image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ನ ಅಸಿಸ್ಟೆಂಟ್ ಪ್ರೊಫೆಸರ್ ಸುಪ್ರೀತಾ ಆರ್. ಕೆ. ಗೆ ಡಾಕ್ಟರೇಟ್ ಪದವಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ನ ಅಸಿಸ್ಟೆಂಟ್ ಪ್ರೊಫೆಸರ್ ಸುಪ್ರೀತಾ ಆರ್. ಕೆ. ಗೆ ಡಾಕ್ಟರೇಟ್ ಪದವಿ

ಮಂಗಳೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ  ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್  ಸುಪ್ರೀತಾ ಆರ್. ಕೆ.,  ಡಾ. ಗಣೇಶ್ ಎಚ್.ಆರ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ  " Enabling U ndergraduate Business Management Students in D. K. District of Karnataka to Make Informed Decisions Concerning Enterpreneurial Choice" ಎಂಬ ವಿಷಯದ ಕುರಿತಾದ ಮಹಾ ಪ್ರಬಂಧಕ್ಕೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದಿಂದ ನಿರ್ವಹಣಾ ವಿಭಾಗದಲ್ಲಿ ಡಾಕ್ಟರ್ ಆಫ್ ಫಿಲಾಸಫಿ (Ph.D) ಪದವಿ ಪ್ರದಾನ ಮಾಡಲಾಗಿದೆ.

ವಿಶ್ವವಿದ್ಯಾಲಯದ ಸಂಶೋದನಾ ಮತ್ತು ನವೀನತಾ ಮಂಡಳಿ ಹಾಗೂ ಪರೀಕ್ಷಕರ ಮಂಡಳಿಯ ಶಿಫಾರಸಿನ ಮೇರೆಗೆ ಇವರಿಗೆ ಪಿ. ಎಚ್.ಡಿ ಪದವಿ ಪ್ರದಾನ ಮಾಡಲಾಗಿದೆ.

ಇವರು ಮಾಜಿ   ಗ್ರಾಮ ಪಂಚಾಯತ್ ಕಾರ್ಯದರ್ಶಿ ಎ. ಸುರೇಶ್ ಭಟ್, ಹಾಗೂ ಸುಜಾತಾ ಭಟ್ ಇವರ ಪುತ್ರಿ, ಹಾಗೂ ಪತ್ರಕರ್ತ ರಜನ್ ಕುಮಾರ್ ಕಾವೂರು ರವರ ಪತ್ನಿ.

Category
ಕರಾವಳಿ ತರಂಗಿಣಿ