image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜ. 28ರಂದು ರಾಜ್ಯದ ವಿಶೇಷ ಶಾಲಾ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಾರ್ವತ್ರಿಕ ಮುಷ್ಕರ

ಜ. 28ರಂದು ರಾಜ್ಯದ ವಿಶೇಷ ಶಾಲಾ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಾರ್ವತ್ರಿಕ ಮುಷ್ಕರ

ಮಂಗಳೂರು: ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಂಘ(ನೋಂ) ಹಾಗೂ ಕರ್ನಾಟಕ ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟ (ನೋಂ) ಸಂಘಟನೆಗಳ ಮುಖ್ಯಸ್ಥರು ಬುದ್ಧಿಮಾಂದ್ಯತೆ, ಆಟಿಸಂ, ಮೆದುಳಿನ ಪಾಶ್ವ, ಬಹುವಿಧ ನ್ಯೂನತೆ, ನಿರ್ದಿಷ್ಟ ಕಲಿಕೆಯ ಸಮಸ್ಯೆ, ಶ್ರವಣ ದೋಹ ಹಾಗೂ ದೃಷ್ಟಿ ಮಾಂದ್ಯತೆ ಇರುವ ಮಕ್ಕಳಿಗಾಗಿ ವಿಶೇಷ ಶಾಲೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಸರಕಾರದಿಂದ ಸೂಕ್ತ ಸ್ಪಂದನೆ, ಹಾಗೂ ತೃಪ್ತ ಸಮಯಕ್ಕೆ ಅನುದಾನ ಬಾರದೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಸರಕಾರದ ಗಮನಕ್ಕೆ ತರುವ ಸಲುವಾಗಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ, ರಾಜ್ಯದ ವಿಶೇಷ ಶಾಲೆಗಳಲ್ಲಿ ಸೇವಾ ನಿರತರಾಗಿರುವ ವಿಶೇಷ ಶಿಕ್ಷಕರು-ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಯಾವುದೇ ಅನುದಾನ ಮೊದಕದೆ ಇರುವ 25 ವರ್ಷ ಮೀರಿದ ವಯಸ್ಕ ಬುದ್ದಿಮಾಂದ್ಯ ಯುವಕ-ಯುವತಿಯರು ಹಾಗೂ ಅವರ ಹೆತ್ತವರು ಈ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು  ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ವಸಂತ್ ಕುಮಾರ್ ಶೆಟ್ಟಿ ಹೇಳಿದ್ದಾರೆ. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯದ ಕೆಲವೊಂದು (34) ವಿಶೇಷ ಶಾಲೆಗಳಿಗೆ ಮಾತ್ರ 1982 ಅನುದಾನ ನೀತಿಯಂತೆ ಅನುದಾನ ನೀಡುತ್ತಿದೆ. ಅನುದಾನ ಇಲ್ಲದೆಯೇ ಸರಕಾರಿಯೇತರ ಸಂಸ್ಥೆಗಳು (NGO) ವಿಶೇಷ ಶಾಲೆಗಳನ್ನು ನಡೆಸಿಕೊಂಡು ಬರುತ್ತಿರುವುದು ಗಮನಾರ್ಹ ಅಂಶ, ರಾಜ್ಯ ಸಂಘದ ಪ್ರಬಲ ಹೋರಾಟದ ಫಲವಾಗಿ 2010-11ರಿಂದ ಅನುದಾನ ನೀಡಲು ನಿರ್ಧರಿಸಿದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನೂತನ ಅನುದಾನ ನೀತಿಯನ್ನು ಜಾರಿಗೆ ತಂದಿತು. ಅದುವೇ "ಶಿಶು ಕೇಂದ್ರಿಕೃತ ಸಹಾಯಧನ ಯೋಜನೆ" ಈ ಯೋಜನೆಯಡಿಯಲ್ಲಿ ಶಿಕ್ಷಕರಿಗೆ ವೇತನವಾಗಲಿ, ಅರ್ಥಿಕ ಭದ್ರತೆಯಾಗಲೀ ಇರಲಿಲ್ಲ, ಕೇವಲ ಗೌರವಧನ ಮಾತ್ರ 2010-11ರಲ್ಲಿ ವಿಶೇಷ ಶಿಕ್ಷಕರಿಗೆ ರೂ. 6500 ನೀಡುತ್ತಿದ್ದುದ್ದನ್ನು, 2014-15ರಲ್ಲಿ 13,500 ಮಾಡಿತು. ಬಳಿಕ 2022ರಲ್ಲಿ ರೂ. 20.250ಕ್ಕೆ ಏರಿಸಿ ಆದೇಶ ಮಾಡಿತು. ಶಿಶುಕೇಂದ್ರಿಕೃತ ಸಹಾಯಧನ ಯೋಜನೆಯಡಿಯ ಇದೀಗ ಸುಮಾರು 166 ಶಾಲೆಗಳು ಸಹಾಯಧನ ಪಡೆಯುತ್ತಿದೆ. ಆದರೆ 1982 ಅನುದಾನ ನೀತಿಯನ್ವಯ ಅನುದಾನ ಪಡೆಯುತ್ತಿರುವ ಶಾಲೆಗಳ ವಿಶೇಷ ಶಿಕ್ಷಕರು ಸುಮಾರು ರೂ. 60,000/-ದಿಂದ ರೂ. 80,000/ರದ ವರೆಗೆ ಪಡೆಯುತ್ತಿದ್ದಾರೆ. ಯಾಕಾಗಿ ಈ ತಾರತಮ್ಯ ಎಂದು ಪ್ರಶ್ನಿಸಿದರು. 

ಇನ್ನೊಂದು ಪ್ರಮುಖ ವಿಚಾರವೆಂದರೆ ಕರ್ನಾಟಕ ಸರಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮನವಿಯಂತೆ ಬೆಂಗಳೂರಿನ ಕೊರಮಂಗಲದಲ್ಲಿರುವ "ಸೈಮ್" (STEM) ಸಂಸ್ಥೆ, ರಾಜ್ಯದ ಸೇವಾ ಸಂಸ್ಥೆಗಳು ನಡೆಸುತ್ತಿರುವ ಶಿಶುಕೇಂದ್ರಿಕೃತ ಸಹಾಯಧನ ಪಡೆಯುತ್ತಿರುವ ಶಾಲೆಗಳು, ಸರಕಾರದೇ ನಡೆಸುತ್ತಿರುವ ಸರಕಾರಿ ಅನುದಾನಿತ ಶಾಲೆಗಳಿಗಿಂತ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಮೌಲ್ಯಮಾಪನ ವರದಿಯನ್ನು 2016 ಜುಲೈ ತಿಂಗಳಿನಲ್ಲಿ ಸರಕಾರಕ್ಕೆ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ರಾಜಾದಾದ್ಯಂತ ಸರಿ ಸುಮಾರು ಅಂದಾಜು 2000 ದಿಂದ 2500 ಪ್ರತಿನಿಧಿಗಳು ಈ ಮುಷ್ಕರದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

MCTT ತರಬೇತಿಯನ್ನು ಪಡೆದು ವಿಶೇಷ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಸುಮಾರು 176 ವಿಶೇಷ ಶಿಕ್ಷಕರ ಅನುದಾನ ಒಮ್ಮಿಂದೊಮ್ಮೆಗೆ ಇಲಾಖೆ ನಿಲ್ಲಿಸಿರುವುದು ದುಃಖದ ವಿಚಾರ, 2025-26ನೇ ಸಾಲಿನಿಂದ ಮುಂದಿನ 2 ವರ್ಷದ ವರೆಗೆ ಅವರನ್ನು ಮುಂದವರಿಸಲು ಸರಕಾರ ಅನುಮತಿ ನೀಡಿ ಆದೇಶ ಹೊರಡಿಸಿದೆ. ಇವರು ಅಲ್ಪಾವಧಿ RCI ತರಬೇತಿ ಪಡೆದ ಬಳಿಕ ಇವರನ್ನು ಖಾಯಂ ಆಗಿ ಮುಂದುವರಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳುವುದು ಎಂದರು.

ಪ್ರಮುಖ ಬೇಡಿಕೆಗಳು:

"ಸಮಾನ ಕೆಲಸಕ್ಕೆ ಸಮಾನ ವೇತನ" ಎಂಬ ಸಾಂವಿಧಾನಿಕ ಆಶಯದಂತೆ ಶಿತು ಕೇಂದ್ರಿಕೃತ ಅನುದಾನ ಪಡೆಯುತ್ತಿರುವ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ 1982 ಅನುದಾನದಡಿಯಲ್ಲಿ ಬರುವ ಸಿಬ್ಬಂದಿಗಳಿಗೆ ದೊರಕುವ ಎಲ್ಲಾ ಸೌಲಭ್ಯಗಳನ್ನು ಜಾರಿಗೊಳಿಸಬೇಕು.

ವಿಧಾನ ಸಭಾಧ್ಯಕ್ಷರ ನೇತೃತ್ವದಲ್ಲಿ 2 ಪ್ರಮುಖ ಸಭೆಗಳು ನಡೆದು ಆದರ ಆದೇಶದಂತೆ ಇಲಾಖಾ ನಿರ್ದೇಶಕರು ರಾಜ್ಯದ ವಿಶೇಷ ಶಾಲೆಗಳ ಅನುದಾನವನ್ನು 40% ಏರಿಕೆ ಮಾಡಿ ಸರಕಾರಕ್ಕೆ ನೀಡಿರುವ ಪ್ರಸ್ತಾವನೆಯನ್ನು ಈ ಕೂಡಲೇ ಮಂಜೂರು ಮಾಡಬೇಕು.

ಸವೋಚ್ಚ ನ್ಯಾಯಲಯ ನೀಡಿರುವ ಆದೇಶದ ಪ್ರಕಾರ ರಾಜ್ಯದ ವಿಶೇಷ ಶಾಲೆಗಳ ವಿಶೇಷ ಶಾಲೆಗಳ ವಿಶೇಷ ಶಿಕ್ಷಕರಿಗೆ ಪೂರ್ಣ ಪ್ರಮಾಣದ ಆರ್ಥಿಕ ಸೌಲಭ್ಯ ಒದಗಿಸಬೇಕು. 

ಶಿಶುಕೇಂದ್ರಿಕೃತ ಸಹಾಯಧನ ಯೋಜನೆಗೆ ಸಂಬಂಧಿಸಿದಂತೆ ಇರುವ ಮಾರ್ಗದರ್ಶಿಯನ್ನು ಪ್ರತೀ 5 ವರ್ಷಕೊಮ್ಮೆ ಪುನರ್‌ರಚಿಸಿ, ಆದಾಗ್ಯೂ ಈ ಬಗ್ಗೆ ನಡೆಯುವ ಸಭೆಗೆ ಆಯ್ದ ವಿಶೇಷ ಶಾಲೆಗಳ ಪರಿಣತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.

ವಿಶೇಷ ಶಾಲೆಗಳಿಗೆ ಇಲಾಖೆ ನೀಡುವ ಅನುದಾನವನ್ನು ಪ್ರತೀ ವರ್ಷ 2 ಕಂತುಗಳಲ್ಲಿ (ಜೂನ್ ಹಾಗೂ ಅಕ್ಟೋಬರ್ ತಿಂಗಳಲ್ಲಿ) ವಿಶೇಷ ಶಾಲೆಗಳೆಗೆ ನೀಡಬೇಕು.

. "ನನ್ನ ಬಳಿಕ ಯಾರು" ಎಂಬ ವಿಶೇಷ ಮಕ್ಕಳ ಹೆತ್ತವರ ಪ್ರಶ್ನೆಗೆ ಉತ್ತರವೆಂಬಂತೆ 25 ವರ್ಷ ವಯೋಮಿತಿ ಮೀರಿದ ಮಾನಸಿಕ ಭಿನ್ನ ಸಾಮರ್ಥ್ಯದ ಯುವಕ-ಯುವತಿಯರಿಗಾಗಿ ರಾಜ್ಯದ ಪ್ರತೀ ಜಿಲ್ಲೆಗಳಲ್ಲಿ ವೃತ್ತಿಪರ ಹಾಗೂ ಪೂರ್ವವೃತ್ತಿಪರ ಸಂಸ್ಥೆಗಳನ್ನು ಪ್ರಾರಂಭಿಸಲು ಇಲಾಖೆ ಅನುಮತಿ ನೀಡುವುದರೊಂದಿಗೆ ಅನುದಾನವನ್ನು ಮಂಜೂರು ಮಾಡಬೇಕು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮಹಾಬಲ ಮಾರ್ಲ, ಶ್ರೀ ವಿನೋದ್ ಶಣೈ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ