image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಫೆಬ್ರವರಿ 19 ರಂದು ಸಿ.ಐ.ಎಸ್.ಎಫ್ ವಂದೇ ಮಾತರಂ ಕರಾವಳಿ ಸೈಕ್ಲೋಥಾನ್

ಫೆಬ್ರವರಿ 19 ರಂದು ಸಿ.ಐ.ಎಸ್.ಎಫ್ ವಂದೇ ಮಾತರಂ ಕರಾವಳಿ ಸೈಕ್ಲೋಥಾನ್

ಮಂಗಳೂರು - ರಾಷ್ಟ್ರಗೀತೆ 'ವಂದೇ ಮಾತರಂ' ನ 150 ನೇ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರದ ಏಕತೆ, ಭದ್ರತೆ ಹಾಗೂ ಕರಾವಳಿ ಪ್ರದೇಶದ ಸಮೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಸಿ.ಐ.ಎಸ್.ಎಫ್ ವತಿಯಿಂದ ಸಿ.ಐ.ಎಸ್.ಎಫ್ ವಂದೇ ಮಾತರಂ ಕರಾವಳಿ ಸೈಕ್ಲೋಥಾನ್ - 2026 (ವಂದೇ ಮಾತರಂ- ಸುರಕ್ಷಿತಂ, ಸಮೃದ್ಧ ಭಾರತಂ) ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪಶ್ಚಿಮ ಕರಾವಳಿ ರ್ಯಾಲಿಯು ಫೆಬ್ರವರಿ 19 ರಂದು ಬೆಳಿಗ್ಗೆ 5.30 ರಿಂದ ಮಧ್ಯಾಹ್ನ 12.30 ರವರೆಗೆ ಮಂಗಳೂರಿನಿಂದ ಬೇಕಲ್ (ಕಾಸರಗೋಡು)ವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 19 ರಂದು ಬೆಳಿಗ್ಗೆ 7 ಗಂಟೆಗೆ ಪಣಂಬೂರು ಬೀಚ್‍ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೇಕಲ್‍ವರೆಗೆ ತೆರಳಲಿರುವ ಸಿ.ಐ.ಎಸ್.ಎಫ್ ವಂದೇ ಮಾತರಂ ಕರಾವಳಿ ಸೈಕ್ಲೋಥಾನ್ - 2026 ರ್ಯಾಲಿಗೆ ಚಾಲನೆ ನೀಡಲಾಗುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ