image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಾ. 7ರಂದು ಜೆಪ್ಪು ಮೊರ್ಗನ್ಸ್‌ಗೇಟ್‌ನಲ್ಲಿ ಇಫ್ತಾರ್ ಸೌಹಾರ್ದ ಕೂಟ

ಮಾ. 7ರಂದು ಜೆಪ್ಪು ಮೊರ್ಗನ್ಸ್‌ಗೇಟ್‌ನಲ್ಲಿ ಇಫ್ತಾರ್ ಸೌಹಾರ್ದ ಕೂಟ

ಮಂಗಳೂರು: ಭಾವೈಕ್ಯತೆಯ ಸಂಕೇತವಾಗಿ ಕಳೆದ 10 ವರ್ಷಗಳಿಂದ ದೀಪಾವಳಿ, ಕ್ರಿಸ್ಮಸ್ ಹಾಗೂ ರಂಜಾನ್ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿರುವ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಅವರ ನೇತೃತ್ವದಲ್ಲಿ ಈ ವರ್ಷವೂ '11ನೇ ವರ್ಷದ ಇಫ್ತಾರ್ ಸೌಹಾರ್ದ ಕೂಟ'ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಕಾರ್ಪೋರೇಟರ್ ಜೆ ನಾಗೇಂದ್ರ ಕುಮಾರ್  ಮಾಹಿತಿ ನೀಡಿದರು. 
ಮಾರ್ಚ್ 7, 2026ರ ಶನಿವಾರದಂದು ಮಂಗಳೂರಿನ ಜೆಪ್ಪು ಮೊರ್ಗನ್ಸ್‌ಗೇಟ್‌ನ ಪಾಲೆಮಾರ್ ಗಾರ್ಡನ್‌ನಲ್ಲಿ ಸಂಜೆ 5:00 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಆರಂಭವಾಗಲಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ವಿಶೇಷ ಸಮಿತಿಯೊಂದನ್ನು ರಚಿಸಲಾಗಿದೆ ಎಂದರು. 
ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ (ಶ್ರೀಧಾಮ ಮಾಣಿಲ ಮಹಾಲಕ್ಷ್ಮೀ ಕ್ಷೇತ್ರ)
​ಜನಾಬ್ ರಿಯಾಜ್ ಫೈಝಿ ಕಕ್ಕಿಂಜೆ (ಧರ್ಮಗುರುಗಳು, ಕುದ್ರೋಳಿ ಜುಮ್ಮಾ ಮಸೀದಿ)
​ರೆ|ಫಾ| ಜೆ.ಬಿ. ಸಲ್ದಾನ (ಸಾರ್ವಜನಿಕ ಸಂಪರ್ಕಾಧಿಕಾರಿ, ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯ)
​ಪ್ರೊ. ಪಿ.ಎಲ್. ಧರ್ಮ (ಕುಲಪತಿಗಳು, ಮಂಗಳೂರು ವಿಶ್ವವಿದ್ಯಾನಿಲಯ)
​ಶ್ರೀ ಜೆ. ಕೃಷ್ಣ ಪಾಲೆಮಾರ್ (ಮಾಜಿ ಸಚಿವರು ಹಾಗೂ ಅಧ್ಯಕ್ಷರು, ಪಾಲೆಮಾರ್ ಸಮೂಹ ಸಂಸ್ಥೆಗಳು)
​ಇವರೊಂದಿಗೆ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಸಂಜೆ ಸುಮಾರು 6:30ಕ್ಕೆ ಉಪವಾಸ ಬಿಡುವ ಸಮಯದಲ್ಲಿ ನಮಾಜ್ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಆಗಮಿಸಿದ ಎಲ್ಲಾ ಸರ್ವಧರ್ಮೀಯ ಬಂಧುಗಳಿಗೆ ಸೌಹಾರ್ದಯುತ ಸಹಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
​ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎನ್.ಪಿ. ಮನಿರಾಜ್, ಮುನೀಶ್ ಬೇಕಾಲ್, ಇಮ್ರಾನ್ ಕುದ್ರೋಳಿ, ಸತೀಶ್ ಪೆಂಗಲ್, ಚಂದ್ರಹಾಸ್ ಪೂಜಾರಿ ಕೋಡಿಕಲ್ ಹಾಗೂ ಮಹಮ್ಮದ್ ನವಾಜ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ