image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಡ್ಯಾರಿನಲ್ಲಿ ಮಾ. 5ರಂದು ಗೋ ನಂದಿ ಪರಿವಾರ ರಥಯಾತ್ರೆಗೆ ಚಾಲನೆ

ಅಡ್ಯಾರಿನಲ್ಲಿ ಮಾ. 5ರಂದು ಗೋ ನಂದಿ ಪರಿವಾರ ರಥಯಾತ್ರೆಗೆ ಚಾಲನೆ

ಮಂಗಳೂರು: ರಾಧಾಸುರಭಿ ಗೋ ಮಂದಿರ ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ (ರಿ), ಬ್ರಹ್ಮಗಿರಿ ಗೋವಿನ ತೋಟ, ಪುದು ಬಂಟ್ವಾಳ ಇದರ ವತಿಯಿಂದ "ಗೋ ನಂದಿ ಪರಿವಾರ ರಥಯಾತ್ರೆ"ಯ ಉದ್ಘಾಟನಾ ಕಾರ್ಯಕ್ರಮವು ಮಾರ್ಚ್ 5ರಂದು ಸಂಜೆ 5:00 ಗಂಟೆಗೆ ಅಡ್ಯಾರು ಕಟ್ಟೆಯ ವೀರಾಂಜನೇಯ ದೇವಸ್ಥಾನದ ಬಳಿ ನಡೆಯಲಿದೆ ಎಂದು ಟ್ರಸ್ಟ್‌ನ ಭಕ್ತಿ ಭೂಷಣ್ ದಾಸ್ ಗುರೂಜಿ ತಿಳಿಸಿದ್ದಾರೆ.

​ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಥಯಾತ್ರೆಯ ಉದ್ದೇಶ ಮತ್ತು ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿದರು.  ಕಳೆದ 30 ವರ್ಷಗಳಿಂದ ದೇಶದ ವಿವಿಧೆಡೆ ಗೋ ಮಂದಿರಗಳನ್ನು ಸ್ಥಾಪಿಸಿ, ಗೋಮಾತೆಯ ರಕ್ಷಣೆ ಮತ್ತು ಸೇವೆಯಲ್ಲಿ ಟ್ರಸ್ಟ್ ನಿರತವಾಗಿದೆ. ರೈತರ ಮನೆಮನೆಯಲ್ಲಿ ಗೋ ಸಾಕಣೆಗೆ ಪ್ರೋತ್ಸಾಹ, ನಾಡಿ ಚಿಕಿತ್ಸೆ ಮತ್ತು ಗವ್ಯ ಉತ್ಪನ್ನಗಳ ತಯಾರಿಕೆಯ ಬಗ್ಗೆ ಪ್ರಶಿಕ್ಷಣ ನೀಡಲಾಗುತ್ತಿದೆ. ಗೋಕಥೆ ಹಾಗೂ ರಥಯಾತ್ರೆಗಳ ಮೂಲಕ ಜನರಲ್ಲಿ ಗೋಮಾತೆಯ ಮಹತ್ವದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ವಿಡಿಯೋಗಾಗಿ ಕ್ಲಿಕ್ ಮಾಡಿ
​ಬ್ರಹ್ಮಗಿರಿ ಕೇಂದ್ರ: ಬಂಟ್ವಾಳ ತಾಲೂಕಿನ ಪುದು ಗ್ರಾಮದ ಬ್ರಹ್ಮಗಿರಿಯಲ್ಲಿರುವ 'ರಾಧಾಸುರಭಿ ಗೋ ಮಂದಿರ'ದ ಮೂಲಕ ಗೋ ಸಂಪತ್ತು, ಜಲ, ವನ ಹಾಗೂ ಭೂ ಸಂಪತ್ತನ್ನು ಉಳಿಸುವ ಕಾರ್ಯ ನಡೆಯುತ್ತಿದೆ. ಇದರೊಂದಿಗೆ ಭಾಗವತ ಮತ್ತು ಭಕ್ತಿಗೀತೆಗಳ ಪ್ರಚಾರವನ್ನೂ ಕೈಗೊಳ್ಳಲಾಗಿದೆ.
​ದೈನಂದಿನ ತರಬೇತಿ: ಬ್ರಹ್ಮಗಿರಿ ಗೋವಿನ ತೋಟದಲ್ಲಿ ಪ್ರತಿದಿನ ಬೆಳಗ್ಗೆ 10:00ರಿಂದ 12:00 ಗಂಟೆಯವರೆಗೆ ಆಸಕ್ತರಿಗೆ ವಿಶೇಷ ಪ್ರಶಿಕ್ಷಣ ತರಬೇತಿ ನೀಡಲಾಗುವುದು ಎಂದು ಅವರು ವಿವರಿಸಿದರು.
​ಪತ್ರಿಕಾಗೋಷ್ಠಿಯಲ್ಲಿ ಪ್ರವೀಣ್ ಸರಳಾಯ, ನಿವೇದಿತಾ ಶೆಟ್ಟಿ, ರಮೇಶ್ ಮುಂತಾದವರು ಉಪಸ್ಥಿತರಿದ್ದರು.

 

Category
ಕರಾವಳಿ ತರಂಗಿಣಿ