image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಂಸಿಎಫ್ ಹೆಸರು ಉಳಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು : ಐವನ್ ಡಿಸೋಜಾ

ಎಂಸಿಎಫ್ ಹೆಸರು ಉಳಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು : ಐವನ್ ಡಿಸೋಜಾ

ಮಂಗಳೂರು : ಎಂಸಿಎಫ್ ಕಾರ್ಖಾನೆ 1971 ರಲ್ಲಿ ಜಂಟಿ ಉದ್ಯಮವಾಗಿ ಅಸ್ತಿತ್ವಕ್ಕೆ ಬಂದು 55 ವರ್ಷಗಳ ಇತಿಹಾಸ ಹೊಂದಿದ್ದು ಕಳೆದ ಅಕ್ಟೋಬರ್ ತಿಂಗಳಿಂದ ಈ ಹೆಸರು ಮಾಯವಾಗಿದೆ ಎಂದು ಶಾಸಕ ಐವನ್ ಡಿಸೋಜಾ ತಿಳಿಸಿದರು. ಅವರು ತಮ್ಮ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, 15 ವರ್ಷ ಸರಕಾರಿ ಒಡೆತನದಲ್ಲಿದ್ದು 35 ವರ್ಷ ಖಾಸಗಿ ಒಡೆತನದಲ್ಲಿದ್ದರೂ "ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ” ಎಂಬ ಹೆಸರು ಬದಲಾಗಿರಲಿಲ್ಲ. ಅಲ್ಲೊಂದು ಅಲಿಕಿತ ಒಡಂಬಡಿಕೆ ಇತ್ತು. ಭೂಮಿ ನೀಡಿದ ಇಲ್ಲಿನ ಸ್ಥಳೀಯ ಜನರ ತ್ಯಾಗ, ಬಳಸುವ ಇಲ್ಲಿಯ ನದಿಗಳ ನೀರು, ಗಾಳಿ ಮತ್ತು ಪರಿಸರ ಮಾಲಿನ್ಯದ ಹೊರೆಹೊತ್ತ ಮಂಗಳೂರಿನ ಜನತೆ ತನ್ನ ಯುವ ಜನರಿಗೆ ಉದ್ಯೋಗ ಅವಕಾಶ ಮತ್ತು ಮಂಗಳೂರಿಗೆ ಹೆಮ್ಮೆಯ ವಿಚಾರವಾಗಿ ಎಲ್ಲವನ್ನೂ ಸಹಿಸಿ ಕೊಂಡಿದೆ ಎಂಸಿಎಫ್ 1976 ರಲ್ಲಿ ಅಮೋನಿಯಾ ಮತ್ತು ಯೂರಿಯಾ ಉತ್ಪಾದನೆ ಆರಂಭಿಸಿತು. ಸ್ಥಾಪನೆಯಾಗುವ ಕಾಲದಲ್ಲಿ ರಾಜ್ಯದಲ್ಲಿ ವಿದ್ಯುತ್ ಅಭಾವ ಇರಲಿಲ್ಲ. ಅದರೆ ನಂತರ ತೀರ ವಿದ್ಯುತ್ ಕ್ಷಾಮ ಉಂಟಾಗಿ ಉತ್ಪಾದನೆ ಕುಂಠಿತವಾಗಿ ನಷ್ಟ ಅನುಭವಿಸಿತು. ಮುಂದೆ ಸ್ವಂತ ವಿದ್ಯುತ್ ಸ್ಥಾವರ ಸ್ಥಾಪಿಸಿದರೂ ಬರಗಾಲದಿಂದ ಇಳಿದ ಬೇಡಿಕೆ, ಯಾಂತ್ರಿಕ ವೈಫಲ್ಯ, ನೀರಿನ ಅಭಾವ, ಮ್ಯಾನೇಜೆಂಟ್ ವಿಫಲತೆ, ಕೈಗಾರಿಕಾ ಅಶಾಂತಿ ಮುಂತಾದ ಕಾರಣಗಳಿಂದ ನಮ್ಮ ಮುಂದುವರಿದು ಕೊನೆಗೆ 1991 ರಲ್ಲಿ ಆಡಳಿತವನ್ನು UB ಕಂಪನಿಗೆ ನೀಡಲಾಯ್ತು. 1995 ರಲ್ಲಿ ಇದು BIFR ಗೆ ಹೋಗಿ 1996 ರಲ್ಲಿ sick unit ಎಂದು ಘೋಷಿತವಾಗಿ ಬ್ಯಾಂಕ್ ಗಳ ಸಹಕಾರದೊಂದಿಗೆ rehab ಆಯ್ತು. ಮುಂದೆ ಲಾಭದಾಯಕವಾಗಿ ನಡೆದ ಎಂಸಿಎಫ್, ಕಾರ್ಪೊರೇಟ್ ವ್ಯಾಪಾರದ ಫಲವಾಗಿ 2015 ರಲ್ಲಿ ಬಿರ್ಲಾ ಗುಂಪಿನ ಪಾಲಾಯ್ತು. Zuari, PPL ಮತ್ತು MCF ಒಡೆತನ ಹೊಂದಿದ್ದ Adventz ಗುಂಪು ಕಳೆದ ಅಕ್ಟೋಬರ್ ನಲ್ಲಿ ಎರಡು ಫರ್ಟಿಲೈಜರ್ ಕಂಪನಿಗಳನ್ನು ಪಾರಾದೀಪ್ ಫಾಸ್ಟೇಟ್ಸ್ ಜೊತೆ ವಿಲೀನ ಗೊಳಿಸಿತು. ಎಂಸಿಎಫ್ ಎಂಬ ಹೆಸರನ್ನು ತೆಗೆದು ಹಾಕಲಾಯಿತು ಎಂದು ಆಕ್ರೋಶ ಹೊರಹಾಕಿದರು.

35 ವರ್ಷ ಖಾಸಗಿ ಒಡೆತನದಲ್ಲಿದ್ದರೂ share capital ಮತ್ತು ಬ್ಯಾಂಕ್ ಸಾಲ ಹೊರತಾಗಿ ಯಾವುದೇ ಹೊಸ ಬಂಡವಾಳವನ್ನು ಮಂಗಳೂರು ಘಟಕಕ್ಕೆ ತಂದಿಲ್ಲ. ಎಂಸಿಎಫ್ ತನ್ನ ಸ್ವಂತ ಆದಾಯದಿಂದ ಮತ್ತು ಬ್ಯಾಂಕ್ ಸಹಕಾರದಿಂದ ಅಭಿವೃದ್ಧಿ ಹೊಂದಿದೆ. 90% ಉದ್ಯೋಗಗಳು ಸ್ಥಳೀಯರಿಗೆ ಮತ್ತು ರಾಜ್ಯದ ಯುವ ಜನತೆಗೆ ಮೀಸಲಾಗಿದ್ದವು. ಈಗ ಅದೆಲ್ಲವೂ ಬದಲಾಗಲಿದೆ. ಎಂಸಿಎಫ್ ಮಂಗಳೂರಿನ ಜೊತೆ ಐತಿಹಾಸಿಕ ಸಂಬಂಧವನ್ನು ಹೊಂದಿದೆ. ಇಲ್ಲಿನ ನೆಲದ ಅಸ್ಮಿತೆಯ ಗುರುತಾಗಿದೆ. ಅನೇಕ ತ್ಯಾಗಗಳ ಸಂಕೇತವಾಗಿದೆ. ಇಲ್ಲಿನ ಯುವ ಜನತೆಗೆ ಉದ್ಯೋಗ ನೀಡುವ ಸಂಸ್ಥೆಯಾಗಿದೆ. ಈ ಹೆಸರಿನ ಜೊತೆ ಮಂಗಳೂರಿನ ಜನತೆ 5 ದಶಕಗಳ ಅನ್ನೋನ್ಯ ಸಂಬಂಧವನ್ನು ಇಟ್ಟು ಕೊಂಡಿದ್ದಾರೆ. ಇಂತಹ ಹೆಸರನ್ನು ವಿಲೀನದ ಹೆಸರಲ್ಲಿ ರಾತ್ರೋರಾತ್ರಿ ಇತಿಹಾಸದ ಕಸದ ಬುಟ್ಟಿಗೆ ಎಸೆದದ್ದು ಎಂಸಿಎಫ್ ನೊಂದಿಗೆ ನಂಟಿರುವ ಪ್ರತಿಯೊಬ್ಬರಿಗೂ ಮಂಗಳೂರಿನ ಮತ್ತು ರಾಜ್ಯದ ಜನತೆಗೂ ತೀವು ನೋವುಂಟು ಮಾಡಿದೆ. 500 ಕ್ಕೂ ಹೆಚ್ಚು ಮಾಜಿ ಉದ್ಯೋಗಿಗಳು ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ ಒಂದಾಗಿ ಎಂಸಿಎಫ್ ಹೆಸರನ್ನು ಉಳಿಸುವ ಹೋರಾಟದ ಮಂಚೂಣಿಯಲ್ಲಿದ್ದಾರೆ. ಕೂಡಲೇ ಆಡಳಿತ ವರ್ಗ ಇಲ್ಲಿನ ಜನರ ಆಶೋತ್ತರಗಳಿಗೆ ಸ್ಪಂದಿಸಿ " "Mangalore Chemicals & Fertilisers" ಎಂಬ ಹೆಸರನ್ನು ನಾಮ ಫಲಕದಲ್ಲಿ ತಕ್ಷಣ ಮರು ಸ್ಥಾಪಿಸಬೇಕೆಂದು ಆಗ್ರಹಿಸುತ್ತಿದ್ದೇವೆ. ತಪ್ಪಿದಲ್ಲಿ ಈ ಹೋರಾಟವನ್ನು ಇನ್ನಷ್ಟು ತೀವ್ರ ಗೊಳಿಸಲಾಗುವುದು ಎಂದರು.

Category
ಕರಾವಳಿ ತರಂಗಿಣಿ