image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಡಾ. ಆರ್. ಕೆ. ನಾಯರ್ ಗೆ ಪ್ರತಿಷ್ಠಿತ 'ವಂದನಾ ಪ್ರಶಸ್ತಿ' ಘೋಷಣೆ

ಡಾ. ಆರ್. ಕೆ. ನಾಯರ್ ಗೆ ಪ್ರತಿಷ್ಠಿತ 'ವಂದನಾ ಪ್ರಶಸ್ತಿ' ಘೋಷಣೆ

​ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟಾರಾಕ್ಟ್ ಕ್ಲಬ್ ಮಂಗಳೂರು ಸಿಟಿ ಜಂಟಿಯಾಗಿ ನೀಡುವ 2026ನೇ ಸಾಲಿನ ರಾಜ್ಯ ಮಟ್ಟದ ಪ್ರತಿಷ್ಠಿತ 'ವಂದನಾ ಪ್ರಶಸ್ತಿ'ಗೆ ಖ್ಯಾತ ಪರಿಸರ ಪ್ರೇಮಿ ಹಾಗೂ ಉದ್ಯಮಿ ಡಾ. ಆರ್. ಕೆ. ನಾಯರ್ ಅವರು ಆಯ್ಕೆಯಾಗಿದ್ದಾರೆ ಎಂದು ಸಮಿತಿಯ ಅಧ್ಯಕ್ಷರಾದ ರೋ. ಡಾ. ದೇವದಾಸ್ ರೈ  ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ​ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಡಾ. ನಾಯರ್ ಅವರು ಮಾಡಿರುವ ಗಣನೀಯ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕಾಡುಗಳನ್ನು ಬೆಳೆಸುವ ಮೂಲಕ 'ಹಸಿರು ಕ್ರಾಂತಿ'ಗೆ ನಾಂದಿ ಹಾಡಿರುವ ಇವರು, ದೇಶದ ವಿವಿಧೆಡೆ ಲಕ್ಷಾಂತರ ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ಸಮತೋಲನಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು. 


​ಮಾರ್ಚ್ 21, 2026 ರಂದು ಸಂಜೆ 7.30ಕ್ಕೆ ಮಂಗಳೂರಿನ ಹೋಟೆಲ್ ಸಿ ವಿವ್ಯೂನಲ್ಲಿ  ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಗವರ್ನರ್ ರೋ. ಬಿ. ಸಿ. ಗೀತಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಪ್ರಶಸ್ತಿ ಆಯ್ಕೆ ತಿಳಿಸಿದರು.
​ಪ್ರತಿ ವರ್ಷವೂ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ ಪರಂಪರೆಯನ್ನು ರೋಟರಿ ಸಂಸ್ಥೆಯು ಈ ಮೂಲಕ ಮುಂದುವರಿಸಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ರೊ.ಭಾಸ್ಕರ್ ರೈ ಕಟ್ಟಾ, ರೊ.ವಿಕಾಸ್ ಕೋಟ್ಯಾನ್, ರೊ.ರವೀಂದ್ರ ಬಿ ಎಸ್, ಎಮ್ ವಿ ಮಲ್ಯ, ರೋ.ಅಕ್ಷಯ್, ಗೀತಾ ಬಿ ರೈ, ಪ್ರಮಿಳಾ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ