image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಕ್ಟೋಬರ್ 4ರ ರಾತ್ರಿ 9ರಿಂದ ಅಕ್ಟೋಬರ್ 7ರ ಬೆಳಗ್ಗೆ 6ರವರೆಗೆ ಮೆಸ್ಕಾಂ ಆನ್‌ಲೈನ್ ಸೇವೆ ಇರುವುದಿಲ್ಲ

ಅಕ್ಟೋಬರ್ 4ರ ರಾತ್ರಿ 9ರಿಂದ ಅಕ್ಟೋಬರ್ 7ರ ಬೆಳಗ್ಗೆ 6ರವರೆಗೆ ಮೆಸ್ಕಾಂ ಆನ್‌ಲೈನ್ ಸೇವೆ ಇರುವುದಿಲ್ಲ

ಮಂಗಳೂರು:  ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣ ಕಾರ್ಯವನ್ನು ಕೈಗೊಂಡಿರುವ ಹಿನ್ನಲೆಯಲ್ಲಿ  ಮೆಸ್ಕಾಂ ನಗರ ಪ್ರದೇಶದ ಗ್ರಾಹಕರಿಗೆ ಆನ್‌ ಲೈನ್‌ ಸೇವೆಗಳು  ಅ.4ರ ರಾತ್ರಿ 9 ಗಂಟೆಯಿಂದ ಅ.7ರ ಬೆಳಗ್ಗೆ 6 ಗಂಟೆಯವರೆಗೆ ತಾತ್ಕಾಲಿಕವಾಗಿ ಸ್ಘಗಿತಗೊಳ್ಳಲಿದೆ. ಈ ಅವಧಿಯಲ್ಲಿ ಆನ್ ಲೈನ್ ‌ ಸೇವೆಗಳಾದ ವಿದ್ಯುತ್ ಬಿಲ್‌ ‌ಪಾವತಿ, ಹೊಸ ಸಂಪರ್ಕ ಸೇವೆ, ಹೆಸರು ಮತ್ತು ಜಕಾತಿ ಬದಲಾವಣೆ ಹಾಗೂ ಮೊಬೈಲ್‌ ಆ್ಯಪ್‌  ಸೇರಿದಂತೆ ಹಲವು ಆನ್‌ಲೈನ್ ‌ ಸೇವೆಯು ಲಭ್ಯವಿರುವುದಿಲ್ಲ. 

ಎಲ್ಲೆಲ್ಲಿ ಸೇವೆ ಇರುವುದಿಲ್ಲ?

ಮೆಸ್ಕಾಂ ವ್ಯಾಪ್ತಿಯ ಪುತ್ತೂರು, ಉಡುಪಿ, ಮಂಗಳೂರು, ಬಂಟ್ವಾಳ,ಕಡೂರು, ತರೀಕೆರೆ, ಶಿಕಾರಿಪುರ, ಸಾಗರ, ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರು ನಗರ ಪ್ರದೇಶಗಳ ಗ್ರಾಹಕರಿಗೆ ಲಭ್ಯವಿರುವುದಿಲ್ಲ.

 ತಂತ್ರಾಂಶವು ಕಾರ್ಯಾರಂಭಗೊಂಡ ನಂತರ ಸ್ಥಿರಗೊಳ್ಳಲು ಸುಮಾರು 15 ದಿನಗಳ ಕಾಲಾವಕಾಶ ಬೇಕಿದ್ದು,  ಈ  ಸಮಯದಲ್ಲಿ ತಂತ್ರಾಂಶದ ಕಾರ್ಯಕ್ಷಮತೆಯಲ್ಲಿ ಸ್ವಲ್ಪ ವ್ಯತ್ಯಯ ಉಂಟಾಗಬಹುದು. ಈ ಅವಧಿಯಲ್ಲಿನ ಅಡಚಣೆಗಾಗಿ ವಿಷಾದಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿರುವ ಮೆಸ್ಕಾಂ, ಸಹಕರಿಸುವಂತೆ   ಸಾರ್ವಜನಿಕರಲ್ಲಿ  ಕೋರಿದೆ.

Category
ಕರಾವಳಿ ತರಂಗಿಣಿ