ಮಂಗಳೂರು : ಹಿಂದೂ ಸಂಗಮ ಆಯೋಜನಾ ಸಮಿತಿ ಕಣ್ಣೂರು ನಗರ ಹಾಗೂ ಅರ್ಕುಳ ಗ್ರಾಮಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 18-01-2026ರ ಆದಿತ್ಯವಾರ ಅರ್ಕುಳ ವಸತಿಯಲ್ಲಿ ಹಿಂದು ಸಂಗಮ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದ ಅಂಗವಾಗಿ ಸಂಜೆ 3:30 ಗಂಟೆಗೆ ಅರ್ಕುಳ ನಾರಾಯಣಗುರು ಮಂದಿರದಿಂದ ಶ್ರೀ ಉಳ್ಳಾಕ್ಲು ಮಗ್ರಂತಾಯಿ ದೈವಸ್ಥಾನದ ಚೆಂಡಿನ ಗದ್ದೆಯವರೆಗೆ ವೈಭವದ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ ಕುಣಿತ ಭಜನೆ, ಚೆಂಡೆ ವಾದನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದಲ್ಲಿ ಶ್ರೀ ವಜ್ರನಾಭ ಶೆಟ್ಟಿ (ಧರ್ಮಾಧಿಕಾರಿ, ಅರ್ಕುಳಬೀಡು), ಪಿ. ಎಸ್. ಪ್ರಕಾಶ್ ( ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹಕ), ವಿವೇಕ್ ಕೋಟ್ಯಾನ್ ಕೊಡಕ್ಕಲ್ (ಅಧ್ಯಕ್ಷರು, ಹಿಂದೂ ಸಂಗಮ ಆಯೋಜನಾ ಸಮಿತಿ ಕಣ್ಣೂರು), ಸದಾನಂದ ಆಳ್ವ ಹಾಗೂ ಇತರ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ಸಂಜೆ 6:00 ಗಂಟೆಗೆ ಸಾಯಿಶಕ್ತಿ ಕಲಾಬಳಗ, ಉರ್ವಚಿಲಿಂಬಿ ಮಂಗಳೂರು ಇವರಿಂದ “ಜೋಡುಜೀಟಿಗೆ” ಎಂಬ ಅದ್ದೂರಿ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಆಯೋಜನಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.