ಮಂಗಳೂರು : ಕಳೆದ 10 ವರ್ಷಗಳಿಂದ ಸರ್ವಧರ್ಮದ ಹಬ್ಬವಾದ ದೀಪಾವಳಿ, ಕ್ರಿಸ್ಮಸ್ ಹಾಗೂ ರಂಜಾನ್ ಹಬ್ಬವನ್ನುಸಾರ್ವಜನಿಕವಾಗಿ ಆಚರಿಸುತ್ತಾ ಬಂದಿದ್ದು, ಶಾಸಕರರಾದ ಐವನ್ ಡಿʼಸೋಜಾರವರ ನೇತೃತ್ವದಲ್ಲಿ 11ನೇ ವರ್ಷದ ಇಫ್ತಾರ್ ಕೂಟ ಕಾರ್ಯಕ್ರಮವು ಮಂಗಳೂರಿನ ಪಾಲೆಮಾರ್ ಗಾರ್ಡನ್‌ನಲ್ಲಿ ದಿನಾಂಕ:07/03/2026ರಂದು ಶನಿವಾರ ಸಂಜೆ ಗಂಟೆ 5:00ರಿಂದ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಶ್ರೀಧಾಮ ಮಾಣಿಲ ಇವರು, ಮಂಗಳೂರು ಮುಸ್ಲಿಂ ಧರ್ಮಗುರುಗಳಾದ ಕುದ್ರೋಳಿ ನಡುಪಲ್ಲಿಯ ಜನಾಬ್ ರಿಯಾಜ್ ಫೈಝಿ ಕಕ್ಕಿಂಜೆರವರು ಕ್ರೈಸ್ತ ಧರ್ಮಪ್ರಾಂತ್ಯದ ಸಾವಜನಿಕ ಸಂಪರ್ಕ ಅಧಿಕಾರಿ ರೇವ್. ಫಾದರ್. ಜೆ. ಬಿ. ಸಾಲ್ದಾನಾ, ಮಂಗಳೂರು ವಿಶ್ವವಿದ್ಯಾನಿಲಯ ಉಪಕುಲಪತಿಗಳು ಪ್ರೊ. ಪಿ.ಎಲ್.ಧರ್ಮರವರು ಭಾಗವಹಿಸಲಿದ್ದು, ಇವರುಗಳು ಸರ್ವಧರ್ಮದ ಸಂದೇಶವನ್ನು ನೀಡಲಿರುವರು ತದನಂತರ ಇಫ್ತಾರ್ ರ್ಕೂಟವನ್ನು ಏರ್ಪಾಡು ಮಾಡಲಾಗಿದ್ದು ಈ ಒಂದು ಪೂರ್ವಭಾವಿ ಸಭೆಯು ಐವನ್ ಡಿʼಸೋಜಾರವರ ಗೃಹಕಛೇರಿಯಲ್ಲಿ ನಡೆದಿದ್ದು, ಈ ಸಭೆಯ ಮೂಲಕ ಎಲ್ಲರಿಗೂ ಅಹ್ವಾನ ನೀಡಲು ಕಾರ್ಯಕ್ರಮದ ಬಗ್ಗೆ ಸಂಘಟನೆ ಮೂಲಕ ಚರ್ಚೆ ನಡೆಸಲಾಯಿತು.
ಈ ಸರ್ವಧರ್ಮದ ಸಮಾರಂಭವು ಸಾರ್ವಜನಿಕರಲ್ಲಿ ಸಹೋದರತ್ವ ಹಾಗೂ ಸಮಾನತೆ ಸಂದೇಶವನ್ನು ಮಾಡಬೇಕಾಗಿದ್ದು ಏಲ್ಲಾ ಧರ್ಮಗಳ ಹಬ್ಬವನ್ನು ಅಚರಣೆ ಮಾಡುವ ಮೂಲಕ ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಾಗಿ ಬದುಕುವಂತೆ ಶ್ರಮಿಸಬೇಕು ಎಂದು ಐವನ್ ಡಿʼಸೋಜಾರವರು ಕರೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಕಾರ್ಪೋರೇಟರ್ ನಾಗೇಂದ್ರ ಕುಮಾರ್, ಅಪ್ಪಿಲತ, ಭಾಸ್ಕರ್ ರಾವ್, ಸತೀಶ್ ಪೆಂಗಲ್, ಕಾಂಗ್ರೆಸ್ ಪಕ್ಷದ ನಾಯಕರು ಅಮೃತ್ ಕದ್ರಿ, ಮನುರಾಜ್.ಎಂ.ನ್, ಬಾಸಿಲ್ ರೋಡ್ರಿಗಸ್, ಆನಂದ್ ಸೋನ್ಸ್, ವಸಂತ್ ಶೆಟ್ಟಿ, ಗುಲಾಂ ಹೆಜಮಾಡಿ, ಡಿಂಪಲ್, ಜೇಮ್ಸ್ ಪ್ರವೀಣ್, ಹೈದರ್ ಬೋಳಾರ್, ನವಾಜ್ ಜೆಪ್ಪು, ಸವದ್ ಗೋನಡ್ಕ, ಅಶ್ರಫ್ ಬೆಂಗ್ರೆ, ಯುವ ಕಾಂಗ್ರೆಸ್ ನ ಬಶೀರ್ ಹಾಗೂ ಕ್ಲೈಡ್ ಮುಂತಾದವರು ಉಪಸ್ಥಿತರಿದ್ದರು.