image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶ್ರೀ ಕ್ಷೇತ್ರ ಸಸಿಹಿತ್ತು ಶ್ರೀ ಭಗವತಿ ದೇವಸ್ಥಾನ ಬ್ರಹ್ಮಕಲಶೋತ್ಸವಕ್ಕೆ ಸಕಲ ಸಜ್ಜು

ಶ್ರೀ ಕ್ಷೇತ್ರ ಸಸಿಹಿತ್ತು ಶ್ರೀ ಭಗವತಿ ದೇವಸ್ಥಾನ ಬ್ರಹ್ಮಕಲಶೋತ್ಸವಕ್ಕೆ ಸಕಲ ಸಜ್ಜು

ಮಂಗಳೂರು : ಶ್ರೀ ಕ್ಷೇತ್ರ ಸಸಿಹಿತ್ತು ಶ್ರೀ ಭಗವತಿ ದೇವಸ್ಥಾನದಲ್ಲಿ ಮಾರ್ಚ್ 4 ರಿಂದ 8 ರ ವರೆಗೆ ಅದ್ದೂರಿಯಾಗಿ  ನಡೆಯಲಿರುವ ಬ್ರಹ್ಮಕಲಶೋತ್ಸವಕ್ಕೆ ಸಕಲ ಸಜ್ಜಾಗಿದೆ  ಎಂದು ದೇವಸ್ಥಾನದ ಕಾರ್ಯಧ್ಯಕ್ಷರಾದ ವಾಮನ ಇಡ್ಯಾ ತಿಳಿಸಿದ್ದಾರೆ. ಶ್ರೀ ಕ್ಷೇತ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 1995 ಮತ್ತು 2014ರಲ್ಲಿ ಯಶಸ್ವಿಯಾಗಿ ನೆರವೇರಿದ ಬ್ರಹ್ಮಕಲಶೋತ್ಸವಗಳ ನಂತರ, 2026ರಲ್ಲಿ ನಡೆಯಲಿರುವುದು  ದೇವಸ್ಥಾನದ 3ನೇ ಬ್ರಹ್ಮಕಲಶೋತ್ಸವಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ.  ಎಪ್ರಿಲ್ 10 ರಂದು ನಡಾವಳಿ ಉತ್ಸವ ಹಾಗೂ ಎಪ್ರಿಲ್ 11 ರಿಂದ 16 ರ ಗರೆಗೆ ಭರಣಿ ಮಹೋತ್ಸವ ನಡೆಯಲಿದೆ ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲು ಮಾತನಾಡಿ, 
ಬ್ರಹ್ಮಕಲಶೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು ದೇವಸ್ಥಾನದ ಸುತ್ತಲೂ ಇಂಟರ್ ಲಾಕ್ ಅಳವಡಿಕೆ ದೇವಳದ ಹೊರಾಂಗಣ ಪ್ರದಕ್ಷಿಣೆ ಸುಲಭ ಸಾಧ್ಯವಾಗಲಿದೆ ಎಂದರು.
 MLC ನಿಧಿಯ ಮೂಲಕ ದೇವಸ್ಥಾನದ ಎದುರು ಭಾಗದಲ್ಲಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದು ಶಾಸಕ ಶ್ರೀ ಉಮಾನಾಥ ಕೋಟ್ಯಾನ್ ಅವರ ವತಿಯಿಂದ ಹಳೆಯಂಗಡಿ ರಸ್ತೆಯಿಂದ ಸಸಿಹಿತ್ತು ರಸ್ತೆವರೆಗೆ 10 ಲಕ್ಷ ಅನುದಾನದಡಿಯಲ್ಲಿ ಡಾಮರೀಕರಣ ಮಾಡಲಾಗಿದೆ ಎಂದರು.

For Instagram video

ದಾನಿಗಳ ನೆರವಿನಿಂದ ಸುಮಾರು 75 ಲಕ್ಷ ವೆಚ್ಚದಲ್ಲಿ ದೇವಳದ ಎರಡು ಪ್ರಧಾನ ಗೋಪುರಗಳ ಪುನರ್‌ನವೀಕರಣ ಮಾಡಲಾಗಿದೆ ದಾನಿಗಳ ನೆರವಿನಿಂದ ದೇವಸ್ಥಾನದ ಗರ್ಭಗುಡಿ, ಧ್ವಜಸ್ತಂಭ ಹಾಗೂ ಹೂ ಹಾಕುವ ಕಲ್ಲುಗಳಿಗೆ ತಾಮ್ರದ ಹೊದಿಕೆ ಸುಮಾರು ₹30 ಲಕ್ಷ ವೆಚ್ಚವಾಗಿದ್ದು ಗರ್ಭಗುಡಿಯ ಬಾಗಿಲಿನ ಚೌಕಟ್ಟುಗಳಿಗೆ ಸುಮಾರು 40 ಲಕ್ಷ ವೆಚ್ಚದಲ್ಲಿ ಬೆಳ್ಳಿಯ ಹೊದಿಕೆ ಹೊರಿಸಲಾಗಿದೆ.

ದೇವಸ್ಥಾನದ ಹೊರಾಂಗಣ ಒಳಾಂಗಣ ಸುತ್ತು ಪೌಳಿಗಳಿಗೆ ಖ್ಯಾತ ಶಿಲ್ಪಿ ಸುಧಾಕ‌ರ್ ಶಿವಮೊಗ್ಗ ಇವರ ನೇತೃತ್ವದಲ್ಲಿ ನೂತನ ವಿನ್ಯಾಸದ ಕಾರ್ನಿಷ್ ಕೆಲಸ ಜೊತೆಗೆ 20 ವಿವಿಧ ದೇವರುಗಳ ಮೂರ್ತಿ ರಚನೆ ಸುಮಾರು ₹50 ಲಕ್ಷ ವೆಚ್ಚದಲ್ಲಿ ನಡೆದಿದ್ದು ದೇವಸ್ಥಾನದ ಒಳಾಂಗಣದ ಗೋಡೆಗಳಿಗೆ ಸುಮಾರು ₹15 ಲಕ್ಷ ವೆಚ್ಚದಲ್ಲಿ ಗ್ರಾನೈಟ್ ಅಳವಡಿಸಲಾಗಿದೆ.

ದೇವಸ್ಥಾನದ ಸುತ್ತಲೂ ಆವರಣ ಗೋಡೆ ನಿರ್ಮಾಣ ಸುಮಾರು ₹25 ಲಕ್ಷ ವೆಚ್ಚದಲ್ಲಿ ದೇವಸ್ಥಾನ ಮತ್ತು ಅನ್ನಛತ್ರಕ್ಕೆ ಹಾಗೂ ಸುತ್ತಲಿನ ಕಂಪೌಂಡ್ ಗಳಿಗೆ ಬಣ್ಣದ ಕೆಲಸ ₹25 ಲಕ್ಷ ರೂಪಾಯಿ ವೆಚ್ಚದಲ್ಲಿ 11. 12 ವರ್ಷಗಳ ನಂತರ ದೇವಸ್ಥಾನದ ಒಳಗಿನ ಮರಳು ಬದಲಾವಣೆ ಮಹಾ ಕರ ಸೇವೆಯ ಮೂಲಕ ನೆರವೇರಿಸಲಾಗಿದೆ ಎಂದರು.

Category
ಕರಾವಳಿ ತರಂಗಿಣಿ