image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜ.17-18 ನಡೆಯಲಿರುವ ತಣ್ಣೀರುಬಾವಿ ಬ್ಲೂ ಪ್ಲಾಗ್ ಬೀಚ್ ಕಾರ್ಯಕ್ರಮ: ಮಂಗಳೂರು ನಗರ ಪೊಲೀಸ್‌ನಿಂದ ಸಂಚಾರಿ ಸೂಚನೆ

ಜ.17-18 ನಡೆಯಲಿರುವ ತಣ್ಣೀರುಬಾವಿ ಬ್ಲೂ ಪ್ಲಾಗ್ ಬೀಚ್ ಕಾರ್ಯಕ್ರಮ: ಮಂಗಳೂರು ನಗರ ಪೊಲೀಸ್‌ನಿಂದ ಸಂಚಾರಿ ಸೂಚನೆ

ಮಂಗಳೂರು: ಕರಾವಳಿ ಉತ್ಸವದ ಪ್ರಯುಕ್ತ ತಣ್ಣೀರುಬಾವಿ ಬ್ಲೂಪ್ಲಾಗ್ ಬೀಚ್‌ನಲ್ಲಿ ಜ.17, 18ರಂದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ. ಇದರಲ್ಲಿ ಗಣ್ಯರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿರುವುದರಿಂದ ಅಪರಾಹ್ನ 3ರ ಬಳಿಕ ಕೊಟ್ಟಾರ ಚೌಕಿ-ಪಣಂಬೂರು ರಾಷ್ಟ್ರೀಯ ಹೆದ್ದಾರಿ ಮತ್ತು ತಣ್ಣೀರುಬಾವಿ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರದಲ್ಲಿ ದಟ್ಟಣೆ ಉಂಟಾಗುವ ಸಾಧ್ಯತೆಗಳು ಇದೆ. ಈ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್‌ ಇಲಾಖೆಯು ಕೆಲವು ಸೂಚನೆಗಳನ್ನು ಹೊರಡಿಸಿದೆ.

ಕಾರ್ಯಕ್ರಮ ನಡೆಯುವ ವೇಳೆ ಕುದುರೆಮುಖ ಜಂಕ್ಷನ್‌ನಿಂದ ತಣ್ಣೀರುಬಾವಿ ಬೀಚ್‌ವರೆಗಿನ ರಸ್ತೆಯ ಎರಡು ಬದಿಗಳಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡಬಾರದು. ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರ ಅನುಕೂಲಕ್ಕೆ ಸುಲ್ತಾನ್ ಬತ್ತೇರಿಯಿಂದ ಫೇರಿಯನ್ನು ಅಥವಾ ಕೆಐಒಸಿಎಲ್‌ನಿಂದ ತಣ್ಣೀರುಬಾವಿಗೆ ಉಚಿತ ಸರಕಾರಿ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದೆ.

ನಿಗದಿಪಡಿಸಿರುವ ಪಾರ್ಕಿಂಗ್ ಸ್ಥಳಗಳು

1. ದೋಸ್ತ್ ಗೌಂಡ್

2. ಕಟ್ಟೆ ಗೌಂಡ್ ಪಾರ್ಕಿಂಗ್ ಸ್ಥಳ

3. ತಣ್ಣೀರುಬಾವಿ ಮಸೀದಿ ಎದುರು ಪಾರ್ಕಿಂಗ್ ಸ್ಥಳ

4. ರಫ್ತಾರ್ ಪಾರ್ಕಿಂಗ್

5. ತಣ್ಣೀರುಬಾವಿ ಬೀಚ್ ಪಾರ್ಕಿಂಗ್

6. ಡೆಲ್ಟಾ ಮೈದಾನ ಪಾರ್ಕಿಂಗ್

7. ಫಿಝಾ ಕ್ರಿಕೆಟ್ ಗೌಂಡ್ (ಹೊಟೇಲ್ ನಿತ್ಯಾಧರ ಮುಂಭಾಗದ ಪಾರ್ಕಿಂಗ್ ಮೈದಾನ)

8. ಎ.ಜೆ. ಶೆಟ್ಟಿ ಗೌಂಡ್

ಪಣಂಬೂರು ಬೀಚ್ 

ಪಣಂಬೂರು ಬೀಚ್‌ವರೆಗಿನ ರಸ್ತೆಯ ಎರಡು ಬದಿಗಳಲ್ಲಿ ಯಾವುದೇ ವಾಹನಗಳನ್ನು ಪಾರ್ಕ್‌ ಮಾಡುವಂತಿಲ್ಲ.

ನಿಗದಿ ಪಡಿಸಿರುವ ಪಾರ್ಕಿಂಗ್ ಸ್ಥಳಗಳು:

1. ಕೆ.ಕೆ ಗೇಟ್ ಟ್ರಕ್ ಯಾರ್ಡ್ ಪಾರ್ಕಿಂಗ್

2. ಪಣಂಬೂರು ಬೀಚ್ ಪಾರ್ಕಿಂಗ್

ವಿಶೇಷ ಸೂಚನೆ

ಕಾರ್ಯಕ್ರಮಗಳಿಗೆ ಬರುವ ಸಾರ್ವಜನಿಕರು ವಾಹನಗಳನ್ನು ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ನಿಲ್ಲಿಸಬೇಕು. ಕಾರ್ಯಕ್ರಮದ ಮಾರ್ಗದಲ್ಲಿ ವಾಹನ ನಿಲುಗಡೆಯ ಸೂಚನಾ ಫಲಕದ ಪ್ಲಾಕ್ಸ್‌ಗಳನ್ನು ಅಳವಡಿಸಿದ್ದು, ಮಾರ್ಗ ಸೂಚಿಯನ್ನು ಅನುಸರಿಸಬೇಕು ಎಂದು ಪೊಲೀಸ್‌ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ