image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಫೆ.21ರಂದು ಕುದ್ರೋಳಿ ತೀರ್ಥಾಟನೆ:ಸಮಾಜದ ದಿಕ್ಕು ಬದಲಿಸಿದ ನಾರಾಯಣ ಗುರುವಿನೆಡೆಗೆ ನಡಿಗೆ

ಫೆ.21ರಂದು ಕುದ್ರೋಳಿ ತೀರ್ಥಾಟನೆ:ಸಮಾಜದ ದಿಕ್ಕು ಬದಲಿಸಿದ ನಾರಾಯಣ ಗುರುವಿನೆಡೆಗೆ ನಡಿಗೆ

ಮಂಗಳೂರು: ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಶಿವಲಿಂಗ ಪ್ರತಿಷ್ಟಾಪನೆ ಮಾಡಿದ ಸ್ಮರಣಾರ್ಥ ಫೆ. 21ರಂದು ಕ್ಷೇತ್ರದ ವತಿಯಿಂದ 'ಕುದ್ರೋಳಿ ತೀರ್ಥಾಟನೆ' ನಡಿಗೆಯನ್ನು ಆಯೋಜಿಸಲಾಗಿದೆ.ಬೆಳಗ್ಗೆ 9 ಗಂಟೆಗೆ ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ ಆರಂಭಗೊಳ್ಳುವ ತೀರ್ಥಾಟನೆಯು ನಗರದಲ್ಲಿ ಸುಮಾರು 7 ಕಿ.ಮೀ.ಗಳ ನಡಿಗೆಯ ಮೂಲಕ 11 ಗಂಟೆಗೆ ಕುದ್ರೋಳಿ ಕ್ಷೇತ್ರವನ್ನು ತಲುಪಲಿದೆ ಎಂದು ಕ್ಷೇತ್ರದ ಕೋಶಾಧಿಕಾರಿ ಆರ್ ಪದ್ಮರಾಜ್  ತಿಳಿಸಿದರು.
ಗುರು ಪ್ರಾರ್ಥನೆಯೊಂದಿಗೆ ಆರಂಭಗೊಳ್ಳುವ ಈ ತೀರ್ಥಾಟನೆಯು ಕ್ಷೇತ್ರ ತಲುಪಿದ ಬಳಿಕ ಬಿಲ್ವ ಪತ್ರಾರ್ಚನೆ ಹಾಗೂ ಸ್ವಾಮೀಜಿಗಳ ಆಶೀರ್ವಚನದೊಂದಿಗೆ ಕೊನೆಗೊಳ್ಳುತ್ತದೆ.
ತೀರ್ಥಾಟನೆ ನಡಿಗೆಯಲ್ಲಿ  ಹಳದಿ ವಸ್ತ್ರಧಾರಣೆಯೊಂದಿಗೆ 'ಓಂ ಶ್ರೀ ನಾರಾಯಣ ಪರಮ ಗುರುವೇ ನಮ: ಎಂಬ ಮಂತ್ರೋಚ್ಛಾರಣೆಯೊಂದಿಗೆ ನಡೆಯಲಿರುವ ಈ ಯಾತ್ರೆಯು ಕೇವಲ ಪಾದ್ರಾ ಮಾತ್ರ ಆಗಿರದೆ ಆತ್ಮಶುದ್ಧಿಯ ಪಥ, ಸಮಾಜ ಜಾಗೃತಿಯ ಸಂಕಲ್ಪವಾಗಿರಲಿದೆ. ಪ್ರಥಮ ಬಾರಿಗೆ ನಡೆಯುತ್ತಿರುವ ಈ ತೀರ್ಥಾಟನೆಯನ್ನು ಮುಂದಿನ ವರ್ಷದಿಂದ ಜಾತ್ರೋತ್ಸವದ ಸಂದರ್ಭ ಜೋಡಣೆಗೊಂಡು ನಡೆಯಲಿದೆ. ಈ ಸಾಲಿನ ತೀರ್ಥಾಟನೆಯಲ್ಲಿ ಕನಿಷ್ಟ 10000 ಗುರು ಅನುಯಾಯಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಕ್ಷೇತ್ರದ ಪ್ರಮುಖರಾದ ಉರ್ಮಿಳಾ ರಮೇಶ್ ಕುಮಾ‌ರ್, ದೇವೇಂದ್ರ ಪೂಜಾರಿ, ಕೃತಿನ್ ಧೀರಜ್ ಅಮೀನ್, ಕಿಶೋರ್ ಕುಮಾ‌ರ್, ಡಾ.ಬಿ.ಜಿ. ಸುವರ್ಣ, ಶೈಲೇಂದ್ರ ಸುವರ್ಣ, ಚಂದನ್ ದಾಸ್, ಗೌರವಿ ರಾಜಶೇಖ‌ರ್, ಜಯಾನಂದ್ ಮೊದಲಾದವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ