image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಕೆಳಗಿನ ಸರಿಪಲ್ಲದಲ್ಲಿ ನಮೋ ನಿವಾಸ ಹಸ್ತಾಂತರ

ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಕೆಳಗಿನ ಸರಿಪಲ್ಲದಲ್ಲಿ ನಮೋ ನಿವಾಸ ಹಸ್ತಾಂತರ

ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಕೆಳಗಿನ ಸರಿಪಲ್ಲದಲ್ಲಿ, ಆರ್‌.ಎಸ್.ಎಸ್. ಶತಮಾನೋತ್ಸವದ ಸೇವಾ ಚಟುವಟಿಕೆಗಳ ಭಾಗವಾಗಿ ನಿರ್ಮಾಣಗೊಂಡ ನೂತನ ಮನೆ "ನಮೋ ನಿವಾಸ" ದ ಹಸ್ತಾಂತರ ಕಾರ್ಯಕ್ರಮವು ಗಣ್ಯರ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ನಡೆಯಿತು. ಸರಸ್ವತಿ ಫ್ರೆಂಡ್ಸ್ ಕ್ಲಬ್ ಬಳಿ ನಡೆದ ಈ ಕಾರ್ಯಕ್ರಮದಲ್ಲಿ, ಫಲಾನುಭವಿ ಮನೋಜ್ ದಂಪತಿಗಳಿಗೆ ಮನೆಯ ಕೀಲಿ ಕೈಯನ್ನು ಹಸ್ತಾಂತರಿಸಲಾಯಿತು.
ವಿಡಿಯೋಗಾಗಿ ಕ್ಲಿಕ್ ಮಾಡಿ
 ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಪ್ರಾಂತ ಸಹ ಕಾರ್ಯವಾಹರಾದ ಪ್ರಕಾಶ್ ಪಿ ಎಸ್. ರವರು ಕೀಲಿ ಕೈ ಹಸ್ತಾಂತರಿಸಿ ಮಾತನಾಡಿ, "ಸಂಘದ ಶತಾಬ್ದಿ ವರ್ಷದ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಸೇವಾ ಚಟುವಟಿಕೆಗಳ ಭಾಗವಾಗಿ ಈ ಮನೆ ನಿರ್ಮಾಣವಾಗಿದೆ. ಶಾಸಕ ವೇದವ್ಯಾಸ ಕಾಮತ್ ರವರ ವಿಶೇಷ ಮುತುವರ್ಜಿ ಮತ್ತು ದಾನಿಗಳ ಸಹಕಾರದಿಂದ ಸುಂದರವಾದ ಮನೆ ರೂಪುಗೊಂಡಿದೆ. ಈ ಕೇಂದ್ರವು ಭವಿಷ್ಯದಲ್ಲಿ ಕೇವಲ ನಿವಾಸವಾಗದೆ, ಸೇವೆ, ಸಂಸ್ಕಾರ ಮತ್ತು ರಾಷ್ಟ್ರೀಯ ವಿಚಾರಧಾರೆಗಳ ನಿರಂತರ ಚಟುವಟಿಕೆಗಳ ಕೇಂದ್ರವಾಗಲಿ," ಎಂದು ಹಾರೈಸಿದರು.

ಸಂಘದ ವಿಭಾಗ ಕಾರ್ಯವಾಹ ಹರಿಕೃಷ್ಣ ಮಾತನಾಡಿ, ಶಾಸಕ ಕಾಮತ್ ರವರ ಕುಟುಂಬ ಸಮಾಜಕ್ಕೆ ಸಂಪೂರ್ಣ ಸಹಕಾರ ನೀಡುತ್ತಾ ಬಂದಿದೆ. ಇದು ಶಾಸಕರ ನೇತೃತ್ವದಲ್ಲಿ ನಿರ್ಮಾಣವಾಗುತ್ತಿರುವ ಎಂಟನೇ ಮನೆಯಾಗಿದ್ದು, ಒಬ್ಬ ಜನಪ್ರತಿನಿಧಿ ಅಭಿವೃದ್ಧಿಯ ಜೊತೆಗೆ ಜನಸೇವೆಯಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು ಎಂಬುದಕ್ಕೆ ಅವರು ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು. ಸಂಘಕ್ಕೆ ಪ್ರತಿ ಮನೆಯೂ ಮುಖ್ಯವಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಮನೆಗಳೇ ದೊಡ್ಡ ಶಕ್ತಿಯಾಗಿದ್ದವು ಎಂದು ನೆನಪಿಸಿಕೊಂಡರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, "2018-19ರ ಪ್ರಕೃತಿ ವಿಕೋಪದಿಂದ ಈ ಮನೆ ಸಂಪೂರ್ಣ ಕುಸಿದಿತ್ತು. ಈ ಹಿಂದೆ ಇಂತಹ ಅವಘಡಗಳಿಗೆ ಕೇವಲ 1.20 ಲಕ್ಷ ಪರಿಹಾರ ಸಿಗುತ್ತಿತ್ತು. ಆದರೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಇದನ್ನು 5 ಲಕ್ಷಕ್ಕೆ ಏರಿಸಿ ಬಡವರಿಗೆ ನೆರವಾಗಿದ್ದರು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಆ ಮೊತ್ತವನ್ನು ಮತ್ತೆ 1.20 ಲಕ್ಷಕ್ಕೆ ಇಳಿಸಿರುವುದು ಖೇದಕರ," ಎಂದರು. ದಾನಿಗಳ ಸಹಕಾರ ಮತ್ತು ರಮೇಶ್ ಕಂಡೆಟ್ಟು ರವರ ವಿಶೇಷ ಶ್ರಮದಿಂದ ಈ ಮನೆ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಸತೀಶ್ ಕುಂಪಲ, ಪ್ರೇಮಾನಂದ ಶೆಟ್ಟಿ, ರಮೇಶ್ ಹೆಗ್ಡೆ, ರಮೇಶ್ ಕಂಡೆಟ್ಟು (ಮಂಡಲ ಅಧ್ಯಕ್ಷರು), ರೂಪಶ್ರೀ ಪೂಜಾರಿ, ಅಶ್ವಿತ್ ಕೊಟ್ಟಾರಿ, ಪ್ರವೀಣ್ ನಿಡ್ಡೇಲ್, ಮೋಹನ್ ಪೂಜಾರಿ, ಕಿರಣ್ ರೈ, ರಾಮ್ ಪ್ರಸಾದ್, ವಿಜಯ್ ಭಂಡಾರಿ, ನರೇಶ್ ಸರಿಪಲ್ಲ, ಸುರೇಶ್ ಆಚಾರ್, ಶರಣ್ ಸರಿಪಲ್ಲ, ನಿತ್ಯಾನಂದ, ದೀಪಕ್ ಪೈ, ಅಶೋಕ್ ಉಮಿಕಾನ್, ಈಶ್ವರ್.ಕೆ, ವಿಶ್ವನಾಥ್, ಕಿಶೋರ್, ನಿಕಟ ಪೂರ್ವ ಪಾಲಿಕೆ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ