image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜೆಪ್ಪಿನಮೊಗರು ಆಡಂಕುದ್ರು ಎಂಬಲ್ಲಿ ಕಾಲುಸಂಕ ರಚನೆಗೆ 30.00ಲಕ್ಷ ಮಂಜೂರು ಸ್ಥಳ ವಿಕ್ಷೀಸಿದ ಐವನ್‌ ಡಿʼಸೋಜಾ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜೆಪ್ಪಿನಮೊಗರು ಆಡಂಕುದ್ರು ಎಂಬಲ್ಲಿ ಕಾಲುಸಂಕ ರಚನೆಗೆ 30.00ಲಕ್ಷ ಮಂಜೂರು ಸ್ಥಳ ವಿಕ್ಷೀಸಿದ ಐವನ್‌ ಡಿʼಸೋಜಾ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜೆಪ್ಪಿನಮೊಗರು ವಾರ್ಡಿನ ಆಡಂಕುದ್ರು ಎಂಬಲ್ಲಿ ಮಳೆಹಾನಿ ಯೋಜನೆಯಿಂದ 30.00ಲಕ್ಷ ವೆಚ್ಚದಲ್ಲಿ ಕಾಲುಸಂಕ ರಚನೆ ಮಾಡಲು ಈ ಬಗ್ಗೆ ಅಂದಾಜುಪಟ್ಟಿ ರಚನೆಯಾಗಿದ್ದು ಈ ಬಗ್ಗೆ ಅದನ್ನು ಯಾವ ರೀತಿ ರಚನೆ ಮಾಡಬೇಕೆಂಬುದನ್ನು ಸ್ಥಳೀಯ ನಾಗರೀಕರೊಂದಿಗೆ ವಿಧಾನ ಪರಿಷತ್‌ ಶಾಸಕರಾದ ಶ್ರೀ ಐವನ್‌ ಡಿʼಸೋಜಾರವರು ಸ್ಥಳಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದರು ಈ ಸಂದರ್ಭದಲ್ಲಿ ಅನೇಕ ಗ್ರಾಮಸ್ಥರು ಮತ್ತು ಪ್ರಮುಖರಿದ್ದು, ಈ ಕಾಮಗಾರಿಯನ್ನು ಕೂಡಲೇ ನಡೆಸುವಂತೆ ಕೋರಿದರು.

ಈ ಕಾಲುಸಂಕ ಅನೇಕ ಮನೆಗಳಿಗೆ ಹೋಗುವ ದಾರಿಯಾಗಿದ್ದು, ಈ ಕಾಮಗಾರಿ ನಡೆದರೆ ಸುಮಾರು 35ಕುಟುಂಬಗಳಿಗೆ ಮಳೆಗಾಲದಲ್ಲಿ ಹಾದು ಹೋಗಲು ಸಾಧ್ಯವಾಗುತ್ತದೆ. ಇದು ಅತ್ಯಂತ ಪ್ರಮುಖವಾದ ಕಾಮಗಾರಿ ಇದನ್ನು ಕೂಡಲೇ ನಿರ್ವಹಿಸಿಕೊಡಬೇಕೆಂದು ಸ್ಥಳೀಯರು ಕೋರಿದರು ಈಗಾಗಲೇ 30.00ಲಕ್ಷ ಬಿಡುಗಡೆಯಾಗಿದ್ದು, ಇನ್ನೂ ಹೆಚ್ಚಿನ ಅನುದಾನ ಬೇಕಾದಲ್ಲಿ ಸರಕಾರದ ಜೊತೆ ಚರ್ಚೆ ಮಾಡುವುದಾಗಿ ಐವನ್‌ ಡಿʼಸೋಜಾ ತಿಳಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ನಾಯಕರಾದ ಪಿಯೂಷ್‌ ಮೊಂತೆರೋ, ಭಾಸ್ಕರ್‌ ರಾವ್‌ ಮನಪಾ ಇಂಜಿನಿಯರ್‌ ರೂಪಾ, ಜರ್ಸಿ ಡಿʼಸೋಜಾ, ರವಿ ಎಂ ಡಿʼಸೋಜಾ, ಮೋಂತಿ ಡಿʼಸೋಜಾ ಸಂತೋಷ್‌ ಡಿʼಸೋಜಾ ಜೀವನ್‌ ಅಡಂಕುದ್ರು, ದೂಜ ಡಿʼಸೋಜಾ ಜೋಸೆಫ್‌ ಡಿʼಸೋಜಾ, ಮುಂತಾದವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ