ಮಂಗಳೂರು : ಕರಾವಳಿಯಂತಹ ವಿಶಿಷ್ಟ ಸಂಸ್ಕೃತಿ ದೇಶದ ಯಾವುದೇ ಭಾಗಗಳಲ್ಲಿ ಕಾಣಲು ಸಾಧ್ಯವಿಲ್ಲ. ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾಗಿರುವ ಕಂಬಳ ಭವಿಷ್ಯದಲ್ಲಿಯೂ ಉಳಿಯಬೇಕೆನ್ನುವ ನಿಟ್ಟಿನಲ್ಲಿ ಸವಾಲುಗಳ ನಡುವೆಯೂ ಕಂಬಳ ಆಯೋಜಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಕಂಬಳ ಆಯೋಜನೆಯ ಮೂಲಕ ಸಂಸ್ಕೃತಿ ಉಳಿಸುವ ಕೆಲಸವಾಗುತ್ತಿದೆ ಎಂದು ಶಾಸಕ ಡಾ| ವೈ. ಭರತ್ ಶೆಟ್ಟಿ ಹೇಳಿದರು. ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ-ದೇವುಪೂಂಜ ಜೋಡುಕರೆ ಕಂಬಳ ಟ್ರಸ್ಟ್ ವತಿಯಿಂದ ತಿರುವೈಲು ಅಮೃತೇಶ್ವರ ದೇವಾಲಯದ ಮುಂಭಾಗದ ಕಂಬಳ ಗದ್ದೆಯಲ್ಲಿ14ನೇ ವರ್ಷದ ತಿರುವೈಲೋತ್ಸವ ಸಂಕುಪೂಂಜ-ದೇವುಪೂಂಜ ಜೋಡುಕರೆ ಕಂಬಳದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅದಾನಿ ಫೌಂಡೇಶನ್ ಅಧ್ಯಕ್ಷ ಕಿಶೋರ್‌ಆಳ್ವ ಅವರು ಉದ್ಘಾಟಿಸಿ, ಕಂಬಳ ನಮ್ಮ ಆಚರಣೆ, ಸಂಪ್ರದಾಯದೊಂದಿಗೆ ಬೆಸೆದು ಕೊಂಡಿದೆ. ಕಂಬಳ ಉಳಿವಿಗೆ ಅನೇಕ ಹೋರಾಟದಲ್ಲಿ ಭಾಗವಹಿಸಿದ್ದೇವೆ. ಬೈಂದೂರಿನಿಂದ ಸುಳ್ಯದ ವರೆಗೆ ನಿರಂತರವಾಗಿ ಕಂಬಳ ನಡೆಯುತ್ತಲೇ ಇದೆ. ತುಳುನಾಡಿನ ಯುವಕರು ಕ್ರೀಡೆಯಲ್ಲಿ ಮುಂದುವರಿಯಲು, ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಅವಕಾಶವಾಗುತ್ತದೆ ಎಂದರು. ಶಿಕ್ಷಣ, ಧಾರ್ಮಿಕ ಕ್ಷೇತ್ರದ ಸಾಧಕ ಡಾ| ಅಶ್ವಿನ್ ಶೆಟ್ಟಿ, ಕ್ರೀಡಾ ಕ್ಷೇತ್ರದ ಸಾಧಕ ರಶ್ಮಿತ್ ಡಿ. ಬಂಗೇರಾ, ಪುರೋಹಿತರಾದ ಡಾ| ಎಂ.ಜಿ. ಪ್ರವೀಣ್ ಭಟ್ ಅವರನ್ನು ಸಮ್ಮಾನಿಸಲಾಯಿತು. ತಿರುವೈಲು ಗುತ್ತು ಕಂಬಳ ಸ್ಥಾಪಕ, ಸಮಿತಿ ಅಧ್ಯಕ್ಷ ತಿರುವೈಲುಗುತ್ತು ನವೀನ್ ಚಂದ್ರ ಶೆಟ್ಟಿ, ಗೌರವಾಧ್ಯಕ್ಷ ಮಿಥುನ್ ಎಂ.ರೈ, ಕಾರ್ಯಾಧ್ಯಕ್ಷ ಟಿ. ಪ್ರವೀಣ್ ಚಂದ್ರ ಆಳ್ವ, ಪ್ರಧಾನ ಕಾರ್ಯದರ್ಶಿ ರಾಜ್‌ಕುಮಾರ್ ಶೆಟ್ಟಿತಿರುವೈಲುಗುತ್ತು, ಕಂಬಳ ಸಮಿತಿ ಪ್ರಧಾನ ಸಂಚಾಲಕರಾದ ಪ್ರಸಾದ್ ಮಲ್ಲಿ, ಡಾ| ಅಭಿಲಾಷ್ ಪಿ.ವಿ., ಮಾಜಿ ಮೇಯರ್‌ಸುಧೀರ್‌ಶೆಟ್ಟಿ ಕಣ್ಣೂರು, ನೀರುಮಾರ್ಗ ಗ್ರಾ.ಪಂ. ಅಧ್ಯಕ್ಷ ಶ್ರೀಧರ್‌ಪೂಜಾರಿ, ಮಾಂಡ್ ಸೊಭಾಣ್ ಅಧ್ಯಕ್ಷ ಲೂವಿ ಪಿಂಟೊ, ಉದ್ಯಮಿಗಳಾದ ಸುನಿಲ್ ಪಾಯಿಸ್, ಸುಧಾಕರ್‌ಶೆಟ್ಟಿ, ಧಾರ್ಮಿಕ ಮುಂದಾಳು ಶಿವರಾಮ ಮಲ್ಲಿ, ಪುತ್ತಿಗೆಗುತ್ತು ಬಾಲಕೃಷ್ಣ ಶೆಟ್ಟಿ, ಗುರುಪುರ ವ್ಯ.ಸೇ.ಸಹಕಾರಿ ಸಂಘದ ಅಧ್ಯಕ್ಷ ಓಂಪ್ರಕಾಶ್ ರೈ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಜೋತಿಷಿ ನಾಗರಾಜ್ ಪಂಡಿತ್, ಚಂದ್ರಶೇಖರ್‌ಕಾಪೆಟ್ಟಿಗುತ್ತು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್‌ಕಿರಣ್ ಮತ್ತಿತರರು ಉಪಸ್ಥಿತರಿದ್ದರು.