image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕರಾವಳಿ ಜಿಲ್ಲೆಗಳಿಗೆ ಹೀಟ್ ವೇವ್ ಭೀತಿ: ಐಎಂಡಿಯಿಂದ ‘ಯೆಲ್ಲೋ ಅಲರ್ಟ್’ ಘೋಷಣೆ

ಕರಾವಳಿ ಜಿಲ್ಲೆಗಳಿಗೆ ಹೀಟ್ ವೇವ್ ಭೀತಿ: ಐಎಂಡಿಯಿಂದ ‘ಯೆಲ್ಲೋ ಅಲರ್ಟ್’ ಘೋಷಣೆ

ಮಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ.

​ಇಂದು ಮತ್ತು ನಾಳೆ ಕರಾವಳಿ ಜಿಲ್ಲೆಗಳಲ್ಲಿ ತೀವ್ರವಾದ ಬಿಸಿಲು ಮತ್ತು ಆರ್ದ್ರತೆಯ ವಾತಾವರಣ (Hot and Humid conditions) ಇರಲಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ದಕ್ಷಿಣ ಕನ್ನಡದಲ್ಲಿ ದಾಖಲೆಯ ತಾಪಮಾನ

​ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ (ಮಾಚ್ 10 ರಿಂದ ಮಾರ್ಚ್ 11ರ ಬೆಳಿಗ್ಗೆಯವರೆಗೆ), ರಾಜ್ಯದಲ್ಲೇ ಗರಿಷ್ಠ ತಾಪಮಾನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲಾಗಿದೆ.

​ದಕ್ಷಿಣ ಕನ್ನಡ: ಗರಿಷ್ಠ 37.0°C | ಕನಿಷ್ಠ 24.6°C

​ಉತ್ತರ ಕನ್ನಡ: ಗರಿಷ್ಠ 36.6°C | ಕನಿಷ್ಠ 21.2°C

​ಉಡುಪಿ: ಗರಿಷ್ಠ 35.8°C | ಕನಿಷ್ಠ 24.0°C

​ಕರಾವಳಿ ಮಾತ್ರವಲ್ಲದೆ ಒಳನಾಡಿನ ಜಿಲ್ಲೆಗಳಾದ ಕಲ್ಬುರ್ಗಿ (36.6°C), ಬೀದರ್ (36.3°C) ಮತ್ತು ಹಾವೇರಿ (36.4°C) ಜಿಲ್ಲೆಗಳಲ್ಲೂ ಕೂಡ ತಾಪಮಾನ ಏರಿಕೆ ಕಂಡುಬಂದಿದೆ.

​ಸಾರ್ವಜನಿಕರಿಗೆ ಸೂಚನೆಗಳು:

​ಬಿಸಿಲಿನ ತಾಪ ಹೆಚ್ಚಿರುವ ಮಧ್ಯಾಹ್ನ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ.

​ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಹೆಚ್ಚಿನ ಪ್ರಮಾಣದಲ್ಲಿ ನೀರು, ಎಳನೀರು ಅಥವಾ ಮಜ್ಜಿಗೆಯನ್ನು ಸೇವಿಸಿ.

​ಹಗುರವಾದ ಹತ್ತಿ ಬಟ್ಟೆಗಳನ್ನು ಧರಿಸಿ ಮತ್ತು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಛತ್ರಿ ಅಥವಾ ಟೋಪಿ ಬಳಸಿ. ಹೆಚ್ಚುತ್ತಿರುವ ಶಾಖದ ಅಲೆಯ (Heat Wave) ಹಿನ್ನೆಲೆಯಲ್ಲಿ ವಯಸ್ಸಾದವರು ಮತ್ತು ಮಕ್ಕಳು ವಿಶೇಷ ಕಾಳಜಿ ವಹಿಸಬೇಕೆಂದು ಆರೋಗ್ಯ ಇಲಾಖೆ ತಿಳಿಸಿದೆ.

Category
ಕರಾವಳಿ ತರಂಗಿಣಿ