image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸುರತ್ಕಲ್ ಹೋಬಳಿ ಮಟ್ಟದ ಪ್ರಾಥಮಿಕ ವಿಭಾಗದ ಶಾಲಾ ಬಾಲಕ / ಬಾಲಕಿಯರ ಕ್ರೀಡಾಕೂಟ

ಸುರತ್ಕಲ್ ಹೋಬಳಿ ಮಟ್ಟದ ಪ್ರಾಥಮಿಕ ವಿಭಾಗದ ಶಾಲಾ ಬಾಲಕ / ಬಾಲಕಿಯರ ಕ್ರೀಡಾಕೂಟ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮಂಗಳೂರು ಉತ್ತರ ವಲಯ ಹಾಗೂ ದ. ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕರಂಬಾರು ಇವರ ಆಶ್ರಯದಲ್ಲಿ ಸುರತ್ಕಲ್ ಹೋಬಳಿ ಮಟ್ಟದ ಪ್ರಾಥಮಿಕ ವಿಭಾಗದ ಶಾಲಾ ಬಾಲಕ / ಬಾಲಕಿಯರ ಕ್ರೀಡಾಕೂಟ ಸುರತ್ಕಲ್ N. I. T. K ಕ್ರೀಡಾಂಗಣದಲ್ಲಿ ಜರುಗಿತು. ಕ್ರೀಡಾಕೂಟದ ಧ್ವಜಾರೋಹಣವನ್ನು ಶ್ರೀ ಜೇಮ್ಸ್ ಕುಟಿನೋ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳೂರು ಉತ್ತರ ವಲಯ ನೆರವೇರಿಸಿದರು, ಕಾರ್ಯಕ್ರಮ ಉದ್ಘಾಟನೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ದೇವಾಡಿಗ ನೆರವೇರಿಸಿದರು.

ಶಾಲಾ ಮುಖ್ಯ ಶಿಕ್ಷಕಿ ಉಷಾ ಕಿರಣ  ಕ್ರೀಡಾ ಜ್ಯೋತಿ ಹಸ್ತಾಂತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಶ್ರೀ ಗುಣಪಾಲ್ ದೇವಾಡಿಗ ವಹಿಸಿದ್ದರು. ಶ್ರೀಮತಿ ಅಗ್ನೇಸ್ ಡೊಟ್ಟಿ ಪಿಂಟೋ, BRP ಪ್ರಾಥಮಿಕ. ಶ್ರೀಮತಿ ರಾಮ್ ದಾಸ್ ಭಟ್ CRP ಪದ್ಮನೂರು. ಶ್ರೀ ಹೇಮಂತ್ CRP ಕರಂಬಾರು ಕ್ಲಸ್ಟರ್. ಶ್ರೀ ವಿನೋದ್ ಕುಮಾರ್ ದೈಹಿಕ ಶಿಕ್ಷಣ ಶಿಕ್ಷಕಿ ಸಂಘದ ರಾಜ್ಯ ಮಟ್ಟದ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಶಕುಂತಲ ದೈಹಿಕ ಶಿಕ್ಷಣ ಶಿಕ್ಷಕಿ ಜೋಕಟ್ಟೆ ಪ್ರಾಥಮಿಕ ಶ್ರೀಮತಿ ಆಶಾ. ಟಿ  ದೈಹಿಕ ಶಿಕ್ಷಣ ಶಿಕ್ಷಕಿ ಜೋಕಟ್ಟೆ ಪ್ರೌಢಶಾಲೆ. ಶ್ರೀ ನಿತಿನ್ ಪುತ್ರನ್ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಉಷಾ ಕಿರಣ ಸ್ವಾಗತಿಸಿದರು.ಶ್ರೀಮತಿ ಗೀತಾ ಎಸ್. ನಿರೂಪಿಸಿದರೆ, ಶ್ರೀಮತಿ ಮಾಲಾಶ್ರೀ ವಂದಿಸಿದರು.

Category
ಕರಾವಳಿ ತರಂಗಿಣಿ