image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಗರದ ಸುಸ್ಥಿರ ಅಭಿವೃದ್ಧಿಗೆ ಚಿಂತನ-ಮಂಥನ: ಮಾರ್ಚ್ 7 ಮತ್ತು 8 ರಂದು ಮಂಗಳೂರು ಡಿಸೈನ್ ಸಮಿಟ್ 2026

ನಗರದ ಸುಸ್ಥಿರ ಅಭಿವೃದ್ಧಿಗೆ ಚಿಂತನ-ಮಂಥನ: ಮಾರ್ಚ್ 7 ಮತ್ತು 8 ರಂದು ಮಂಗಳೂರು ಡಿಸೈನ್ ಸಮಿಟ್ 2026

ಮಂಗಳೂರು: ಕರಾವಳಿಯ ಹೆಮ್ಮೆಯ ನಗರಿ ಮಂಗಳೂರಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು, ಆಧುನಿಕ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಸಮಗ್ರ ಅಭಿವೃದ್ಧಿಯ ದಾರಿಯನ್ನು ಕಂಡುಕೊಳ್ಳಲು ಮಾರ್ಚ್ 7 ಮತ್ತು 8 ರಂದು ಸೇಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಆವರಣದಲ್ಲಿ 'ಮಂಗಳೂರು ಡಿಸೈನ್ ಸಮಿಟ್ 2026' ಆಯೋಜಿಸಲಾಗಿದೆ ಎಂದು ಅಲ್ಕಾ ಮನೋಜ್ ಹೇಳಿದರು.  ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ​'ವಿನ್ಯಾಸದ ಭವಿಷ್ಯ, ಪರಂಪರೆಯ ಗೌರವ' (Designing Futures, Honouring Heritage) ಎಂಬ ಆಶಯದೊಂದಿಗೆ ನಡೆಯಲಿರುವ ಈ ಎರಡು ದಿನಗಳ ಸಮ್ಮೇಳನವನ್ನು 'ದಿ ಓಹಾನಾ ಕಮ್ಯುನಿಟಿ ಫೌಂಡೇಶನ್' ಮತ್ತು ಸೇಂಟ್ ಅಲೋಶಿಯಸ್ ಸಂಸ್ಥೆ ಜಂಟಿಯಾಗಿ ಆಯೋಜಿಸಿವೆ.
​ಇತ್ತೀಚಿನ ವರ್ಷಗಳಲ್ಲಿ ನಗರವು ಎದುರಿಸುತ್ತಿರುವ ಅತಿಯಾದ ಮಳೆ, ಪ್ರವಾಹ, ಕಸದ ವಿಲೇವಾರಿ ಮತ್ತು ಮೂಲಸೌಕರ್ಯದ ಒತ್ತಡಗಳ ಬಗ್ಗೆ ತಜ್ಞರು ಬೆಳಕು ಚೆಲ್ಲಲಿದ್ದಾರೆ. ಸಮ್ಮೇಳನದಲ್ಲಿ ಮುಖ್ಯವಾಗಿ ನಾಲ್ಕು ವಿಷಯಗಳ ಮೇಲೆ ಗಮನಹರಿಸಲಾಗುವುದು. 
​ಪರಂಪರೆಯೊಂದಿಗೆ ವಿನ್ಯಾಸದ ಸಮನ್ವಯ.
​ಹವಾಮಾನ ಬದಲಾವಣೆಗೆ ಪೂರಕವಾದ ಭವಿಷ್ಯದ ಯೋಜನೆಗಳು.
​ವಸ್ತುಗಳು, ಕಸ ಮತ್ತು ವಲಯ ಆರ್ಥಿಕತೆ.
​ವಾಸಯೋಗ್ಯ ಮತ್ತು ಸಮಾವೇಶಿತ ನಗರಗಳ ನಿರ್ಮಾಣ ಅಗಿದೆ.

​ಈ ಸಮಿಟ್‌ನಲ್ಲಿ ಮಂಗಳೂರು ಸ್ಮಾರ್ಟ್ ಸಿಟಿಯ ಜನರಲ್ ಮ್ಯಾನೇಜರ್ ಅರುಣ್ ಪ್ರಭಾ, ವಾಸ್ತುಶಿಲ್ಪಿ ಅಶೋಕ್ ಮೆಂಡೋನ್ಸಾ, ಪರಿಸರ ತಜ್ಞರಾದ ಶರಾನ್ ಡಿಸೋಜಾ, ನಿರೇನ್ ಜೈನ್, ನೆಸ್ಟರ್ ಫೆರ್ನಾಂಡಿಸ್ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಪರಿಸರ ಅಧಿಕಾರಿ ಮಧು ಮನೋಹರ್ ಸೇರಿದಂತೆ 20ಕ್ಕೂ ಹೆಚ್ಚು ಗಣ್ಯರು ಭಾಗವಹಿಸಲಿದ್ದಾರೆ.
​ಚರ್ಚಾಗೋಷ್ಠಿಗಳ ಜೊತೆಗೆ ಟೆರೇರಿಯಂ ನಿರ್ಮಾಣ, ಹಳೆಯ ವಸ್ತುಗಳ ದುರಸ್ತಿ (Repair Fair), ಪರಿಸರ ಸ್ನೇಹಿ ಯೋಜನೆಗಳ ಪ್ರದರ್ಶನ, 'ಸಮುದ್ರದ ಮೊಟ್ಟೆ' ಚಲನಚಿತ್ರ ಪ್ರದರ್ಶನ ಹಾಗೂ ಸ್ಥಳೀಯ ಬ್ರ್ಯಾಂಡ್‌ಗಳ 'ಇಕೋ ಫ್ಲಿಯಾ ಮಾರುಕಟ್ಟೆ' ಪ್ರಮುಖ ಆಕರ್ಷಣೆಗಳಾಗಿವೆ.
​ಮಂಗಳೂರು ತನ್ನ ಅನನ್ಯತೆಯನ್ನು ಕಳೆದುಕೊಳ್ಳದೆ ಜವಾಬ್ದಾರಿಯುತವಾಗಿ ಬೆಳೆಯಲು ಈ ಸಮಿಟ್ ಒಂದು ವೇದಿಕೆಯಾಗಲಿದೆ ಎಂದು ತಿಳಿಸಿದ್ದಾರೆ. ಆಸಕ್ತ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ mangalurudesignsummit@gmail.com ಅಥವಾ ಮೊಬೈಲ್ ಸಂಖ್ಯೆ: +91 99457 53320 ಅನ್ನು ಸಂಪರ್ಕಿಸಬಹುದು.

Category
ಕರಾವಳಿ ತರಂಗಿಣಿ