image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಉಜಿರೆ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದಲ್ಲಿ ವಿಜಯರಾಜಗೋಪುರ ಲೋಕಾರ್ಪಣೆ

ಉಜಿರೆ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದಲ್ಲಿ ವಿಜಯರಾಜಗೋಪುರ ಲೋಕಾರ್ಪಣೆ

ಉಜಿರೆ : ರಾಜಗೋಪುರ ದೇವರ ಪಾದದ ಪ್ರತೀಕವಾಗಿದೆ. ಅದಕ್ಕೆ ನಾವು ನಮಸ್ಕರಿಸುವುದು ದೇವರಿಗೆ ನಮಸ್ಕರಿಸಿದಂತೆಯೇ ಆಗುತ್ತದೆ ಎಂದು ಜಗದ್ಗುರು ಕಾಸರಗೋಡಿನ ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು. ಅವರು ಉಜಿರೆ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ನೂತನವಾಗಿ ನಿರ್ಮಾಣಗೊಂಡ ವಿಜಯರಾಜ ಗೋಪುರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ ಮಾತನಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ದೇವರ ಪಾದಕ್ಕೆ ವಿಶೇಷ ಮಹತ್ವವಿದೆ. ಅದು ಭಕ್ತಿ ಮತ್ತು ವಿನಯದ ಸಂಕೇತವಾಗಿದೆ. ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ತಮಿಳುನಾಡಿನಲ್ಲಿ, ಗೋಪುರಗಳ ಮೂಲಕವೇ ದೇವಾಲಯಗಳನ್ನು ಗುರುತಿಸಲಾಗುತ್ತದೆ. ಅದೇ ರೀತಿ ಉಜಿರೆಯಲ್ಲಿ ನಿರ್ಮಾಣಗೊಂಡಿರುವ ವಿಜಯ ರಾಜಗೋಪುರವು ದೇವಸ್ಥಾನದ ಅಸ್ಮಿತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದರು.

ದೇವಾಲಯಗಳು ಸಮಾಜವನ್ನು ಒಂದಾಗಿಸುವ ಪವಿತ್ರ ತಾಣಗಳಾಗಿವೆ. ಇಂತಹ ಧರ್ಮಕಾರ್ಯಗಳು ಮುಂದಿನ ಪೀಳಿಗೆಗೂ ಸಾಗಬೇಕು. ಹಿರಿಯರು ಯುವಪೀಳಿಗೆಯನ್ನು ಒಟ್ಟುಗೂಡಿಸಿ ಪ್ರೇರೇಪಿಸಬೇಕು. ದೇವಾಲಯಗಳ ಪವಿತ್ರತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ದೇವಸ್ಥಾನದೊಂದಿಗೆ ನಿರಂತರ ಸಂಪರ್ಕಇಟ್ಟುಕೊಂಡರೆ ಮಾತ್ರ ಇಂತಹ ಕಾರ್ಯಗಳು ಮುಂದುವರಿಯುತ್ತವೆ ಎoದು ಹೇಳಿದರು. ದೇವಾಲಯದ ಆಡಳಿತ ಮೊಕ್ತೇಸರರು ಮನೆಮನೆಗಳಿಗೆ ತೆರಳಿ ಭಕ್ತರನ್ನುಆಹ್ವಾನಿಸುತ್ತಿರುವುದು ಪ್ರಶಂಸನೀಯ ಕೆಲಸವಾಗಿದೆ. ಜನಬಲ, ಧನಬಲದ ಜೊತೆಗೆ ಜನಾರ್ದನನ ಅನುಗ್ರಹವೂ ಇದ್ದರೆ ಯಾವುದೇ ಕಾರ್ಯವೂ ಯಶಸ್ವಿಯಾಗಿ ನೆರವೇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Category
ಕರಾವಳಿ ತರಂಗಿಣಿ