ಮಂಗಳೂರು: ನಗರದ ಎಕ್ಕೂರು ನಡುಗುತ್ತು ಬಳಿ ಸುಸಜ್ಜಿತ ಮಂಗಳೂರು ಶೈಲಿಯ ಆರ್ಟಿಫಿಷಿಯಲ್ ಆಭರಣ ದ ಮಾರಟ ಹಾಗೂ ಒನ್ ಗ್ರಾಂ ಆಭರಣ ಬಾಡಿಗೆಯ ಭವ್ಯ ಮಳಿಗೆ "ಈಶಾಸ್ ಸ್ಪಾರ್ಕ್ಲೆ ಲೇನ್"(ISHA'S SPARKLE LANE) ಶುಭಾರಂಭಗೊಂಡಿತು. ಮಳಿಗೆ ಉದ್ಘಾಟಿಸಿದ ಖ್ಯಾತ ತುಳುಚಿತ್ರ ನಟ ಶ್ರೀ ಅರವಿಂದ ಬೋಳಾರ್ ಮಾತನಾಡಿ ಚಿನ್ನದ ಬೆಲೆ ಗಗನಕ್ಕೆ ಏರಿದ ಈ ಸಂದರ್ಭದಲ್ಲಿ ಇಂತಹ ಆರ್ಟಿಫಿಷಿಯಲ್ ಆಭರಣ ಬಾಡಿಗೆ ಹಾಗೂ ಮಾರಾಟ ಮಳಿಗೆ ಎಕ್ಕೂರು ನಲ್ಲಿ ಆರಂಭಗೊಂಡಿರುವುದು ಮಂಗಳೂರಿನ ಜನತೆಯಲ್ಲಿ ಖುಷಿ ತಂದಿದೆ ಎಂದರು.
ಪ್ರವೀಣ್ ಚಂದ್ರ ಆಳ್ವ ಮಾತನಾಡಿ ಬೆಳೆಯುತ್ತಿರುವ ಎಕ್ಕೂರು ವಾರ್ಡ್ ನಲ್ಲಿ ಈಶಾ' ಸ್ ಸ್ಪಾರ್ಕ್ಲೆ ಲೇನ್ ಎಕ್ಕೂರಿಗೆ ಕಿರೀಟ ಇದ್ದಂತೆ ಎಂದು ಸಂತಸ ವ್ಯಕ್ತಪಡಿಸಿದರು. ಕಮಲದೀಪ್ ಬಿಲ್ಡರ್ಸ್ ಪಾಲುದಾರರಾದ ಪ್ರದೀಪ್ ಕುಮಾರ್ ಶೆಟ್ಟಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮಾಲಕರಾದ ಜಯರಾಮ್ ಶೆಟ್ಟಿ, ಜಶ್ವಲ್ ಜೇ ಶೆಟ್ಟಿ ಶ್ರೀಮತಿ ಪೂರ್ವಿ ಜೇ ಶೆಟ್ಟಿ, ಬೇಬಿ ಈಶಾ ಜೆ ಶೆಟ್ಟಿ, ನ್ಯಾಯಾಧೀಶರಾದ ರವೀಂದ್ರನಾಥ ರೈ ಕಸ್ವಿ ಹಸಿರು ದಿಬ್ಬಣದ ಶ್ರೀಮತಿ ಶ್ರದ್ಧಾ ಕೇಶವ ರಾಮಕುಂಜ ಹಾಗೂ ಇನ್ನಿತರ ಗಣ್ಯರು ಭಾಗವಹಿಸಿದ್ದರು ಕಾರ್ಯಕ್ರಮವನ್ನು ಚೇತನ್ ಶೆಟ್ಟಿ ನಿರ್ವಹಿಸಿದರು.