image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ಚಿರತೆ ಹಾವಳಿ: ಅಧಿಕಾರಿಗಳ ಜೊತೆ ಶಾಸಕ ಕಾಮತ್ ಚರ್ಚೆ

ಮಂಗಳೂರಿನಲ್ಲಿ ಚಿರತೆ ಹಾವಳಿ: ಅಧಿಕಾರಿಗಳ ಜೊತೆ ಶಾಸಕ ಕಾಮತ್ ಚರ್ಚೆ

ಮಂಗಳೂರು: ನಗರದ ಕದ್ರಿ, ಶಕ್ತಿನಗರ ಪರಿಸರದಲ್ಲಿ ರಾತ್ರಿ ವೇಳೆ ಚಿರತೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್  ಅರಣ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಸಾರ್ವಜನಿಕರ ಹಿತದೃಷ್ಟಿ ಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಕದ್ರಿ ಕೈಬಟ್ಟಲ್, ಶಕ್ತಿನಗರದ ಕೋರ್ಡೆಲ್ ಪ್ರದೇಶಗಳಲ್ಲಿ ಚಿರತೆ ಓಡಾಡುತ್ತಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿತ್ತು. ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯಿಂದ ಬೋನುಗಳನ್ನು ಇಡಲಾಗಿದೆ. ಈ ಎರಡೂ ಭಾಗಗಳಲ್ಲಿ ಕಾಣಿಸಿಕೊಂಡ ಚಿರತೆ ಒಂದೇ ಆಗಿರುವ ಸಾಧ್ಯತೆಯೂ ಇದೆ. ಚಿರತೆ ಸಂಚಾರ ಮಾಡಿರುವ ಪ್ರದೇಶದಲ್ಲಿ ಹಗಲು ರಾತ್ರಿ ಗಸ್ತು ತಿರುಗಲು ಅರಣ್ಯ ಇಲಾಖೆ ಸಿಬ್ಬಂದಿಯ ತಂಡವನ್ನು ನಿಯೋಜಿಸಿದ್ದೇವೆ. ಸದ್ಯ ಚಿರತೆ ಇಲ್ಲೇ ಉಳಿದಿರದೆ, ಕಾಡಿಗೆ ಮರಳಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು.

ಸಾರ್ವಜನಿಕರು ಚಿರತೆ ಸಹಿತ ಯಾವುದೇ ಅಪಾಯಕಾರಿ ಕಾಡುಪ್ರಾಣಿಗಳು ಕಂಡು ಬಂದಲ್ಲಿ ತಿಳಿಸಿದರೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯ ವಾಗುತ್ತದೆ ಎಂದು ವಲಯ ಅರಣ್ಯಾಧಿಕಾರಿ  ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ