image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಮಹಾಕಾಳಿಪಡ್ಪು ಅಂಗನವಾಡಿ ಕೇಂದ್ರ ಕಟ್ಟಡದ ಕಾಮಗಾರಿಯ ಗುದ್ದಲಿ ಪೂಜೆ

ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಮಹಾಕಾಳಿಪಡ್ಪು ಅಂಗನವಾಡಿ ಕೇಂದ್ರ ಕಟ್ಟಡದ ಕಾಮಗಾರಿಯ ಗುದ್ದಲಿ ಪೂಜೆ

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 55ನೇ ಅತ್ತಾವರ ವಾರ್ಡಿನ ಮಹಾಕಾಳಿಪಡ್ಪುವಿನಲ್ಲಿ ಸುಮಾರು 17 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕೇಂದ್ರ ಕಟ್ಟಡದ ಕಾಮಗಾರಿಯ ಗುದ್ದಲಿ ಪೂಜೆಯು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನಡೆಯಿತು. ನಂತರ ಮಾತನಾಡಿದ ಶಾಸಕರು, 2022-23ನೇ ಸಾಲಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ  ಬಸವರಾಜ್ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕ್ರಿಯಾಯೋಜನೆ ಮೂಲಕ ಮಂಜೂರಾದ ಈ ಕೇಂದ್ರದಲ್ಲಿ ಬೋಧನಾ ಕೊಠಡಿ, ಕಿಚನ್, ಶೌಚಾಲಯ ಸಹಿತ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ. ಈ ಕಾಮಗಾರಿಗೆ ರಾಜ್ಯದಲ್ಲಿ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ತಡೆ ನೀಡಿದ ವಿಳಂಬವಾಗಿತ್ತು. ಇದೀಗ ಅನೇಕ ಬಾರಿ ಮನವಿ ಮಾಡಿದ ನಂತರ ಹಿಂದಿನ ಅನುದಾನ ಮತ್ತೆ ಬಿಡುಗಡೆಗೊಂಡಿದ್ದು ಶೀಘ್ರದಲ್ಲಿ ಕಾಮಗಾರಿ ಮುಗಿದು ಇಲ್ಲಿನ ಮಕ್ಕಳು ಅಂಗನವಾಡಿಯಲ್ಲಿ ಆಡಿ ಬೆಳೆಯಲಿದ್ದಾರೆ. ಆ ಮೂಲಕ ಇಲ್ಲಿಗೊಂದು ಅಂಗನವಾಡಿ ಕೇಂದ್ರ ಬೇಕೆಂದು ಅನೇಕ ಬಾರಿ ಮನವಿ ಮಾಡಿದ್ದ ನಿಕಟಪೂರ್ವ ಪಾಲಿಕೆ ಸದಸ್ಯರಾದ ಶೈಲೇಶ್ ಶೆಟ್ಟಿಯವರ ಪ್ರಯತ್ನವೂ ಸಹಕಾರಗೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಪುಷ್ಪರಾಜ್ ಶೆಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶ್ವೇತಾ, ನಾರಾಯಣ ಶೆಟ್ಟಿ, ಪುಂಡಲೀಕ ಸುವರ್ಣ, ರಾಜರತ್ನ ಸನಿಲ್, ದೇವದಾಸ್ ಶೆಟ್ಟಿ, ರಾಜಗೋಪಾಲ್, ಪ್ರಮೋದ್ ಕೊಟ್ಟಾರಿ, ನಿತಿನ್, ಕಿಶನ್, ಅಶೋಕ್, ದಿನೇಶ್, ಪೂಜಾ, ಉಷಾ, ಸುಂದರಿ, ಪ್ರೇಮಲತಾ ನಾಯ್ಕ್, ಲೋಲಾಕ್ಷಿ, ಯೋಗೀಶ್, ಪ್ರವೀಣ್ ಪಟ್ನ, ಮಧು ಕುಲಾಲ್, ನಾರಾಯಣ ಕುಂದರ್, ಪಾಂಡೇಶ್ವರ ವಲಯದ ಮೇಲ್ವಿಚಾರಕಿ ಶ್ರೀಮತಿ ಅಶ್ವಿನಿ ಹಾಗೂ ಅನುಪಮಾ, ಮಹಾಕಾಳಿ ಪಡ್ಪು ಅಂಗನವಾಡಿ ಶಿಕ್ಷಕಿ ಶ್ರೀಮತಿ ಸುಮಿತ್ರ ಶೆಟ್ಟಿ, ಸಹಾಯಕಿ ಶ್ರೀಮತಿ ರೇಖಾ ಪ್ರಮುಖರಾದ ಜಯಮಾಲಾ, ನಜ್ಮಾ, ಭಾಸ್ಕರ, ವೆಂಕಪ್ಪ, ಅನ್ವರ್, ಮುಜೀಬ್, ಸಮದ್, ರಾಮಚಂದ್ರ, ಸುಂದರಿ, ಹೊನ್ನಮ್ಮ, ಮಕ್ಕಳ ಪೋಷಕರು, ಅಂಗನವಾಡಿ ಕಾರ್ಯಕರ್ತೆಯರು, ಸ್ಥಳೀಯರು, ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ