ಮಂಗಳೂರು: ಏರ್‌ಪೋರ್ಟ್ ಕೌನ್ಸಿಲ್ ಇಂಟರ್ನ್ಯಾಷನಲ್ (ACI) ವರ್ಲ್ಡ್ ವತಿಯಿಂದ ನೀಡಲಾಗುವ ಪ್ರತಿಷ್ಠಿತ '2025ರ ಎಎಸ್‌ಕ್ಯೂ (ASQ) ಪ್ರಶಸ್ತಿ'ಯಲ್ಲಿ 'ಜಾಗತಿಕವಾಗಿ ಅತ್ಯುತ್ತಮ ಆಗಮನ ವಿಮಾನ ನಿಲ್ದಾಣ' (Best Airport at Arrivals – Globally) ಎಂಬ ಹೆಗ್ಗಳಿಕೆಗೆ ಮಂಗಳೂರು ನಿಲ್ದಾಣ ಪಾತ್ರವಾಗಿದೆ. ಕಳೆದ ವರ್ಷ ಅಂದರೆ 2024ರಲ್ಲೂ ಇದೇ ವಿಭಾಗದಲ್ಲಿ ಮಂಗಳೂರು ವಿಮಾನ ನಿಲ್ದಾಣ ಜಾಗತಿಕ ಪ್ರಶಸ್ತಿ ಗೆದ್ದಿತ್ತು. ಈಗ ಸತತ ಎರಡನೇ ವರ್ಷವೂ ಈ ಗೌರವವನ್ನು ತನ್ನಲ್ಲೇ ಉಳಿಸಿಕೊಳ್ಳುವ ಮೂಲಕ, ಪ್ರಯಾಣಿಕರ ಸೇವೆ ಮತ್ತು ಸೌಕರ್ಯದಲ್ಲಿ ವಿಶ್ವದ ಅಗ್ರಗಣ್ಯ ನಿಲ್ದಾಣಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಪ್ರಶಸ್ತಿ ಆಯ್ಕೆಯ ಮಾನದಂಡಗಳು:
ಈ ಪ್ರಶಸ್ತಿಯು ಪ್ರಯಾಣಿಕರು ನೀಡುವ ನೇರ ಪ್ರತಿಕ್ರಿಯೆಯ (Real-time feedback) ಆಧಾರದ ಮೇಲೆ ನಿರ್ಧರಿಸಲ್ಪಡುತ್ತದೆ. ಆಗಮನದ ಅನುಭವ: ವಿಮಾನದಿಂದ ಇಳಿದ ನಂತರದ ಇಮಿಗ್ರೇಷನ್ ಪ್ರಕ್ರಿಯೆ. ಲಗೇಜ್ ವಿತರಣೆ: ಪ್ರಯಾಣಿಕರ ಲಗೇಜ್‌ಗಳನ್ನು ತ್ವರಿತವಾಗಿ ತಲುಪಿಸುವುದು.
ಪರಿಸರ ಮತ್ತು ಸ್ವಚ್ಛತೆ: ಟರ್ಮಿನಲ್‌ನ ಅಚ್ಚುಕಟ್ಟುತನ ಮತ್ತು ನೈರ್ಮಲ್ಯ. ದಾರಿ ತೋರುವಿಕೆ: ನಿಲ್ದಾಣದ ಒಳಗೆ ಸುಲಭವಾಗಿ ಸಂಚರಿಸಲು ಇರುವ ಮಾಹಿತಿ ಫಲಕಗಳು.
ವಿಶ್ವದ ಕೇವಲ 6 ನಿಲ್ದಾಣಗಳಲ್ಲಿ ಒಂದು:
2025ನೇ ಸಾಲಿನಲ್ಲಿ ಜಾಗತಿಕವಾಗಿ 'ಅತ್ಯುತ್ತಮ ಆಗಮನ ವಿಮಾನ ನಿಲ್ದಾಣ' ವಿಭಾಗದಲ್ಲಿ ಆಯ್ಕೆಯಾದ ವಿಶ್ವದ ಕೇವಲ ಆರು ವಿಮಾನ ನಿಲ್ದಾಣಗಳಲ್ಲಿ ಮಂಗಳೂರು ಕೂಡ ಒಂದಾಗಿದೆ.
ಇಸ್ತಾನ್ಬುಲ್‌ನಲ್ಲಿ ಪ್ರಶಸ್ತಿ ಪ್ರದಾನ:
ಸೆಪ್ಟೆಂಬರ್ 2, 2026 ರಂದು ಟರ್ಕಿಯ ಇಸ್ತಾನ್ಬುಲ್‌ನಲ್ಲಿ ನಡೆಯಲಿರುವ ಎಸಿಐ ವರ್ಲ್ಡ್‌ನ 'ಏರ್‌ಪೋರ್ಟ್ ಎಕ್ಸ್‌ಪೀರಿಯನ್ಸ್ ಸಮ್ಮಿಟ್'ನಲ್ಲಿ ಈ ಪ್ರಶಸ್ತಿಯನ್ನು ಅಧಿಕೃತವಾಗಿ ಪ್ರದಾನ ಮಾಡಲಾಗುವುದು.