image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನೀರುಮಾರ್ಗ ಮಾಣೂರು ಸುಬ್ರಾಯ ದೇವರಿಗೆ ಸಂಭ್ರಮದ ಬ್ರಹ್ಮಕಲಶೋತ್ಸವ

ನೀರುಮಾರ್ಗ ಮಾಣೂರು ಸುಬ್ರಾಯ ದೇವರಿಗೆ ಸಂಭ್ರಮದ ಬ್ರಹ್ಮಕಲಶೋತ್ಸವ

ಮಂಗಳೂರು : ನೀರುಮಾರ್ಗದ ಮಾಣೂರು ಶ್ರೀ ‌ಸುಬ್ರಾಯ ದೇವಸ್ಥಾನದಲ್ಲಿ ಅಷ್ಟ ಬಂಧ ಪುನಃ‌ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ರವಿವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು. ವೇ. ಮೂ. ಬ್ರಹ್ಮ ಶ್ರೀ ಶಿಬರೂರು ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಸುಬ್ರಾಯ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಿತು. ಅನಂತರ ಪರಿಕಲಶಾಭಿಷೇಕ, ರುದ್ರಯಾಗ, ದುರ್ಗಾ ಹೋಮ, ಮಹಾಪೂಜೆ ಸಂಪನ್ನಗೊಂಡಿತು. ಮಧ್ಯಾಹ್ನ ನೂತನ ಧ್ವಜಸ್ಥಂಭದಲ್ಲಿ ಧ್ವಜಾರೋಹಣವಾಗಿ ಪಲ್ಲಪೂಜೆಯ ಬಳಿಕ ಮಹಾ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ‌ ದೇವರಿಗೆ ಹೂವಿನ ಪೂಜೆ, ಸಣ್ಣ ರಂಗಪೂಜೆ, ಬಲಿ ಉತ್ಸವಾದಿಗಳು, ಅಶ್ವ ವಾಹನ ಸೇವೆ ಹಾಗೂ ಪಲ್ಲಕ್ಕಿ ಸೇವೆ ನಡೆಯಿತು. ಮುಂಜಾನೆಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಭೇಟಿ‌ ನೀಡಿದರು. ಸಂಸದ ಕ್ಯಾ| ಬ್ರಿಜೇಶ್ ಚೌಟ ಸಹಿತ ವಿವಿಧ ಗಣ್ಯರು ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಕ್ಷೇತ್ರದ ವ್ಯವಸ್ಥಾಪನ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಶಿಧರ ಭಟ್ ಬೊಳ್ಮಾರಗುತ್ತು, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಎಸ್.‌ಗಣೇಶ್ ರಾವ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಕಾರ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಜೆ. ಮಾಣೂರು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯ್ ಕೋಟ್ಯಾನ್ ಪಡು, ಗೌರವಾಧ್ಯಕ್ಷರಾದ ಮಹಾಬಲ ಕೊಟ್ಟಾರಿ ಸೀತಾರಾಮ‌ ಮುಳಿಹಿತ್ಲು, ಭಾಸ್ಕರ್ ಕೆ. , ಆನಂದ‌ ಸರಿಪಳ್ಳ, ಕೋಶಾಧಿಕಾರಿ ಶೇಷಾದ್ರಿ ಭಟ್, ಉಪಾಧ್ಯಕ್ಷ ರಮೇಶ್ ಆಚಾರ್ಯ, ಕುಂಞಣ್ಣ ಶೆಟ್ಟಿ ಕೋರೆಟ್ಟುಗುತ್ತು, ಮಹಾಬಲ‌ ಕುಲಾಲ್, ಸಾಂಸ್ಕೃತಿಕ ಸಮಿತಿ ಪ್ರಧಾನ ಸಂಚಾಲಕ ಕೀರ್ತಿರಾಜ್ ಗುರಿಹಿತ್ಲು, ಪ್ರಧಾನ ಅರ್ಚಕ ರಾಜೇಶ್ ಭಟ್, ವ್ಯವಸ್ಥಾಪನ ಸಮಿತಿಯ ಮುರಳೀಧರ‌ ಕರ್ಕೇರ ಕೆಂಪುಗುಡ್ಡೆ, ರಾಧಾಕೃಷ್ಣ ರಾಮರಬೈಲು, ಕೃಷ್ಣ ನಾಯ್ಕ್ ಕುಟ್ಟಿಕಳ, ಉಮಾನಾಥ ಸುವರ್ಣ ನೀರುಮಾರ್ಗ, ಮೋಹಿನಿ ಮೋನಪ್ಪ ನೀರುಮಾರ್ಗ, ಧನವಂತಿ ವೇಣುಗೋಪಾಲ ಸರಿಪಲ್ಲ ಮೊದಲಾದವರಿದ್ದರು.

ಇಂದು‌ ಮಾಣೂರು ರಥೋತ್ಸವ

ಕ್ಷೇತ್ರದಲ್ಲಿ ಫೆ.9ರಂದು ಬೆಳಗ್ಗೆ 9 ಗಂಟೆಗೆ ನವಕ ಕಲಶ ಗಣಹೋಮ, ದೇವರಿಗೆ ಪಂಚಾಮೃತ ಅಭಿಷೇಕ, ಬಲಿ ಉತ್ಸವ ಮಯೂರ ವಾಹನ ಸೇವೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ 'ಮಾಣೂರು ರಥೋತ್ಸವ' ನಡೆಯಲಿದೆ. ಬಳಿಕ ಪಲ್ಲಪೂಜೆ, ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 5.30ರಿಂದ ಶ್ರೀ ದೇವರಿಗೆ ಹೂವಿನ ಪೂಜೆ, ದೊಡ್ಡ ರಂಗಪೂಜೆ ಬಲಿ ಉತ್ಸವಾದಿಗಳು, ಗಜ ವಾಹನ ಸೇವೆ, ಪ್ರಥಮ ತೆಪ್ಪೋತ್ಸವ, ಕೆರೆ ದೀಪೋತ್ಸವ, ಶಯನೋತ್ಸವ ನಡೆಯಲಿದೆ.

Category
ಕರಾವಳಿ ತರಂಗಿಣಿ