆಯ ಅಂಗವಾಗಿ 'ಬೋಚೆ ಫ್ಯಾನ್ಸ್ ಚಾರಿಟೇಬಲ್ ಟ್ರಸ್ಟ್' ವತಿಯಿಂದ ಆಯ್ದ ಬಡ ರೋಗಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಸಾಮಾಜಿಕ ಬದ್ಧತೆಯನ್ನು ಮೆರೆಯಲಾಯಿತು.

ವಿಡಿಯೋ ಗಾಗಿ ಕ್ಲಿಕ್ ಮಾಡಿ

​ನೂತನ ಶೋರೂಂನಲ್ಲಿ HUID 916 ಮಾನ್ಯತೆಯ ಚಿನ್ನ, ವಿಶ್ವದರ್ಜೆಯ ವಜ್ರ ಹಾಗೂ ಬೆಳ್ಳಿ ಆಭರಣಗಳ ವಿಶೇಷ ಸಂಗ್ರಹವಿದೆ. ಗ್ರಾಹಕರಿಗೆ ಸಗಟು ದರದಲ್ಲಿ ಚಿನ್ನಾಭರಣಗಳು ಲಭ್ಯವಿದ್ದು, ಅಮೂಲ್ಯ ರತ್ನದ ಆಭರಣಗಳ ತಯಾರಿಕಾ ವೆಚ್ಚದ ಮೇಲೆ ಶೇ. 50 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಅಲ್ಲದೆ, 2 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ವಜ್ರದ ಆಭರಣ ಖರೀದಿಸುವವರಿಗೆ ಉಚಿತ ಚಿನ್ನದ ನಾಣ್ಯ ನೀಡಲಾಗುತ್ತಿದೆ. ಮುಂಗಡ ಬುಕಿಂಗ್ ಮಾಡುವ ಗ್ರಾಹಕರಿಗೆ ಯಾವುದೇ ಮೇಕಿಂಗ್ ಚಾರ್ಜ್ ಇಲ್ಲದೆ ಆಭರಣ ಖರೀದಿಸುವ ಅವಕಾಶವನ್ನೂ ಸಂಸ್ಥೆ ಕಲ್ಪಿಸಿದೆ.

Category
ಕರಾವಳಿ ತರಂಗಿಣಿ