image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೋಳೂರು ಜಾರಂದಾಯ ದೈವಸ್ಥಾನದ ನೇಮೋತ್ಸವದಲ್ಲಿ ಅನ್ಯಧರ್ಮೀಯರು ನರ್ತನ ಸೇವೆ ಮಾಡಿರುವುದು ಪಂಬದ ಸಮುದಾಯಕ್ಕೆ ಮಾಡಿದ ಅವಮಾನ- ಡಾ. ರತಿ

ಬೋಳೂರು ಜಾರಂದಾಯ ದೈವಸ್ಥಾನದ ನೇಮೋತ್ಸವದಲ್ಲಿ ಅನ್ಯಧರ್ಮೀಯರು ನರ್ತನ ಸೇವೆ ಮಾಡಿರುವುದು ಪಂಬದ ಸಮುದಾಯಕ್ಕೆ ಮಾಡಿದ ಅವಮಾನ- ಡಾ. ರತಿ

ಮಂಗಳೂರು: ನಗರದ ಬೋಳೂರು ಜಾರಂದಾಯ ದೈವಸ್ಥಾನದಲ್ಲಿ ಇತ್ತೀಚೆಗೆ ನಡೆದ ನೇಮೋತ್ಸವದ ಸಂದರ್ಭದಲ್ಲಿ ದೈವ ನರ್ತನ ಸೇವೆಗಾಗಿ ಅನ್ಯಧರ್ಮೀಯ ಯುವಕನನ್ನು ಬಳಸಿಕೊಳ್ಳಲಾಗಿದೆ ಎಂದು ಡಾ. ರತಿ  ಗಂಭೀರ ಆರೋಪ ಮಾಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದಿನಾಂಕ 01.02.2026 ರಂದು ನಡೆದ ಜಾರಂದಾಯ ದೈವದ ನೇಮೋತ್ಸವದಲ್ಲಿ ಬಂಟ ದೈವನರ್ತನಕ್ಕಾಗಿ ಕ್ರಿಶ್ಚಿಯನ್ ಸಮುದಾಯದ ಯುವಕನನ್ನು ತೊಡಗಿಸಿಕೊಳ್ಳುವ ಮೂಲಕ ಧಾರ್ಮಿಕ ಪರಂಪರೆಗೆ ಧಕ್ಕೆ ತರಲಾಗಿದೆ ಎಂದು ದೂರಿದ್ದಾರೆ.

ಕಳೆದ ಹಲವು ವರ್ಷಗಳಿಂದ ಪಂಬದ ಸಮುದಾಯದ ನರ್ತಕರು ಅತ್ಯಂತ ಶ್ರದ್ಧೆಯಿಂದ ಈ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದರು. ಆದರೆ ಈ ಬಾರಿ ಆಡಳಿತ ಸಮಿತಿಯು ಕೇರಳದ ಕಾಸರಗೋಡು ಮೂಲದ ಗಣೇಶ್ ಪಂಬದ ಎಂಬವರನ್ನು ನೇಮಕ ಮಾಡಿತ್ತು. ಈ ಗಣೇಶ್ ಪಂಬದ ಅವರು ಕಡಿಮೆ ಸಂಬಳದ ಆಸೆಗೆ ಬಿದ್ದು, ದಿವಂಗತ ಗಣೇಶ್ ಪಂಬದ ಅವರ ಕ್ರಿಶ್ಚಿಯನ್ ಪತ್ನಿಯನ ಮಗನಾದ ಸೂರಜ್ ಎಂಬಾತನನ್ನು ದೈವದ ನೇಮ ಕಟ್ಟಲು ಬಳಸಿಕೊಂಡಿದ್ದಾರೆ ಎಂದು ದೂರಿದ್ದಾರೆ.

ದೈವಾರಾಧನೆಯಲ್ಲಿ ಪಂಬದ ಸಮುದಾಯಕ್ಕೆ ವಿಶೇಷ ಸ್ಥಾನಮಾನವಿದ್ದರೂ, ಮೂಲ ಸಿದ್ಧಾಂತಗಳನ್ನು ಗಾಳಿಗೆ ತೂರಿ ಅನ್ಯಧರ್ಮೀಯರನ್ನು ಈ ಪವಿತ್ರ ಕಾರ್ಯದಲ್ಲಿ ತೊಡಗಿಸಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
​ಈ ವಿಚಾರವಾಗಿ ಈಗಾಗಲೇ ರಾಜ್ಯ ಮಹಿಳಾ ಆಯೋಗ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ದೂರು ಸಲ್ಲಿಸಲಾಗಿದ್ದು, ಪಂಬದ ಸಮುದಾಯದ ಜಾತಿ ಸಂಘಕ್ಕೂ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಪ್ರಶ್ನಿಸಲು ಹೋದಾಗ ಗಣೇಶ್ ಪಂಬದ ಮತ್ತು ಅವರ ಅಳಿಯ ಸೂರಜ್ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ.  ತುಳುನಾಡಿನ ದೈವಾರಾಧನೆಯ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಮಸ್ತ ದೈವಾರಾಧಕರು ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ವಿನಂತಿಸಿದ್ದಾರೆ.

Category
ಕರಾವಳಿ ತರಂಗಿಣಿ